LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಆಸಿಫ-ಅಲಿಖಾನ್ ನಡುವೆ ಹಣಕಾಸಿನ ಗುದ್ದಾಟ

ಬಳ್ಳಾರಿ, ಫೆ.04. ನಗರದಲ್ಲಿ  ರಾಜಕೀಯ ಪ್ರತಿನಿಧಿಗಳ ಬೆಂಬಲಿಗರ ನಡುವೆ ಹಣಕಾಸು, ಪ್ರತಿಷ್ಟೆಯ ಗುದ್ದಾಟ ನಡೆದಿದೆ.

ಮಾಜಿ ಸಚಿವ, ಗ್ರಾಮೀಣ ಶಾಸಕ ಬಿ.ನಾಗೇಂದ್ರ ಮತ್ತು ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ನಡುವೆ ಮೊನ್ನೆ ಸದನದಲ್ಲಿ ವಾಗ್ವಾದ ನಡೆದಿದ್ದರೆ. ಇತ್ತ ಬಳ್ಳಾರಿ ನಗರದಲ್ಲಿ ಇವರಿಬ್ವರ ಬೆಂಲಿಗರ ನಡುವೆ ಗುದ್ದಾಟ ನಡೆದಿದೆ.

ನಾಗೇಂದ್ರ ಅವರ  ಬೆಂಬಲಿಗ ಕಾರ್ಪೋರೆಟರ್ ಅಸಿಫ್ ಮತ್ತು ಜನಾರ್ದನ ರೆಡ್ಡಿ ಅವರ ಆಪ್ತ ಅಲಿ ಖಾನ್ ಮಧ್ಯೆ ಕಳೆದ ಮೂರು ನಾಲ್ಕು ತಿಂಗಳಿಂದ ನಡೆಯುತ್ತಿರೋ  ಮುಸುಕಿನ ಗುದ್ದಾಟ ಈಗ ಬಯಲಿಗೆ ಬಿದ್ದಿದೆ ಎನ್ನಲಾಗುತ್ತಿದೆ.

ಅಲಿಖಾನ್   ಕಳೆದ ಶುಕ್ರವಾರ ಟ್ರಸ್ಟ್ ಕಚೇರಿಗೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ದಾಂಧಲೆ ಮಾಡಿದ್ದಾರಂತೆ.

ಯಾಕೆಂದು ಆಸಿಫ್ನನ್ನು ಕೇಳಿದರೆ ನಾನುರೈಸ್ ಆಫ್ ಹೂಮ್ಯಾನಿಟಿ ಎನ್ನುವ ಟ್ರಸ್ಟ್ ಗೆ  ಸಂಸ್ಥೆಯವರು ಅಸೀಫ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ.  ಇದನ್ನು ಸಹಿಸದ ಅಲಿಖಾನ್ ವಿವಿಧ ಸಾಮಾಜಿಕ ಜಾಲತಾಣದ ಗ್ರೂಪ್ ಗಳಲ್ಲಿ ಅವಹೇಳನ ಬರಹಗಳ ಮೂಲಕ ಅವಮಾನ  ಮಾಡಿದ್ದಾರೆಂದು, ಅಲ್ಲದೆ ತಾವು ಇಲ್ಲದಾಗ ಕಚೇರಿಗೆ ಬಂದು ಅವಹೇಳನಕಾರಿಯಾಗಿ ಮಾತಾಡಿ, ಜೀವ ಬೆದರಿಕೆ ಹಾಕಿದ್ದಾನೆಂದಯ ಅಲಿಖಾನ್ ವಿರುದ್ಧ ಅಸೀಫ್ ಕೌಲಬಜಾರ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ನಾನು ಆತನಿಗೆ ಯಾವ ಸಾಲ ಇಲ್ಲ. ಇದ್ದರೆ ದಾಖಲೆ ಕೊಡಲಿ ಎಂದಿದ್ದಾರೆ.

ಹಣ ಕೇಳಲು ಬಂದ ತಮ್ಮ ಬೆಂಬಲಿಗನ೮ಗೆ ಹಲ್ಲೆ ಮಾಡಿದ್ದಾರೆಂದು ಅಲಿಖಾನ್ ದೂರು ಕೊಟ್ಟಿದ್ದಾರೆ.ಅಸೀಫ್ ಗೆ ಹಣ ಕೊಟ್ಟಿರೋ ದಾಖಲಾತಿ ಮತ್ತು ಚೆಕ್ ಪ್ರದರ್ಶನ ಮಾಡಿದ ಅಲಿಖಾನ್. 2 ಕೋಟಿ ಆರಂಭದಲ್ಲಿ ಕೊಟ್ಟಿದ್ದು ಹಂತ ಹಂತವಾಗಿ ಹಣ ವಾಪಸ್ ಕೊಟ್ಟಿದ್ದು 70 ಲಕ್ಷ ಕೊಡಬೇಕಿದೆ. ಹಣ ಕೊಡುವುದಾಗಿ ಹೇಳಿದಾಗ ಅಸೀಫ್ ಕಚೇರಿಗೆ ಹುಡುಗನನ್ನು ಕಳುಹಿಸಿದ್ದೇವೆ. ಹಣ ಕೊಡದೆ ನಮ್ಮ ಹುಡುಗನ ಮೇಲೆಯೇ ಹಲ್ಲೆ ಮಾಡಿದ್ದಾರೆ. ಅಸೀಫ್ ನೀಡಿದ ಚೆಕ್ ಕಸಿದುಕೊಂಡು ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಲು ಹೋಗಿದ್ದಾಗ ಗಲಾಟೆ ಮಾಡಿದ್ದೇವೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.ಅಸೀಫ್ ಕಚೇರಿ ಸಿಸಿ ಟಿವಿ ಪರಿಶೀಲಿಸಿ ನಾವು ಯಾವುದೇ ಹಲ್ಲೆ ಮಾಡಿಲ್ಲ ಕಳೆದ ಮೂರು ವರ್ಷದ ಹಿಂದೆ ಮೇಯರ್ ಚುನಾವಣೆ ವೇಳೆ 2 ಕೋಟಿ ಸಾಲ ಕೊಟ್ಟಿದ್ದೆ. ಕಮ್ಯೂನಿಟಿಯಲ್ಲಿ ಒಬ್ರು ಮೇಯರ್ ಅಗ್ತರೆ ಎಂದು ಹಣ ಕೊಟ್ಟಿದ್ದೇ ಮೇಯರ್ ಅದ್ರೇ ಹಣ ಮಾಫೀ ( ಕೊಡೋದು ಬೇಡ) ಎಂದು ಹೇಳಿದ್ದೆ. ಮೇಯರ್ ಅಗಲಿಲ್ಲ ಹಣ ವಾಪಸ್ಸು ಕೊಡಲಿಲ್ಲ. ನಂತರ ಹಂತ ಹಂತವಾಗಿ ಒಂದು ಕೋಟಿ ಕೊಟ್ಟಿದ್ರು. ನಂತರ ಸೆಟಲ್ಮೆಂಟ್ ಮಾಡಿ 1.10 ಕೋಟಿ ಬಾಂಡ್ ಬರೆಸಿ ಚೆಕ್ ಕೊಟ್ಟಿದ್ರು. ಈವರೆಗೂ 40 ಲಕ್ಷ ಕೊಟ್ಟಿದ್ದಾನೆ. ಉಳಿದ 70 ಲಕ್ಷ ಹಣ ಇನ್ನೂ ಕೊಟ್ಟಿಲ್ಲ. ಅ ಹಣ ಕೇಳ್ತಿರೋದಕ್ಕೆ ಇಷ್ಟೇಲ್ಲ ಸುಳ್ಳಿನ ಕತೆ ಕಟ್ಟುತ್ತಿದ್ದಾರೆ ಎಂದಿದ್ದಾರೆ..

ಹಣದ ವಿಚಾರಕ್ಕೆ ನಡೆದ ಗಲಾಟೆ ಇದೀಗ ವಯಕ್ತಿಕ ನಿಂದನೆವರೆಗೂ ಹೋಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್