LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

"ಸತತ ಪರಿಶ್ರಮ ಓದಿನೊಂದಿಗೆ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ"

ಇಂಡಿ : ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಸಂಸ್ಕಾರವನ್ನು ರೂಢಿಸಿಕೊಳ್ಳುವುದರ ಜೊತೆಗೆ ಸತತ ಪರಿಶ್ರಮ ಓದಿನೊಂದಿಗೆ ತಮ್ಮ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಿದೆ.” ಎಂದು ವ್ಯಕ್ತಿತ್ವ ವಿಕಸನ ತರಬೇತಿದಾರರು ವಿಜಯಪುರದ. ಗೌಡಪ್ಪ  ಬಿರಾದಾರ ಹೇಳಿದರು. 
ನಗರದ  ಜಿ.ಆರ್.ಗಾಂಧಿ ಕಲಾ,  ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ  ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೋಡುವ ಹಾಗೂ  ಸಮಾರೋಪ  ಕಾರ್ಯಕ್ರಮದಲ್ಲಿ ಮಾತನಾಡಿದರು 
 ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಪದವಿ ಹಂತ ಅತ್ಯಂತ ಪ್ರಮುಖವಾದದ್ದು, ಕಾಲೇಜುಗಳು ವೃತ್ತಿಗಾಗಿ ಮಾತ್ರ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸದೇ ಅವರಲ್ಲಿ ಒಳ್ಳೆಯ ಪ್ರವೃತ್ತಿ ಬೆಳೆಸುವ ಕೇಂದ್ರಗಳಾಗಬೇಕು ,  ಒಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಛಲ, ಬದ್ಧತೆ, ಪರಿಶ್ರಮ, ತಾಳ್ಮೆ, ಶಿಸ್ತು ಜೊತೆಗೆ ಪಾಲಕರ ಪ್ರೋತ್ಸಾಹ ಇದ್ದರೆ ಏನುಬೇಕಾದರೂ ಸಾಧಿಸಬಹುದು.” ಎಂದು ಹೇಳಿದರು.
 ಸಂಸ್ಥೆಯ ಅಧ್ಯಕ್ಷ ನೀಲಕಂಠಗೌಡ ಪಾಟೀಲ, ಐಶ್ವರ್ಯ ಕಕ್ಕಳಮೇಲಿ, ಲಕ್ಷ್ಮೀ ಕೆಂಗನಾಳ , ಪ್ರಾಚಾರ್ಯ ಶ್ರೀಶೈಲ ಸಣ್ಣಕ್ಕಿ ,  ಚಿದಾನಂದಗೌಡ ಬಿರಾದಾರ   ಜಯಪ್ರಸಾದ ಡಿ ಮಾತನಾಡಿದರು. 
ಐಚ್ಛಿಕ ಇಂಗ್ಲಿಷ್ ಹಾಗೂ ಅರ್ಥಶಾಸ್ತ್ರ ವಿಷಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಕೋಮಲ ಕೋಟೆ ಹಾಗೂ ಐಶ್ವರ್ಯ ಗುಬ್ಬೇವಾಡ ಇವರಿಗೆ ದಿ.ವಾಯ್.ಬಿ. ಕುಲಕರ್ಣಿ  ಹಾಗೂ ದಿ.ಶ್ರೀಮತಿ ಪುಷ್ಪಾತಾಯಿ ಕುಲಕರ್ಣಿ ಇವರ ಸ್ಮರಣಾರ್ಥವಾಗಿ ನಿರ್ದೇಶಕ ಬಾಪುಗೌಡ ಸಿ. ಪಾಟೀಲ ಇವರು ನಗದು ಬಹುಮಾನವನ್ನು ವಿತರಿಸಿದರು.
 ಸಂಸ್ಥೆಯ ಉಪಾಧ್ಯಕ್ಷ ಬಸವರಾಜ ತಾಂಬೆ,  ಸಾತಪ್ಪಾ ತೆನ್ನಳ್ಳಿ,  ಸಚೀನಕುಮಾರ ಗಾಂಧಿ, ವರ್ಧನ ಧೋಶಿ, ಬಾಪುರಾಯ ಪಾಟೀಲ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಕುಮಾರಿ ಸುಶ್ಮೀತಾ ಬಿರಾದಾರ ವೇದಿಕೆಯ ಮೇಲಿದ್ದರು. 
 ಆನಂದ ನಡವಿನಮನಿ,  ವಿಶ್ವಾಸ ಕೋರವಾರ ಪಿ.ಕೆ.ರಾಠೋಡ, ಸುರೇಂದ್ರ ಕೆ, ಎಸ್.ಬಿ.ಜಾಧವ ಸಿ.ಎಸ್.ಬಿರಾದಾರ, ಶ್ರೀಕಾಂತ ರಾಠೋಡ, ಗ್ರಂಥಪಾಲಕ ಆರ್.ಪಿ.ಇಂಗನಾಳ ಮತ್ತಿತರಿದ್ದರು.
   

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್