LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಪರೀಕ್ಷೆ ಫಲಿತಾಂಶ ಹಗರಣ ಖಂಡಿಸುತ್ತಾ ಕ್ರಮ ಕೈಗೊಳ್ಳಲು ಎಬಿವಿಪಿ ಆಗ್ರಹ.

ಬಳ್ಳಾರಿ, ಜೂ.12 ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಭ್ರಷ್ಟಾಚಾರಿಗಳ ತವರು ಮನೆಯಾಗಿದೆ. ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ ನಂತರವೂ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಂದ ಹಣ ಪಡೆದು, ಅವರನ್ನು ಉತ್ತೀರ್ಣಗೊಳಿಸುತ್ತಿರುವುದು ಕಂಡುಬಂದಿರುತ್ತದೆ ಎಂದು ಎಬಿವಿಪಿ ಆರೋಪಿಸಿದೆ.
ಈ ಹಗರಣದಲ್ಲಿ ರಿಯಾಜ್, ವೆಂಕಟೇಶ್ ವನದುರ್ಗ, ಯಲ್ಲಾಲಿಂಗ, ಚಂದ್ರಮೋಹನ್, ಉಮೇಶ್ ಹಾಗೂ ಇತರರು ಒಳಗೊಂಡಂತೆ ಪರೀಕ್ಷೆ ಫಲಿತಾಂಶ ಬಿಡುಗಡೆ ಮಾಡುವ ಸಮಯದಲ್ಲಿ ಪಿ.ಜಿ. ಅಥವಾ ಡಿಗ್ರಿ ವಿದ್ಯಾರ್ಥಿಗಳ ಕೋಡಿಂಗ್-ಡಿಕೋಡಿಂಗ್ ಅಂಕಗಳನ್ನು ಅಂಕಗಳನ್ನು ನಮೂದಿಸುವುದು ಇವರೇ ನೋಡಿಕೊಳ್ಳುತ್ತಾರೆ. ಈ ಅವ್ಯವಹಾರವು ತುಂಬಾ ದಿನಗಳಿಂದ ನಡೆಯುತ್ತಿದ್ದು, ಈಗ ಸಾಕ್ಷ್ಯಾಧಾರಗಳ ಸಮೇತ ಬೆಳಕಿಗೆ ಬಂದಿದೆ. ವೆಂಕಟೇಶ ವನದುರ್ಗ, ರಿಯಾಜ್ ಇವರನ್ನೊಳಗೊಂಡಂತೆ ಅನುತ್ತೀರ್ಣರಾದ ವಿದ್ಯಾರ್ಥಿಗಳಿಂದ ಹಣ ಪಡೆದು ಉತ್ತೀರ್ಣಗೊಳಿಸಿದ್ದಾರೆ. ಆದರೆ ಇವರು ಮಾಡುತ್ತಿರುವ ಈ ಅವ್ಯವಹಾರದಿಂದ ಬುದ್ಧಿವಂತ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಹೀಗೆ ಹಣದಿಂದ ಪದವಿಯನ್ನು ಪಡೆದುಕೊಳ್ಳುವುದಾದರೆ ದಿನವಿಡೀ ಕಾಲೇಜುಗಳಿಗೆ ಬಂದು ಪಾಠ ಕೇಳಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಗತಿ ಏನು?
ಮುಂದುವರೆದು, ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಅಧಿಕಾರಿಗಳು ಈವರೆಗೂ ಪರೀಕ್ಷಾ ಕಾರ್ಯಗಳಿಗೆ ಇವರುಗಳನ್ನೇ ನೇಮಿಸಿರುತ್ತಾರೆ. ಹಾಗಾಗಿ ಈ ವ್ಯವಹಾರದಲ್ಲಿ ಭಾಗಿಗಳಾದ ಎಲ್ಲಾ ಭ್ರಷ್ಟಾಚಾರಿಗಳನ್ನು ಕೂಡಲೇ ಅಮಾನತ್ತುಗೊಳಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮಾನ್ಯ ಕುಲಪತಿಗಳು, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ ಇವರಿಗೆ ಮನವಿ ಸಲಿಸಿ ಅಭಾವಿಪ ಬಳ್ಳಾರಿ ಆಗ್ರಹಿಸಲಾಯಿತು. 
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಟಿ.ಭರತ್, ಬಳ್ಳಾರಿ ಜಿಲ್ಲಾ ಸಂಚಾಲಕರು ಕೆ.ದಿಲೀಪ್, ವಿಜಯನಗರ ಜಿಲ್ಲಾ ಸಂಚಾಲಕರು ಧನುಷ್ ಕುಮಾರ್, ಕೊಪ್ಪಳ ಜಿಲ್ಲಾ ಸಂಚಾಲಕರು ಹಮ್ಮಿಗೇಶ ಹಾಗೂ ದರ್ಶನ್, ಮಾರುತಿ, ಶ್ರೀಕಾಂತ್, ಕೃಷ್ಣ, ಶರತ್, ಇ.ಟಿ. ವಿನಾಯಕ್, ಕಿರಣ್ ಮುಂಡರಗಿ, ಅನುಶ್ರೀ, ಮಹೇಶ, ಸುರೇಶ, ರಘು ಸಂತೋಷ, ಸಪ್ತಗಿರಿ, ಕಾರ್ತಿಕ ಹಾಗೂ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಕ್ತರ ಸಾಮಾಜಿಕ ಸೇವೆ ಮತ್ತಷ್ಟು ಪ್ರೇರಣೆ-ಹುಮ್ಮಸ್ಸು ನೀಡಿದೆ : ಮಲ್ಲಿಕಾರ್ಜುನ ಶ್ರೀಸಂಚಾರ ಸುಗಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಾಕೀತು ಭ್ರಷ್ಟಾಚಾರ ಎಸಗಿದ ಸಚಿವರನ್ನು ಕೈಬಿಡಲು ಆಗ್ರಹಿಸಿ  ಬಿಜೆಪಿವತಿಯಿಂದ ಪ್ರತಿಭಟನೆ ಶಾಶ್ವತ ಪುನರ್ವಸತಿ ಹಾಗೂ ಕಾನೂನುಬದ್ಧ ಎಲ್ಲಾ ಹಕ್ಕು-ಸೌಲಭ್ಯಗಳಿಗಾಗಿ ಮೊಳವಾಡ ಗ್ರಾಮಸ್ಥರ ಮನವಿಕೃಷ್ಣಾ ಮೇಲ್ದಂಡೆ ನಿರಾಶ್ರಿತರಿಗೆ KAS ನೇಮಕಾತಿಯಲ್ಲಿ ಮೀಸಲಾತಿ ನಿರಾಕರಣೆ - ಸರ್ಕಾರದ ವಿರುದ್ಧ ಕಿಸಾನ ಸಂಘ ಆಕ್ರೋಶಬಳ್ಳಾರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು: ಬಿಜೆಪಿ ರೈತ ಮೋರ್ಚಾ ಅಹೋರಾತ್ರಿ ಧರಣಿಆಗಸ್ಟ್‌ 10ರೊಳಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಿ: ತುಂಗಭದ್ರಾ ರೈತ ಸಂಘದ ಆಗ್ರಹವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ: 200 ಆಟೋಗಳೊಂದಿಗೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತ