LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

"ಅಕ್ಕನ ಬಳಗದ 11ನೇ ವರ್ಷದ ವಾರ್ಷಿಕೋತ್ಸವ"

ಯಮಕನಮರಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿಂಧಿಹಟ್ಟಿ ಗ್ರಾಮದಲ್ಲಿ ಅಕ್ಕನ ಬಳಗದ 11 ನೇ ವರ್ಷದ ವಾರ್ಷಿ ಕೋತ್ಸವವು ಭಾನುವಾರ ದಿನಾಂಕ 8.3.2026ರಂದು ಶಿಂಧಿಹಟ್ಟಿ ಗ್ರಾಮದ ಲಕ್ಷ್ಮಿ ದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರುಗಿತು
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಸುಕ್ಷೇತ್ರ ಘೋಡಗೇರಿ ಗ್ರಾಮದ ಶಿವಾನಂದ ಮಠದ ಮಲ್ಲಯ್ಯ ಸ್ವಾಮಿಗಳು ಮಾತನಾಡಿ ಮಾತೃ ದೇವೋಭವ ಎಂಬ ಕಲ್ಪನೆಯನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು
ಗ್ರಾಮೀಣ ಪ್ರದೇಶದಲ್ಲಿ ಸಮಾಜದಲ್ಲಿ ಅಕ್ಕನ ಬಳಗ ಮಾಡುತ್ತಿರುವ ಕಾರ್ಯ ಬಹಳಷ್ಟು ಶ್ಲಾಘನೀಯ ಎಂದು ಆಶಿಸಿದರು .
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮಾತೆ ಲಕ್ಷ್ಮಿ ತಾಯಿ ರವರು ಮನುಷ್ಯ ಜೀವನದ ಪ್ರತಿ ಹಂತದಲ್ಲಿ ಮಾತೆಯ ಪಾತ್ರ ಮಹತ್ವವಾಗಿದೆ ಎಂದು ಹೇಳಿದರು
ಹಿರಿಯ ಸಾಹಿತಿ ಎಸ್ಎಂ ಶಿರೂರು ಮಾತನಾಡಿ ಎಲ್ಲರನ್ನೂ ಜಾಗೃತ್ತಗೊಳಿಸುವ ಕಾರ್ಯದಲ್ಲಿ ಅಕ್ಕನ ಬಳಗ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಅಕ್ಕನ ಬಳಗದ ಸದಸ್ಯರಾದ ಸವಿತಾ ಮುಗುಳಿ, ಬಸಮ್ಮ ಹುರುಳಿ, ಅನಿಸಿಕೆಗಳನ್ನು ವ್ಯಕ್ತಪಡಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕ್ಕನ ಬಳಗದ ಅಧ್ಯಕ್ಷರಾದ ಗೌರವ ಮುಗಳಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಗೌರವ ರಾಮಣ್ಣ ಮುಗುಳಿ, ಕಾರ್ಯದರ್ಶಿ ಕಸ್ತೂರಿ ಸಿದ್ದಪ್ಪ ಕರಗುಪ್ಪಿ, ಉಪಾಧ್ಯಕ್ಷರಾದ ಬಸವ ಚಂದ್ರಪ್ಪ ಮುಗಳಿ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು
ಸಂಘದ ಸದಸ್ಯರಾದ ಸುರೇಖಾ ಹುರುಳಿ, ಬಸವ್ವ ಹುರುಳಿ ವಾರ್ಷಿಕ ವರದಿಯನ್ನು ವಾಚಿಸಿದರು.
ಶಿಕ್ಷಕಿ ಕಸ್ತೂರಿ ಹುರುಳಿ , ಹಾಗೂ ಸಾಕ್ಷಿ ಮುಗುಳಿ ಜಂಟಿಯಾಗಿ ಕಾರ್ಯಕ್ರಮ ನಿರೂಪಿಸಿದರು

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್