LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ರಸಗೊಬ್ಬರ ಮಗಳಿಗೆಗಳಿಗೆ ಕೃಷಿ ಅಧಿಕಾರಿ ಭೇಟಿ ಪರಿಶೀಲನೆ*

ಮುದ್ದೇಬಿಹಾಳ:2026 ಸಾಲಿನ ಮುಂಗಾರು ಮಳೆ ಆರಂಭಗೊಂಡಿದ್ದು,ರೈತರು ಬಿತ್ತನೆ ಪ್ರಾರಂಭ ಮಾಡಿದ್ದಾರೆ,ಈ ವರ್ಷ ಯುದ್ಧ ನಡೆದಿರುವುದರಿಂದ ರಸಗೊಬ್ಬರ,ಡಿಎಪಿ ಗಳನ್ನು ಸರಿಯಾಗಿ ಬಳಸಲು ಕೇತ್ ಬಚಾವ್ ಆಂದೋಲನ ಮೂಲಕ ರೈತರಿಗೆ ತಿಳಿಹೇಳುವ ಮೂಲಕ  ರೈತರು ಅಗತ್ಯಕ್ಕೆ ತಕ್ಕಂತೆ ಗೊಬ್ಬರ ಬಳಸಬೇಕು,ಎಂದು ಮುದ್ದೇಬಿಹಾಳ ಸಹಾಯಕ ಕೃಷಿ ನಿರ್ದೇಶಕ ಸುರೇಶ ಬಾವಿಕಟ್ಟಿ ತಿಳಿಸಿದ್ದಾರೆ. ಅವರು ಇಲಾಖೆಯ ಆದೇಶದಂತೆ ಸೋಮವಾರ ಪಟ್ಟಣದ ಬೀಜ ಮತ್ತು ರಸಗೊಬ್ಬರ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು,ರೈತರು ನಿಮ್ಮ ಮಳಿಗೆಗೆ ಬಂದಾಗ ಯಾವ ಬೆಳೆ ಬೆಳೆಯುತ್ತಿರಿ ಎಂದು,ಪರಿಶೀಲಿಸಿ ಅದಕ್ಕೆ ತಕ್ಕಂತೆ ರಸಗೊಬ್ಬರ ಬಳಸಲು ತಿಳಿಸಬೇಕು, ಮತ್ತು ರಸಗೊಬ್ಬರಕ್ಕೆ ಸರ್ಕಾರ ನಿಗದಿಪಡಿಸಿದ ದರವನ್ನು ಮಾತ್ರ ರೈತರಿಂದ ಪಡೆಯಬೇಕು, ಹೆಚ್ಚಿಗೆ ದರ ವಸೂಲಿ ಮಾಡಿದ್ದು,ಮಾಹಿತಿ ಬಂದರೆ,ಅಂತಹ ಮಾರಾಟಗಾರರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ,ಎಂದು ಎಚ್ಚರಿಸಿದರು.
ನಾವು ಮುದ್ದೇಬಿಹಾಳ ನಾಲತ್ತವಾಡ ಢವಳಗಿ ಭಾಗದಲ್ಲಿ ತಂಡ ಮಾಡಿಕೊಂಡು ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ,ರೈತರು ಯಾವುದೇ ಕಾರಣಕ್ಕೂ ಭೀಜ ಮತ್ತು ರಸಗೊಬ್ಬರ ನಮಗೆ ಸಿಗುವುದಿಲ್ಲ ಎಂದು ತಿಳಿಯಬಾರದು,ದಾಸ್ತಾನು ಇದೆ,ಅದನ್ನು ಅಗತ್ಯಕ್ಕೆ ತಕ್ಕಂತೆ ರಶೀದಿ ಪಡೆದು ಬಳಸಬೇಕು.
ತಮ್ಮ ತಾಲ್ಲೂಕಿನ ಮಳಿಗೆಗಳಲ್ಲಿ ಇರುವ ರಸಗೊಬ್ಬರ ತಾಲ್ಲೂಕು ಮಟ್ಟದಲ್ಲಿ ಬಳಸಬೇಕು, ಅದನ್ನು ಬೇರೆ ತಾಲ್ಲೂಕಿಗೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಮಾರಾಟಗಾರರಿಗೆ ತಿಳಿಸಲಾಗಿದೆ,ಮಾನ್ಯ ಜಿಲ್ಲಾ ಅಧಿಕಾರಿಗಳ ಆದೇಶದಂತೆ ತಂಡ ರಚನೆ ಮಾಡಿದ್ದಾರೆ, ಅದರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ಕೃಷಿ ಅಧಿಕಾರಿ ರಾಜೇಶ್ವರಿ ನಾಡಗೌಡ, ಸೋಮನಗೌಡ ಬಿರಾದಾರ, ಮಾರಾಟಗಾರರಾದ ಶಿವಶಂಕರಗೌಡ ಹಿರೇಗೌಡರ,ರೈತರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಕ್ತರ ಸಾಮಾಜಿಕ ಸೇವೆ ಮತ್ತಷ್ಟು ಪ್ರೇರಣೆ-ಹುಮ್ಮಸ್ಸು ನೀಡಿದೆ : ಮಲ್ಲಿಕಾರ್ಜುನ ಶ್ರೀಸಂಚಾರ ಸುಗಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಾಕೀತು ಭ್ರಷ್ಟಾಚಾರ ಎಸಗಿದ ಸಚಿವರನ್ನು ಕೈಬಿಡಲು ಆಗ್ರಹಿಸಿ  ಬಿಜೆಪಿವತಿಯಿಂದ ಪ್ರತಿಭಟನೆ ಶಾಶ್ವತ ಪುನರ್ವಸತಿ ಹಾಗೂ ಕಾನೂನುಬದ್ಧ ಎಲ್ಲಾ ಹಕ್ಕು-ಸೌಲಭ್ಯಗಳಿಗಾಗಿ ಮೊಳವಾಡ ಗ್ರಾಮಸ್ಥರ ಮನವಿಕೃಷ್ಣಾ ಮೇಲ್ದಂಡೆ ನಿರಾಶ್ರಿತರಿಗೆ KAS ನೇಮಕಾತಿಯಲ್ಲಿ ಮೀಸಲಾತಿ ನಿರಾಕರಣೆ - ಸರ್ಕಾರದ ವಿರುದ್ಧ ಕಿಸಾನ ಸಂಘ ಆಕ್ರೋಶಬಳ್ಳಾರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು: ಬಿಜೆಪಿ ರೈತ ಮೋರ್ಚಾ ಅಹೋರಾತ್ರಿ ಧರಣಿಆಗಸ್ಟ್‌ 10ರೊಳಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಿ: ತುಂಗಭದ್ರಾ ರೈತ ಸಂಘದ ಆಗ್ರಹವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ: 200 ಆಟೋಗಳೊಂದಿಗೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತ