LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಜನಗಣತಿಯ ದತ್ತಾಂಶ ಅತೀ ಅವಶ್ಯ : ಪ್ರಕಾಶ ಹೊಳೆಪ್ಪಗೋಳ

ರಾಮದುರ್ಗ: ನಗರದ ಹೊರವಲಯದಲ್ಲಿರುವ ಶ್ರೀಮತಿ ಐ.ಎಸ್. ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಭಾರತದ ರಾಷ್ಟ್ರೀಯ ಜನಗಣತಿ ೨೦೨೭ ನೇದ್ದರ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ, ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರು ಮಾತನಾಡಿ, ದಿನಾಂಕ: ೦೪.೦೪.೨೦೨೬ ರಿಂದ ದಿನಾಂಕ: ೧೨.೦೪.೨೦೨೬ ರ ವರೆಗೆ ಒಟ್ಟು ೦೯ ದಿನಗಳ ಕಾಲ ನಡೆಯಲಿರುವ ಈ ತರಬೇತಿ ಕಾರ್ಯಗಾರದಲ್ಲಿ ರಾಮದುರ್ಗ ಗ್ರಾಮೀಣ ವ್ಯಾಪ್ತಿಯ ೪೫೧ ಗಣತಿದಾರರು ಹಾಗೂ ೮೦ ಮೇಲ್ವಿಚಾರರಕರು ಮತ್ತು ರಾಮದುರ್ಗ ನಗರ ವ್ಯಾಪ್ತಿಯ ೭೪ ಗಣತಿದಾರರು ಹಾಗೂ ೧೩ ಮೇಲ್ವಿಚಾರಕರು ಸೇರಿ, ಒಟ್ಟು ೭೦೫ ಗಣತಿದಾರರಿಗೆ ಹಾಗೂ ೯೩ ಜನ ಮೇಲ್ವಿಚಾರಕರು ತರಬೇತಿಯನ್ನು ಪಡೆಯುತ್ತಿದ್ದು, ಮಾಸ್ಟರ್ ಟ್ರೇನರ್‌ರವರ ಮೂಲಕ ಉತ್ತಮ ತರಬೇತಿಯನ್ನು ಪಡೆದುಕೊಂಡು, ೨೦೨೭ರ ಭಾರತದ ಜನಗಣತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕರೆ ನೀಡಿದರು.
ಅಲ್ಲದೇ ಭಾರತದ ಭವಿಷ್ಯದ ೧೦ ವಷಗಳ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಈ ಜನಗಣತಿಯ ದತ್ತಾಂಶವು ಅತೀ ಅವಶ್ಯವಿರುವ ಕಾರಣ, ಯಾವುದೇ ಮನೆಗಳು/ಕುಟುಂಬಗಳು ಬಿಟ್ಟು ಹೋಗದಂತೆ ಜಾಗೃತಿವಹಿಸಿ ಗಣತಿ ಕಾರ್ಯವನ್ನು ನಿರ್ವಹಿಸುವಂತೆ ತಿಳಿಸಿದರು.
ರಾಮದುರ್ಗ ಪುರಸಭೆಯ ಮುಖ್ಯಾಧಿಕಾರಿ ಐ.ಕೆ.ಗುಡದಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾಸ್ಟರ್ ಟ್ರೇನರ್‌ಗಳಾದ ಎ.ವಿ.ಪಾಟೀಲ, ಸುರೇಶ ಅಣ್ಣಿಗೇರಿ, ಡಾ| ಪ್ರಕಾಶ ತೆಗ್ಗಿಹಳ್ಳಿ, ಮಂಜುಳಾ, ಎಂ.ಎನ್. ಭಜಂತ್ರಿ ಹಾಗೂ ಎಸ್.ಐ. ಹೊಸೂರ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಮಹೇಶ ಟೆಂಗಿನಕಾಯಿ ನಿರೂಪಿಸಿ, ವಂದಿಸಿದರು.
ಫೋಟೊ ಶೀರ್ಷಿಕೆ: ೦೫ಆರ್‌ಎಂಡಿ.೨
ರಾಮದುರ್ಗ: ಐ.ಎಸ್. ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ತರಬೇತಿ ಕಾರ್ಯಕ್ರಮವನ್ನು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಉದ್ಘಾಟಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್