ಜಮಖಂಡಿ,ಉತ್ತರಾಧಿ ಮಠದ ಯತಿ ವರೇಣ್ಯರಾದ ಶ್ರೀ ಸತ್ಯಧ್ಯಾಸ ತೀರ್ಥರ ಆರಾಧನಾ ಮಹೋತ್ಸವ ಪ್ರಭಾತನಗರದ ರಾಯರ ಮಠದಲ್ಲಿ ನಾಳೆ ದಿ.೨೫ ಬುಧವಾರದಂದು ನಡೆಯಲಿದೆ ಎಂದು ಮಠದ ಪ್ರಧಾನ ಅರ್ಚರಾದ ರಾಘವೇಂದ್ರಾಚಾರ್ಯ ಜ್ಯೋಷಿ ತಿಳಿಸಿದ್ದಾರೆ. ಅಂದು ಬೆಳಗ್ಗೆ ಅಷ್ಟೋತ್ತರ, ರಾಯರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ಅಲಂಕಾರ, ಹಸ್ತೋದಕ,ಮಹಾಮಂಗಲಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ ಕಾರ್ಯಕ್ರಮಗಳಿರುತ್ತವೆ. ಎಲ್ಲ ಭಕ್ತಾದಿಗಳು ಸಕಾಲಕ್ಕೆ ಆಗಮಿಸಿ ತನು-ಮನ-ಧನ ದಿಂದ ಸೇರೆ ಸಲ್ಲಿಸಿ,ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾಗಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ೯೪೪೮೪೩೮೭೫೫ ನ್ನು ಸಂಪರ್ಕಿಸ ಬಹುದು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.