LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಬಾಕ್ಸಿಂಗ್‌ ನಲ್ಲಿ ಚಿನ್ನದ ಪದಕ ಗೆದ್ದ ಬೆಳಗಾವಿಯ ಯುವಕ





ಬೆಳಗಾವಿ: ಮಲೇಷ್ಯಾದ ಕೌಲಾಲಂಪುರ್ ದಲ್ಲಿ ಅವಳಿ ಚಾಂಪಿಯನ್‌ಶಿಪ್ ಆಯೋಜಿಸಿದ್ದ ಅಂತರರಾಷ್ಟ್ರೀಯ ಬಾಕ್ಸಿಂಗ್‌ನಲ್ಲಿ 65 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಬೆಳಗಾವಿಯ ಜಿಲ್ಲೆಯ ಬಾಕ್ಸರ್  ಒಬ್ಬರು ಕುಂದಾನಗರಿಯ ಕೀರ್ತಿ ಹೆಚ್ಚಿಸಿದ್ದಾರೆ.

ಹೌದು.. ಬೆಳಗಾವಿ ಜಿಲ್ಲೆಯ ಮೂಡಗಿಯ ತಾಲೂಕಿನ ಸಂಗನಕೇರಿ ಗ್ರಾಮದ ಮೊಹಮ್ಮದ್‌ಕೈಫ್ ಮೀರಾಸಾಬ್ ಮುಲ್ಲಾ ಅವರು ಇತ್ತೀಚಿಗೆ ಮಲೇಷ್ಯಾದಲ್ಲಿ ನಡೆದ ಅಂತರರಾಷ್ಟ್ರೀಯ ಬಾಕ್ಸಿಂಗ್‌ನಲ್ಲಿ 65 ಕೆಜಿ ವಿಭಾಗದಲ್ಲಿ  ಚಿನ್ನದ ಪದಕ ಪಡೆದು ಹೊರಹೊಮ್ಮಿದ್ದಾರೆ.  ಈ ಬಾಕ್ಸಿಂಗ್‌ನಲ್ಲಿ  ವಿವಿಧ ಜಿಲ್ಲೆ, ರಾಜ್ಯ ದೇಶಗಳ ಬಾಕ್ಸರ್‌ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಮೊಹಮ್ಮದ್‌ಕೈಫ್ ಅವರು  ತಮ್ಮ ಅತ್ಯುತ್ತಮ ಆಟ ಪ್ರದರ್ಶಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಮಗ ಡಾಕ್ಟರ್‌ ಆಗಲಿ ಎಂಬುವುದು ತಂದೆಯ ಕನಸ್ಸಾಗಿತ್ತು: ಬಾಕ್ಸಿಂಗ್‌ ನಲ್ಲಿ ಸಾಧನೆ ಮಾಡುತ್ತಾ ಚಿನ್ನಸೇರಿಂತೆ ಅನೇಕ ಪದಕಗಳನ್ನು ತಮ್ಮದಾಗಿಸಿಕೊಳ್ಳುತ್ತಾ ಮುಂದೆ ಸಾಗುತ್ತಿರುವ ಮೊಹಮ್ಮದ್‌ಕೈಫ್ ಅವರನ್ನು ಡಾಕ್ಟರ್‌ ಮಾಡಬೇಕೆಂಬ ಬಯಕೆ ಅವರ ತಂದೆ ಮೀರಾಸಾಬ್ ಮುಲ್ಲಾ ಅವರದಾಗಿತ್ತು. ಆದರೆ  ಮೊಹಮ್ಮದ್‌ಕೈಫ್ ಓದಿನ ಜೊತೆ ಹೆಚ್ಚು  ಕ್ರೀಡೆಗಳ ಪುಸ್ತಕದತ್ತ ಓಲವು ಹೆಚ್ಚಾಗಿತ್ತು. ದಿನಗಳು ಸೇರಿದಂತೆ ಮೊಹಮ್ಮದ್‌ಕೈಫ್ ಅವರು ಬಾಕ್ಸಿಂಗ್‌ ನತ್ತ ಹೆಚ್ಚು ಗಮನ ಹರಿಸಿ ಛಲ ಬಿಡದೇ ಈಗ  ಬಾಕ್ಸಿಂಗ್‌ ಸಾಧನೆಗಳ ಮೆಟ್ಟಿಲುಗಳನ್ನು ಏರುತ್ತಿದ್ದಾರೆ. ಆದರೆ ಡಾಕ್ಟರ್‌ ಮಾಡಬೇಕೇಬ ತಂದೆ ಕನಸು ಈಗ ಬದಲಾಗಿದ್ದು, ಯಾವುದರಲ್ಲಿ ಅವನ ಆಸಕ್ತಿ ಇದಿಯೋ ಅದರಲ್ಲಿ ಮುಂದುವರೆಯಲಿ ಎನ್ನುತ್ತಾರೆ   ಮೊಹಮ್ಮದ್‌ಕೈಫ್ ಅವರ ತಂದೆ ಮೀರಾಸಾಬ್ ಮುಲ್ಲಾ.

