LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

"ಸಂಭ್ರಮದಿಂದ ಜರುಗಿದ ಚಿಂತನ-ಮಂಥನ ಕಾರ್ಯಕ್ರಮದ ೫೦ನೇ ಸುವರ್ಣ ಸಂಚಿಕೆ"

ಮೂಡಲಗಿ : ಪ್ರತಿ ತಿಂಗಳು ಹುಣ್ಣಿಮೆಯ ದಿನದಂದು ನಡೆಯುವ ಬೆಳದಿಂಗಳ ಸಾಹಿತ್ಯ ಚಿಂತನ ಮಂಥನ ಕಾರ್ಯಕ್ರಮವು ತನ್ನ ೫೦ನೇ ಸುವರ್ಣ ಸಂಚಿಕೆಯನ್ನು ಪೂರೈಸುತ್ತಿರುವುದು ಸಾಹಿತ್ಯ ಲೋಕಕ್ಕೆ ಸಲ್ಲುವ ಗೌರವವಾಗಿದೆ ಎಂದು ಸಾಹಿತಿ ಡಾ.ವಿ.ಎಸ್.ಮಾಳಿ ಹೇಳಿದರು.
ಶುಕ್ರವಾರದಂದು ಪಟ್ಟಣದ ಶ್ರೀ ಸಾಯಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿ?ತ್ತು ಮೂಡಲಗಿ ತಾಲ್ಲೂಕು ಘಟಕ, ಜ್ಞಾನದೀಪ್ತಿ ಸಾಹಿತ್ಯ ಪ್ರತಿ?ನ ಮೂಡಲಗಿ ಹಾಗೂ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಸಹಯೋಗದಲ್ಲಿ ಜರುಗಿದ ಬೆಳದಿಂಗಳ ಸಾಹಿತ್ಯ ಚಿಂತನ-ಮಂಥನ ಕಾರ್ಯಕ್ರಮದ ೫೦ನೇ ’ಸುವರ್ಣ ಸಂಚಿಕೆ’ ಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ’ಬುದ್ಧ ಬಸವ ಸಮನ್ವಯದ ವಿವೇಚನೆ’ ಕುರಿತು ಅನುಭಾವ ನುಡಿಗಳನ್ನಾಡುತ್ತ ವಿಶೇ? ಉಪನ್ಯಾಸ ನೀಡಿದರು. ಮೂಡಲಗಿಯ ನೆಲದಲ್ಲಿ ಕಳೆದ ನಾಲ್ಕು ವರು?ಗಳಿಂದ ಡಾ.ಸಂಜಯ ಶಿಂಧಿಹಟ್ಟಿಯವರ ನೇತೃತ್ವದಲ್ಲಿ ಬೆಳದಿಂಗಳ ಸಾಹಿತ್ಯ ಚಿಂತನ ಮಂಥನ ಕಾರ್ಯಕ್ರಮ ಯಶಸ್ವಿಯಾಗಿ ಸಾಗಿ ಬರುತ್ತಿದ್ದು, ಶತಕ ಪೂರೈಸಲಿ ಎಂದು ಹಾರೈಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಅಥಣಿಯ ಮೋಟಗಿ ಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಯ ಉಪಮಹಾಪೌರರಾದ ಹಣಮಂತ ಕೊಂಗಾಲಿ ಮಾತನಾಡಿ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಮೂಡಲಗಿಯಲ್ಲಿ ಸರ್ವಧರ್ಮಗಳ ಸಮನ್ವಯದ ಪರಿಸರವಿದೆ. ವಿಶೇ? ಉಪನ್ಯಾಸಗಳ ಮೂಲಕ ಸಾಹಿತ್ಯ, ಸಂಗೀತ, ಕಲೆ, ಆಧ್ಯಾತದ ಕುರಿತು ವೈವಿಧ್ಯ ವಿ?ಯಗಳ ಕುರಿತ ಚಿಂತನ-ಮಂಥನ ಕಾರ್ಯಕ್ರಮ ಅನೇಕ ಯುವ ಕವಿ ಸಾಹಿತಿಗಳಿಗೆ ಪ್ರೇರಣೆಯಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಯುವಕರು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದರು.
