LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಬಸವೇಶ್ವರ ಅರ್ಬನ ಸೊಸಾಯಿಟಿಗೆ ೫.೩೫ ಕೋಟಿ ರೂ ಲಾಭ : ಮಲ್ಲಿಕಾರ್ಜುನ ಢವಳೇಶ್ವರ 

ಮೂಡಲಗಿ : ಪಟ್ಟಣದ ಬಸವೇಶ್ವರ ಅರ್ಬನ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯೂ ೨೦೨೫-೨೬ ನೇ ಆರ್ಥಿಕ ವ?ದ ಅಂತ್ಯಕ್ಕೆ ೫.೩೫ ಕೋಟಿ ರೂ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಢವಳೇಶ್ವರ ಹೇಳಿದರು.
ಗುರುವಾರದಂದು ಬಸವೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಮೂಡಲಗಿಯ ಪ್ರಧಾನ ಕಛೇರಿಯಲ್ಲಿ ಜರುಗಿದ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ೬.೯೦ ಕೋಟಿ ರೂ ಶೇರು ಬಂಡವಾಳ, ೨೭೪.೩೬ ಕೋಟಿ ರೂ ಠೇವುಗಳು, ೨೭.೨೧ ಕೋಟಿ ರೂ ನಿಧಿಗಳನ್ನು ಹೊಂದಿ, ವಿವಿಧ ಬ್ಯಾಂಕುಗಳಲ್ಲಿ ಠೇವಣಿದಾರರ ಭದ್ರತೆಗಾಗಿ ೮೧.೩೪ ಕೋಟಿ ರೂ ಗುಂತಾವಣಿ ಮಾಡಿದೆ. ವಿವಿಧ ಕ್ಷೇತ್ರಕ್ಕೆ ೨೦೮.೩೪ ಕೋಟಿ ರೂ ಸಾಲ ವಿತರಿಸಿ, ೩೨೧.೬೭ ಕೋಟಿ ರೂ ದುಡಿಯುವ ಬಂಡವಾಳದೊಂದಿಗೆ, ೧೫೪೪ ಕೋಟಿ ರೂ ವಾರ್ಷಿಕ ವಹಿವಾಟು ಹೊಂದಿದೆ ಎಂದರು.
ಸೊಸಾಯಿಟಿಯ ನಿರ್ದೇಶಕರಾದ ಬಸವರಾಜ ತೇಲಿಯವರು ಮಾತನಾಡಿ, ಸೊಸಾಯಿಟಿಯು ೧೮ ಶಾಖೆಗಳನ್ನು ಹೊಂದಿದ್ದು, ಸಮಾಜದ ವಿವಿಧ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸುತ್ತಿರುವ ಮಹನೀಯರನ್ನು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಸತ್ಕರಿಸುವ ಕಾರ್ಯವಾಗುತ್ತಿದೆ. ಸಂಘವು ಪ್ರಗತಿ ಪಥದತ್ತ ಸಾಗಲು ಸಹಕರಿಸಿದ ಆಡಳಿತ ಮಂಡಳಿ, ಶೇರುದಾರರು, ಠೇವುದಾರರು, ಸಾಲ ಮರುಪಾವತಿ ಮಾಡಿದ ಸದಸ್ಯರು ಸೇರಿದಂತೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳನ್ನು ತಿಳಿಸಿದರು.
ಸಭೆಯಲ್ಲಿ ಸೊಸಾಯಿಟಿ ಉಪಾಧ್ಯಕ್ಷ ರವೀಂದ್ರ ಭಾಗೋಜಿ, ನಿರ್ದೆಶಕರಾದ ಗಿರೀಶ ಢವಳೇಶ್ವರ, ಚನ್ನಬಸು ಬಡ್ಡಿ, ಶ್ರೀಕಾಂತ ಹಿರೇಮಠ, ಶ್ರೀಶೈಲ ಮದಗಣ್ಣವರ, ದೇವಪ್ಪ ಕೌಜಲಗಿ, ಕುಸುಮಾ ಆ. ತೇಲಿ, ಸುಮಿತ್ರಾ ಪ್ರ. ಶೇಡಬಾಳ, ಮಹಾದೇವಿ ಶಂ. ಹಿರೇಮಠ, ಲಕ್ಷ್ಮಣ ತೇಳಗಡೆ, ರಾಘವೇಂದ್ರ ಕೆಸಪನಟ್ಟಿ, ಪ್ರಧಾನ ವ್ಯವಸ್ಥಾಪಕರಾದ ಬಸವರಾಜ ಬಡಿಗೇರ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್