LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಅಂಬೇಡ್ಕರ್ ಭಾರತೀಯ ಆತ್ಮದ ಅಸ್ಮಿತೆ: ಸಿವಿಸಿ

ಕೊಪ್ಪಳ: ಡಾ. ಬಿ. ಆರ್. ಅಂಬೇಡ್ಕರ್ ಅವರು ಭಾರತೀಯ ಆತ್ಮದ ಅಸ್ಮಿತೆಯಾಗಿದ್ದು ಅವರು ಸೃಷ್ಟಿಸಿದ ಸಂವಿಧಾನವನ್ನು ದುರುಪಯೋಗವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಜೆಡಿಎಸ್ ರಾಜ್ಯ ಅವರು ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಹೇಳಿದರು.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ನಡೆದ ಡಾ ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದುರ್ಬಲರ, ಅಸಹಾಯಕರ ಹಾಗೂ ತುಳಿತಕ್ಕೊಳಗಾದವರ ಬದುಕಿಗೆ ಬೆಳಕಾಗಿ ಸಹ ಬಾಳ್ವೆಯ ಭಾರತೀಯ ತತ್ವವನ್ನು ಎತ್ತಿ ಹಿಡಿದವರು ಅಂಬೇಡ್ಕರ್ ಅವರು ಬುದ್ದನ ಪ್ರೇರಣೆ, ಬಸವಣ್ಣನ ಸಮಾನತೆ ಎರಡನ್ನೂ ಒಳಗೊಂಡಿದ್ದರು. ಅವರು ಭಾರತಕ್ಕೆ ಸಮಾನತೆ ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟವರು. ಅಂಬೇಡ್ಕರ್ ಸಂವಿಧಾನದ ಸಮಿತಿಯಲ್ಲಿ ಇಲ್ಲದಿದ್ದರೆ ಸರ್ವ ಸ್ಪರ್ಶಿ, ಸರ್ವ ವ್ಯಾಪಿ ಸಂವಿಧಾನ ಆಗುತ್ತಿರಲಿಲ್ಲ ಎಲ್ಲರ ಒಪ್ಪಿಗೆ ಸಿಗುತ್ತಿರಲಿಲ್ಲ ಎಂದು ಹೇಳಿದರು.

"ಅಂಬೇಡ್ಕರ್ ಅವರು ಜಗತ್ತಿನ ಮಹಾ ಚಿಂತಕ ಪ್ಲೇಟೊ ಹಾಗೂ ಕಾರ್ಲ್ ಮಾರ್ಕ್ಸ್ ಅವರ ಸ್ಥಾನದಲ್ಲಿ ನಿಲ್ಲುತ್ತಾರೆ. ಪ್ಲೇಟೊ ಅತ್ಯಂತ ಶ್ರೇಷ್ಠ ಚಿಂತಕ. ಕಾರ್ಲ್ ಮಾರ್ಕ್ ಮಾನವನ ಗೌರವ, ಹಕ್ಕುಗಳು, ಶ್ರಮ ಎಲ್ಲ ವಿಚಾರಗಳಲ್ಲಿ ಅದ್ಬುತ ಕಲ್ಪನೆ ಕೊಟ್ಟಿದ್ದಾನೆ. ಅಂಬೇಡ್ಕರ. ಬುದ್ದನ ಪ್ರೇರಣೆ, ಬಸವಣ್ಣನ ಸಮಾನತೆ ಎರಡನ್ನೂ ಒಳಗೊಂಡಿರುವ ವ್ಯಕ್ತಿ. ಹೀಗಾಗಿ  ಅವರ ಜನ್ಮ ದಿನಾಚರಣೆಯ ದಿನ ಅವರ ತತ್ವಗಳನ್ನು ಅನುಸರಿಸುವ ಶಪಥ ಮಾಡಬೇಕು," ಎಂದರು.

ಕೆಲವರು ಸಂವಿಧಾನವನ್ನು ಜೇಬಿನಲ್ಲಿ ಇಟ್ಟುಕೊಂಡು ತಿರುಗಾಡುತ್ತಾರೆ. ಆದರೆ ಅದನ್ನು ಓದಿರುವುದಿಲ್ಲ. ಈ ದೇಶದಲ್ಲಿ ಸಂವಿಧಾನವನ್ನು  ಸ್ವಾರ್ಥಕ್ಕೆ ಬಳಕೆ ಮಾಡಿರುವುದು ಕಾಂಗ್ರೆಸ್. ಅಂಬೇಡ್ಕರ್ ಅವರನ್ನು ಸೋಲಿಸಿದ್ದು, ಅವರು ತೀರಿಕೊಂಡಾಗ ಅವರಿಗೆ ಜಾಗ ನೀಡದೇ ಇದ್ದದ್ದು ಕಾಂಗ್ರೆಸ್ ನಾಯಕರು. ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ವೋಟ್ ಬ್ಯಾಂಕ್ ಆಗಿ ಪರಿಗಣಿಸಿದೆ. ಆದ್ದರಿಂದ ಆ ಪಕ್ಷದ ನಡೆಯ ಬಗ್ಗೆ ಹುಷಾರಾಗಿರಬೇಕು ಎಂದರು.

ಈ ಸಂದರ್ಭದಲ್ಲಿ ಪಕ್ಷದ  ಜಿಲ್ಲಾ ಓಬಿಸಿ ಘಟಕದ ಅಧ್ಯಕ್ಷ ಕರಿಯಪ್ಪ ಹಾಲವರ್ತಿ, ತಾಲೂಕು ಎಸ್ ಸಿ ಘಟಕದ ಅಧ್ಯಕ್ಷ ಸುರೇಶ್ ದದೆಗಲ್,  ನಗರ ಘಟಕದ ಅಧ್ಯಕ್ಷ ಸೋಮನಗೌಡ ನಗರ, ಘಟಕದ ಮಹಿಳಾ ಅಧ್ಯಕ್ಷೆ  ನಿರ್ಮಲ ಮೇದಾರ, ಮಹಿಳಾ ಘಟಕದ ಗೌರವ ಅಧ್ಯಕ್ಷೆ ರತ್ನಮ್ಮ ಹಿರೇಮಠ, ಜಿಲ್ಲಾ ಕ್ರೀಡಾ ವಿಭಾಗದ ಅಧ್ಯಕ್ಷ ಸೈಯದ್ ಮಹೇಮೂದ್ ಹುಸೇನಿ ಬಲ್ಲೆ, ಜಿಲ್ಲಾ ಕೈಗಾರಿಕಾ ಅಧ್ಯಕ್ಷ ಮಾರುತಿಗೌಡ ಪೊಲೀಸ್ ಪಾಟೀಲ್, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಏಣಿಗಿ, ರತ್ನಮ್ಮ ಹಿರೇಮಠ, ನಗರ ಘಟಕದ ಕೋಶಾಧ್ಯಕ್ಷ ಶಿವರಾಜ್ ಮಠಪತಿ, ಉಪಾಧ್ಯಕ್ಷ ಗಂಗಾಧರ ವಸ್ತ್ರದ್, ಮಹಿಳಾ ಉಪಾಧ್ಯಕ್ಷೆ ಶರಣಮ್ಮ ಸಂಗನಾಳ್, ನಗರ ಮಹಿಳಾ ಘಟಕದ ಓಬಿಸಿ ಅಧ್ಯಕ್ಷೆ ಭಾಗ್ಯ ಐವಳಿಯವರು, ಮಹಿಳಾ ವಿದ್ಯಾರ್ಥಿ ಘಟಕದ ಅಧ್ಯಕ್ಷೆ ಜಯಶ್ರೀ ಬಸವರಾಜ್, ಮುಖಂಡರಾದ ಶಂಕ್ರಪ್ಪ,  ಚಂದ್ರು, ದೇವರಾಜ್ ಅಗಳಕೇರಿ, ಜಿಲ್ಲಾ ಖಜಾoಚಿ ಮೌನೇಶ್ ಕಿನ್ನಾಳ್, ರವಿಕುಮಾರ ಮೇದಾರ ಹಾಗೂ ಅನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್