ಬಾಕ್ಸಿಂಗ್ ಕಲಿತ ಕಠಿಣ ಪರಿಶ್ರಮಿ ಮೊಹಮ್ಮದ್‌ಕೈಫ್: ಮೊಹಮ್ಮದ್‌ಕೈಫ್ ಮೂಲತಃ  ಬೆಳಗಾವಿ ಜಿಲ್ಲೆಯ ಮೂಡಗಿಯ ತಾಲೂಕಿನ ಸಂಗನಕೇರಿ ಗ್ರಾಮದ ಗ್ರಾಮದವರಾಗಿದ್ದು, ಸರ್ಕಾರಿ ಶಾಲೆ ಶಿಕ್ಷಕ ಮೀರಾಸಾಬ್ ಮುಲ್ಲಾ  ಅವರ ಪುತ್ರರಾಗಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಣವನ್ನು ಹುಕ್ಕೇರಿ ತಾಲೂಕಿನ  ಶಿರಡಾನ ಶಾಲೆಯಲ್ಲಿ ಮುಗಿಸಿದ್ದಾರೆ. ಸದ್ಯ  ಬೆಂಗಳೂರಿನ ರಾಮಯ್ಯಾ ಕಾಲೇಜಿನಲ್ಲಿ  ಎಂಬಿಎ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬಾಲ್ಯದಿಂದಲೇ  ಬಾಕ್ಸಿಂಗ್‌ನಲ್ಲಿ  ಆಸಕ್ತಿ ಹೊಂದಿದ್ದ ಮೊಹಮ್ಮದ್‌ಕೈಫ್ ಅವರು ಬಾಕ್ಸಿಂಗ್ ಲೋಕದ ದಂತಕಥೆ ಮೊಹಮ್ಮದ್ ಅಲಿ‌ ಹಾಗೂ ವಿಶ್ವದಲ್ಲೇ ಖ್ಯಾತ ಬಾಕ್ಸಿಂಗ್‌ ಬ್ರೂಸ್ ಲೀ ಅವರಿಂದ ಪ್ರೇರಿತನಾಗಿ ಬಾಕ್ಸಿಂಗ್‌ ಕಲಿತ ಕಠಿಣ ಪರಿಶ್ರಮಿಯಾಗಿದ್ದಾರೆ. ಜಿಲ್ಲೆ ಸೇರಿದಂತೆ ವಿವಿಧ ರಾಜ್ಯ ಹಾಗೂ  ದೇಶಗಳಲ್ಲಿ ನಡೆದ ಬಹತೇಕ ಬಾಕ್ಸಿಂಗ್‌ ಸ್ಪರ್ಧೆಗಳಲ್ಲಿ ಇವರು ಭಾಗವಹಿಸಿ ಪ್ರಶಸ್ತಿಗಳನ್ನು, ಪ್ರಸಿದ್ಧಿಯನ್ನು ಪಡೆದು ಉತ್ತಮ ಬಾಕ್ಸರ್ ವೆಂದು ಖ್ಯಾತಿ ಪಡೆದಿದ್ದಾರೆ.

ಸಾಧನೆಗೆ ಶುಭಾಷಯಗಳ ಮಹಾಪೂರ:  ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಪಡೆದ ಮೂಡಲಗಿ ತಾಲೂಕಿನ ಸಂಗನಕೇರಿ ಗ್ರಾಮದ  ಮೊಹಮ್ಮದ್‌ಕೈಫ್ ಮೀರಾಸಾಬ್ ಮುಲ್ಲಾ ಅವರಿಗೆ ಕಲಿತ ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸೇರಿದಂತೆ ಸಂಗನಕೇರಿ ಗ್ರಾಮಸ್ಥರು ಅಭಿನಂದಿಸಿದ್ದಾರೆ. ಅಲ್ಲದೇ  ಮೊಹಮ್ಮದ್‌ಕೈಫ್ ಅವರ ಸಾಧನೆ ಇನ್ನು ಆಕಾಶಕ್ಕೆತರಕ್ಕೆ ಎರಲಿ ಎಂಬುವುದು ಎಲ್ಲರ ಆಶಯಗಳಾಗಿವೆ.




Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್