LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಶಿಕ್ಷಣ ಇಲಾಖೆಯಿಂದ ವಿಶೇಷ ಅಗತ್ಯವುಳ್ಳ ಎಸ್ ಎಸ್ ಎಲ್ ಸಿ ಸಾಧಕ ಮಕ್ಕಳಿಗೆ ಸತ್ಕಾರ 

 

ರನ್ನ ಬೆಳಗಲಿ: ಮೇ.೦೨., ಪಟ್ಟಣದ ಪಂಚಾಯತ್ ಕಾರ್ಯಾಲಯ ಆವರಣದಲ್ಲಿ ಇತ್ತೀಚಿಗೆ ಮುಧೋಳ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಗಳ ಕಾರ್ಯಾಲಯ ಹಾಗೂ ಪಟ್ಟಣ ಪಂಚಾಯತ್ ಆಶ್ರಯದಲ್ಲಿ   ಸನ್ ೨೦೨೫-೨೬ನೇ ಸಾಲಿನ ವಿಶೇಷ ಅಗತ್ಯವುಳ್ಳ ಎ??????ಲ್ಸಿ ಮಕ್ಕಳ ಫಲಿತಾಂಶ ಪ್ರಕಟಗೊಂಡಿದ್ದು, ಈ ಸಾಲಿನಲ್ಲಿ ೨೦ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, ೧೮ ವಿದ್ಯಾರ್ಥಿ ಉತ್ತೀರ್ಣಗೊಂಡಿದ್ದು ಆ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಗೌರವ ಸತ್ಕಾರ ನೀಡಿ ಪ್ರೋತ್ಸಾಹಿಸಿದೆ. ಸ್ಥಳೀಯ ಪಟ್ಟಣದ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಾದ ಸುಶ್ಮಿತಾ ಗೌರವ್ವಗೋಳ ೪೭.೫೨%, ಕೀರ್ತಿ ನಾಯಕ ೫೭.೨೫%, ಲಕ್ಷ್ಮಿ ಹುಲ್ಯಾಳ ೫೦.೪೮% ಮತ್ತು ಮಹಾಲಿಂಗಪುರ ನಗರದ ಮಲ್ಲಿಕಾರ್ಜುನ ಮೂಳೆಗಾವಿ ೬೫%, ವೈಷ್ಣವಿ ಅಮ್ಮನಗೆ ೬೦.೪೭%, ಪ್ರೀತಿ ಗೌರೀಶ ನಾಯಕ ೬೦.೩೨% ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಎಸ್ ಎಮ್ ಮುಲ್ಲಾ ಬಿ.ಇ.ಓ, ಎ ಆರ್  ಛಬ್ಬಿ ಬಿ.ಆರ್.ಸಿ.ಓ, ಮತ್ತು ಎಸ್ ಡಿ ನೀಲಗುಂದ ಎಸ್ ಎಸ್ ಎಲ್ ಸಿ ನೂಡಲ್ ರವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಬಿ.ಐ.ಇ.ಆರ್.ಟಿ ಗಳಾದ ಎ ಎಂ ಕೆಲಬಾವಿ,ಕೃಷ್ಣ ಅರಿಕೇರಿ ಮತ್ತು ಸಿ ಆರ್ ಪಿ ಬಸವರಾಜ ಬಳ್ಳಾರಿ,ಎಸ್ ಎಸ್ ಹೊಸಮನಿ ಅವರು  ಸತ್ಕರಿಸಿ ಗೌರವಿಸಿದರು.

 ಬಿ ಎಂ ಮಂತ್ರಿ ಬಿ.ಐ.ಇ.ಆರ್.ಟಿ ಪ್ರತಿ ವಿದ್ಯಾರ್ಥಿಗಳ ಅವೈಕ್ತಿಕ ಮಾಹಿತಿಯನ್ನು ಪಡೆದು ಮುಂದಿನ ಶಿಕ್ಷಣಕ್ಕೆ ಇಲಾಖೆಯಿಂದ ಪ್ರೋತ್ಸಾಹ ನೀಡುವುದಾಗಿ ತಿಳಿಸಿ, ನಮ್ಮೆಲ್ಲಾ ನ್ಯೂನಯತೆಗಳನ್ನು ಗೆಲ್ಲುವ ಏಕೈಕ ಸಾಧನೆವೇ ಶಿಕ್ಷಣ.ಆದ್ದರಿಂದ ಶಿಕ್ಷಣದಿಂದ ಯಾರು ವಂಚಿತರಾಗಬೇಡಿ, ಇಂದು ಆದಷ್ಠೋ ವಿಶೇಷ ಅಗತ್ಯವುಳ್ಳ ಸಾಧಕರು ಉನ್ನತವಾದ ಅಧಿಕಾರಿಗಳಾಗಿ ದೇಶಕ್ಕೆ ಆಸ್ತಿಯಾಗಿದ್ದಾರೆ ಎಂದು ಹೇಳಿದರು.

ಮಹಾಲಿಂಗ ಸಮೇರ, ಉಮಾಶ್ರೀ ನೇಕಾರ,ರವಿ ಭಜಂತ್ರಿ,ರಾಮಣ್ಣ ಹುನ್ನೂರ, ಪೂನಂ ಕುಂಬಾರ ಮತ್ತು ಪಾಲಕ ಪೋಷಕರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಕ್ತರ ಸಾಮಾಜಿಕ ಸೇವೆ ಮತ್ತಷ್ಟು ಪ್ರೇರಣೆ-ಹುಮ್ಮಸ್ಸು ನೀಡಿದೆ : ಮಲ್ಲಿಕಾರ್ಜುನ ಶ್ರೀಸಂಚಾರ ಸುಗಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಾಕೀತು ಭ್ರಷ್ಟಾಚಾರ ಎಸಗಿದ ಸಚಿವರನ್ನು ಕೈಬಿಡಲು ಆಗ್ರಹಿಸಿ  ಬಿಜೆಪಿವತಿಯಿಂದ ಪ್ರತಿಭಟನೆ ಶಾಶ್ವತ ಪುನರ್ವಸತಿ ಹಾಗೂ ಕಾನೂನುಬದ್ಧ ಎಲ್ಲಾ ಹಕ್ಕು-ಸೌಲಭ್ಯಗಳಿಗಾಗಿ ಮೊಳವಾಡ ಗ್ರಾಮಸ್ಥರ ಮನವಿಕೃಷ್ಣಾ ಮೇಲ್ದಂಡೆ ನಿರಾಶ್ರಿತರಿಗೆ KAS ನೇಮಕಾತಿಯಲ್ಲಿ ಮೀಸಲಾತಿ ನಿರಾಕರಣೆ - ಸರ್ಕಾರದ ವಿರುದ್ಧ ಕಿಸಾನ ಸಂಘ ಆಕ್ರೋಶಬಳ್ಳಾರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು: ಬಿಜೆಪಿ ರೈತ ಮೋರ್ಚಾ ಅಹೋರಾತ್ರಿ ಧರಣಿಆಗಸ್ಟ್‌ 10ರೊಳಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಿ: ತುಂಗಭದ್ರಾ ರೈತ ಸಂಘದ ಆಗ್ರಹವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ: 200 ಆಟೋಗಳೊಂದಿಗೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತ