LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಅದ್ದೂರಿಯಾಗಿ ಜರುಗಿದ 'ಕೋಣ ಬಿಡುವ' ಕಾರ್ಯಕ್ರಮ

ಸಂಕೇಶ್ವರ : ಮುಂಬರುವ 2027ರಲ್ಲಿ ಜರುಗಲಿರುವ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರೆಯ ಅಂಗವಾಗಿ ಸಾಂಪ್ರದಾಯಿಕ 'ಕೋಣ ಬಿಡುವ' ಕಾರ್ಯಕ್ರಮ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.

ಐತಿಹಾಸಿಕ ಸಂಕೇಶ್ವರ ಮಹಾಲಕ್ಷ್ಮಿ ದೇವಿ ಜಾತ್ರಾಯು ಪ್ರತಿ 11 ವರ್ಷಗಳಿಗೊಮ್ಮೆ ಅದ್ದೂರಿಯಾಗಿ ಜರುಗುತ್ತದೆ ಇದರ ಪೂರ್ವದಲ್ಲಿ ಜಾತ್ರೆಗೆ ಕೋಣ ಬಿಡುವ ಪ್ರತೀಕವಿದ್ದು, ಅದರಂತೆ ಹಕ್ಕುದಾರರಾದ ಸಂತೋಷ ಹವಾಲ್ದಾರ್ ಮನೆಯಲ್ಲಿ ಕೋಣಕ್ಕೆ ಪೂಜೆ ಸಲ್ಲಿಸಿ, ಎಣ್ಣೆ ಹಚ್ಚುವ ಸಂಪ್ರದಾಯವನ್ನು ವಿಧಿವತ್ತಾಗಿ ನೆರವೇರಿತು.

ನಂತರ ಬುಸಾರ ಲಕ್ಷ್ಮೀ ಮಂದಿರ, ಹಕ್ಕುದಾರರು ಹಾಗೂ ಖಾತೆದಾರ ಗೌಡರ ಮನೆ, ಶ್ರೀ ಶಂಕರಲಿಂಗ ದೇವಸ್ಥಾನ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಕೋಣವನ್ನು ಮೆರವಣಿಗೆಯೊಂದಿಗೆ ಒಕ್ಕೊರಲಿನಿಂದ
ಶ್ರೀ ಮಹಾಲಕ್ಷ್ಮಿ ದೇವತೆಗೆ ಜೈಕಾರ ಕೂಗುತ್ತಾ, ವಾದ್ಯಮೇಳದೊಂದೊಗೆ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಆವರದಲ್ಲಿ ಕರೆತರಲಾಯಿತು.

ನಂತರ ಜಾತ್ರೆಯ ಸೂತ್ರಧಾರ ದಿಲೀಪ ಅಸೂದೆ ಅವರು ಚೌಕಾ ಹೊಯ್ದು ಗಾಯರಾಣಿ ಹಾಕುವ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ನೆರವೇರಿಸಿ ಕೋಣಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪಟ್ಟಾಭಿಷೇಕ ಸೇರಿದಂತೆ ಎಲ್ಲಾ ಧಾರ್ಮಿಕ ವಿಧಿಗಳನ್ನು ಪೂರ್ಣಗೊಳಿಸಿ, ಸಂಪ್ರದಾಯದಂತೆ ಕೋಣವನ್ನು ಬಿಡಲಾಯಿತು.

ಈ ಸಂದರ್ಭದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ಅಪ್ಪಾಸಾಹೇಬ ಶಿರಕೊಳಿ, ಕಾರ್ಯಾಧ್ಯಕ್ಷ ಸುನೀಲ ಪರ್ವತರಾವ, ಉಪಾಧ್ಯಕ್ಷ ಅಮರ ನಲವಡೆ,  ಕಾರ್ಯದರ್ಶಿ ಬಸನಗೌಡ ಪಾಟೀಲ, ಸಹಕಾರ್ಯದರ್ಶಿ ರಾವಸಾಹೇಬ ದೇಸಾಯಿ, ಹಕ್ಕುದಾರರಾದ ಕುನಾಲ ಪಾಟೀಲ, ನಿಕೇತ್ ಕುಲಕರ್ಣಿ, ಬಸವಣ್ಣಪ್ಪ ಕರ್ದೇಗೌಡ,  ಗಿರೀಶ ಕುಲಕರ್ಣಿ, ಅಪ್ಪಾಸಾಹೇಬ ಶೆಟ್ಟಿಮನಿ, ಮುಖಂಡರಾದ ಶಿವಾನಂದ ಮುಡಶಿ, ಗಜಾನನ ಕ್ವಳ್ಳಿ, ಸಂಜಯ ಶಿರಕೋಳಿ, ಶ್ರೀಕಾಂತ ಹತನೂರಿ, ಅಜಿತ ಕರಜಗಿ, ವಿನೋದ ನಾಯಿಕ, ರೋಹನ ನೇಸರಿ, ಆನಂದ ಸಂಸುದ್ದಿ, ಸುಭಾಷ ಕಾಸರಕರ, ಚಿದಾನಂದ ಕರದನ್ನವರ,  ಕುಮಾರ ಬಸ್ತವಾಡಿ, ಉಮೇಶ ಕಾಂಬಳೆ, ಸೇರಿದಂತೆ ಸಾವಿರಾರು ಭಕ್ತರು ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್