ಬಳ್ಳಾರಿ: 25:..ಇಲ್ಲಿನ ಶ್ರೀ ಮಾತೃ ಮಹಿಳಾ ಮಂಡಳಿ ಇವರು ಗುಜರಾತ್ ನ ಶ್ರೀಮದ್ ರಾಜೇಂದ್ರ ಮಿಷನ್ ಧರ್ಮಪುರ್, ಐ ಆರ್ ಡಿ ಮತ್ತು ವಿಜಯಪುರದ ಸ್ಪಂದನ ಇವರ ಸಹಯೋಗದಲ್ಲಿ ಅನಿಮಿಯ ಮುಕ್ತ ಭಾರತ ೨ನೇ ಹಂತದ ಕಾರ್ಯಕ್ರಮ ಮುಂದುವರಿದಿದೆ.
ಈಗಾಗಲೇ ಈ ಕಾರ್ಯಕ್ರಮವನ್ನು ೧ನೇ ಹಂತದಲ್ಲಿ ಬಳ್ಳಾರಿ ಜಿಲ್ಲೆಯಾದ್ಯಂತ ಬಹಳ ಯಶಸ್ವಿಯಾಗಿ ಒಂದನೇ ಪೂರೈಸಿದ್ದಾರೆ. ಮುಂದುವರೆದ ಭಾಗವಾಗಿ ಎರಡನೇ ಹಂತದ ಹೆಚ್ ಬಿ ಟೆಸ್ಟ್ ಅನ್ನು ಪ್ರಾರಂಭ ಮಾಡಿದರೆ ಶಾಲಾ-ಕಾಲೇಜುಗಳು, ವಸತಿ ನೆಲೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳ ಮೂಲಕ ಸಮುದಾಯವನ್ನು ತಲುಪಿ ಅನಿಮಿಯ ಬಗ್ಗೆ ಜಾಗೃತಿ ಮೂಡಿಸಲು ನೆರವಾಗುತ್ತದೆ ಎನ್ನುವ ದಿಸೆಯಲ್ಲಿ ಮುಂದುವರಿದಿದ್ದಾರೆ ಎಂದು ಶ್ರೀ ಮಾತೃ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಪುಷ್ಪಲತಾ ಚಂದ್ರಶೇಖರ್ ತಿಳಿಸಿದ್ದಾರೆ.