LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಮಕ್ಕಳಿಗಾಗಿ ಸರ್ವತೋಮುಖ ವ್ಯಕ್ತಿತ್ವ ವಿಕಾಸ ಶಿಬಿರ

ಗದಗ,ಎ,೦೩ : ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ೧೦ ದಿನಗಳವರೆಗಿನ ಉಚಿತವಾದ ಬೇಸಿಗೆ ಶಿಬಿರವನ್ನು ೧೧ ರಿಂದ ೧೬ ವಷ೯ದ ಮಕ್ಕಳಿಗೆ ಸಂವಾದಾತ್ಮಾಕ ತರಗತಿಗಳು ? ರಚನಾತ್ಮಕ ಕಾಯ೯ಗಾರ ಏಪ೯ಡಿಸಲಾಗುತ್ತಿದೆ. ಇದರ ಕರಪತ್ರವನ್ನು ಡಿಡಿಪಿಐ ಕಚೇರಿಯ ಡಿವೈಪಿಸಿಯಾದ ಶ್ರೀ ರವಿಪ್ರಕಾಶ್ , ವಿಷಯ ಪರಿವೀಕ್ಷಕರಾದ ಶ್ರೀ ಹೆಚ್ ಬಿ ರೆಡ್ಡರ್ , ಗದಗ ಗ್ರಾಮೀಣದ ಶ್ರೀ ಜೆ. ಎ ಭಾವಿಕಟ್ಟಿ, ಗದಗ ನಗರದ ಬಿಆರ್‌ಸಿಯ ಶ್ರೀ ಎಸ್ ಪಿ ಪ್ರಭಯ್ಯಮಠ ಹಾಗೂ ಬ್ರಹ್ಮಾಕುಮಾರಿ ಜಯಂತಿ ಅಕ್ಕನವರಿಂದ ಅನಾವರಣ ಮಾಡಿಲಾಯಿತು.
ಈ ಶಿಬಿರದಲ್ಲಿ ಮಕ್ಕಳಿಗಾಗಿ ನೈತಿಕ ಶಿಕ್ಷಣ ಮತ್ತು ಮೌಲ್ಯ ಶಿಕ್ಷಣ, ವತ೯ನೆಯ ಪರಿವತ೯ನೆ , ಅಧ್ಯಾತ್ಮ ಲೋಕದ ಅಧ್ಬುತ ರಹಸ್ಯ , ಆರೋಗ್ಯ ಜ್ಞಾನ, ಶ್ಲೋಕ , ವಚನ, ಜ್ಞಾನಯುಕ್ತ ಗೀತೆಗಳ ಪಠಣ, ರಾಜಯೋಗ ಮೆಡಿಟೇಶನ್, ಯೋಗಾಸನ ಪ್ರಾಣಾಯಾಮ, ಗುಡ್ ಮ್ಯಾನರ್ಸ್, ಕ್ರಾಫ್ಟ್, ಚಿತ್ರಕಲೆ, ಮೆಮೋರಿ ಮ್ಯಾನೆಜ್ ಮೆಂಟ್ ಇತ್ಯಾದಿ ವಿಷಯಗಳ ಬಗ್ಗೆ ತಿಳಿಸಲಾಗುವುದು .
ಇದೇ ತಿಂಗಳ ದಿನಾಂಕ ೦೮-೦೪-೨೦೨೬ ಬುಧವಾರ ದಿಂದ ೧೮-೦೪-೨೦೨೬ ರವರೆಗೆ ಪ್ರತಿದಿನ ಬೆಳಿಗ್ಗೆ ೧೦ ರಿಂದ ೧.೦೦ ಗಂಟೆಯವರೆಗೆ ಇರುವುದು .
ಗದಗ ನಗರದಲ್ಲಿ ಈ ಶಿಬಿರ ೩ ಸ್ಥಳಗಳಲ್ಲಿ ನಡೆಯಲಿದೆ
೧. ಬ್ರಹ್ಮಾಕುಮಾರೀಸ್, ಬಸವೇಶ್ವರ ನಗರ, ಗದಗ . ಮೊ : ೬೩೬೦೭೫೩೯೯೨
೨. ಬ್ರಹ್ಮಾಕುಮಾರೀಸ್, ಆಧ್ಯಾತ್ಮಿಕ ಸಂಸ್ಕ್ರತಿ ಭವನ ,ಡಂಬಳ ನಾಕಾ, ಸಿದ್ದರಾಮೇಶ್ವರ ನಗರ, ಗದಗ ಮೊ: ೮೧೪೭೨೪೧೭೫೦
೩. ಬ್ರಹ್ಮಾಕುಮಾರೀಸ್, ಹೊಸ್ಪೆಟ್ ಚೆಕ್, ಬೆಟಗೇರಿ. ಮೊ: ೯೬೩೨೭೬೯೯೫೦
ಶಿಬಿರದಲ್ಲಿ ಪಾಲ್ಗೊಳಲು ಆಸಕ್ತಿ ಇರುವಂತವರು ತಮ್ಮ ಹೆಸರು, ತರಗತಿ ಹಾಗೂ ಶಾಲೆಯ ವಿವರಗಳನ್ನು ತಾವು ಇಚ್ಛಿಸುವ ಶಿಬಿರ ನಡೆಯುವ ಕೇಂದ್ರದ ವಿಳಾಸದ ಕೆಳಗೆ ಜೊತೆಗೆ ನೀಡಿರುವ ಮೊಬೈಲ್ ಸಂಖ್ಯೆಗೆ ವಾಟ್ಸಪ್ ಮಾಡಬೇಕು.
ಶಿಬಿರಕ್ಕೆ ಪೂಣ೯ ಹಾಜರಾದವರಿಗೆ ಸಟಿ೯ಫಿಕೇಟ್ ಕೊಡಲಾಗುವುದು.
ಶಿಬಿರದಲ್ಲಿ ಭಾಗವಹಿಸುವ ಮಕ್ಕಳು ಪೆನ್, ಪುಸ್ತಕ, ಯೋಗಾಸನಕ್ಕೆ ಬೆಡಶೀಟ್, ನೀರಿನ ಬಾಟಲ ಅನ್ನು ಜೊತೆಗಿಟ್ಟುಕೊಳ್ಳಬೇಕು.
ಸೀಮಿತ ಸಂಖ್ಯೆಯಲ್ಲಿ ವಿದ್ಯಾಥಿ೯ಗಳಿಗೆ ಅವಕಾಶವಿರುತ್ತದೆ.
ಎಲ್ಲಾ ಮಕ್ಕಳು ತಮ್ಮ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳಲು ಈ ಸುವಣಾ೯ವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕರಾಗಿರುವ ರಾಜಯೋಗಿನಿ ಬ್ರಹ್ಮಾಕುಮಾರಿ ಜಯಂತಿ ಅಕ್ಕನವರು ಕರೆ ನೀಡಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್