ಗುಲ್ಬರ್ಗಾ ಕಾರ್ಮಿಕ ಆಯುಕ್ತರಾದ ವೆಂಕಟೇಶ ಶಿಂಧಿಹಟ್ಟಿ ಪ್ರಾಸ್ತಾವಿಕವಾಗಿ ಮಾತನಾಡುತ್ತ, ಒಂದು ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಅದರ ಹಿಂದೆ ಸಮರ್ಥ ನಾಯಕತ್ವ ಮತ್ತು ನಿಸ್ವಾರ್ಥ ಸೇವಾ ಮನೋಭಾವವಿರಬೇಕು. ಬೆಳದಿಂಗಳ ಸಾಹಿತ್ಯ ಚಿಂತನ ಮಂಥನ ಕಾರ್ಯಕ್ರಮವು ಇಂದು ೫೦ನೇ ಸುವರ್ಣ ಸಂಚಿಕೆಯ ಸಂಭ್ರಮಕ್ಕೆ ಬಂದು ನಿಂತಿದೆ ಎಂದರೆ, ಅದಕ್ಕೆ ಪ್ರಮುಖ ಕಾರಣ ನಮ್ಮ ತಂದೆ ಹಾಗೂ ಅನೇಕ ಗುರುಗಳ ಮಾರ್ಗದರ್ಶನ. ಈ ಸಾಹಿತ್ಯ ಪಯಣವನ್ನು ಮುನ್ನಡೆಸುತ್ತಿರುವ ಸಾರಥಿಗಳಾದ ಸಹೋದರ ಡಾ. ಸಂಜಯ ಆದಿಯಾಗಿ, ಕ.ಸಾ.ಪ ಹಾಗೂ ಜ್ಞಾನದೀಪ್ತಿ ಸಾಹಿತ್ಯ ಪ್ರತಿ?ನದ ಸರ್ವ ಪದಾಧಿಕಾರಿಗಳ ಶ್ರಮ, ಸಾಹಿತ್ಯದ ಮೇಲಿನ ಅವರ ಅಪಾರ ಪ್ರೀತಿ ತೋರಿಸುತ್ತದೆ ಎಂದು ಶ್ಲಾಘಿಸಿದರು. 
ವೇದಿಕೆಯಲ್ಲಿ ಬೆಳದಿಂಗಳ ಸಾಹಿತ್ಯ ಚಿಂತನ-ಮಂಥನ ಕಾರ್ಯಕ್ರಮ ೫೦ ಯಶಸ್ವಿ ಸಂಚಿಕೆ ಪೂರೈಸಿದ ಕುರಿತು ಲೇಖನ ಹೊತ್ತ "ಹಸಿರುಕ್ರಾಂತಿ ಪತ್ರಿಕೆಯ ವಿಶೇ? ಪುರವಣಿಗೆ"ಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತ್ಯ ಸಾಯಿ ಸಮಿತಿಯ ಸಂಚಾಲಕರಾದ ಹಣಮಂತ ಸೊರಗಾಂವಿಯವರು ವಹಿಸಿದ್ದರು. ಕಸಾಪ ಮೂಡಲಗಿ ಹಾಗೂ ಜ್ಞಾನದೀಪ್ತಿ ಸಾಹಿತ್ಯ ಪ್ರತಿ?ನ ಅಧ್ಯಕ್ಷ ಡಾ.ಸಂಜಯ ಶಿಂಧಿಹಟ್ಟಿ ಸ್ವಾಗತಿಸಿ ಚಿಂತನ-ಮಂಥನ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಸರ್ವರನ್ನು ನೆನೆದು ಧನ್ಯವಾದಗಳನ್ನು ತಿಳಿಸಿದರು.
ಈ ಸಂಧರ್ಭದಲ್ಲಿ ವಿವಿಧ ತಾಲೂಕಾ ಕಸಾಪ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸಾಹಿತಿಗಳಾದ ಬಾಲಶೇಖರ ಬಂದಿ, ಸಂಗಮೇಶ ಗುಜಗೊಂಡ, ಎಸ್.ಎಮ್.ಕಮದಾಳ, ಬಿ.ವಾಯ್.ಶಿವಾಪೂರ, ಬಿ.ಆರ್.ತರಕಾರ, ಎ.ಎಚ್.ಒಂಟಗೋಡಿ ಸೇರಿದಂತೆ ಅನೇಕ ಶಿಕ್ಷಕರು, ನಿವೃತ ಉಪನ್ಯಾಸಕರು, ಸಾಹಿತಿಗಳು, ಕನ್ನಡಾಭಿಮಾನಿಗಳು, ಕಸಾಪ ಮೂಡಲಗಿ ಹಾಗೂ ಜ್ಞಾನದೀಪ್ತಿ ಸಾಹಿತ್ಯ ಪ್ರತಿ?ನದ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್