LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಕಲೆ, ಕಲಾವಿದರ ಸಮ್ಮಿಲನವೇ ಕಲಾ ಸಂಭ್ರಮ

ಬಳ್ಳಾರಿ,ಮೇ.21: ಕಲೆ ಮತ್ತು ಕಲಾವಿದರ ಸಮ್ಮಿಲನವೇ ಕಲಾ ಸಂಭ್ರಮ ಎಂದು ರಂಗಭೂಮಿ ಕಲಾವಿದರು ಹಾಗು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆದ ಬಿ.ವೀಣಾಕುಮಾರಿ ಅಭಿಪ್ರಾಯಪಟ್ಟರು. 
ಪಾರ್ವತಿ ನಗರದ ಶ್ರೀಅನಾದಿಲಿಂಗೇಶ್ವರ ದೇವಸ್ಥಾನ ಆವರಣ ವೇದಿಕೆಯಲ್ಲಿ ಶ್ರೀಗುರು ಪುಟ್ಟರಾಜ ಸಂಗೀತ ಪಾಠಶಾಲೆ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಸಾಮಾನ್ಯಯೋಜನೆಯಡಿ ಹಮ್ಮಿಕೊಂಡಿದ್ದ ಸರಿಗಮ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 
ಇಂತಹ ಸಂಭ್ರಮ ಕಾರ್ಯಕ್ರಮಗಳ ಆಯೋಜನೆಗೆ ಕಾರಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಅನೇಕ ಕಲಾವಿದರನ್ನು ಗುರುತಿಸಿ ಸಂಘ ಸಂಸ್ಥೆಗಳಿಗೆ ಸಹಕಾರ ಕೊಟ್ಟಾಗಲೆ ಕಲೆ ಉಳಿಯಲು ಸಾಧ್ಯ. ಅದನ್ನು ಇಲಾಖೆ ಮಾಡುತ್ತಿದೆ ಎಂದರು. 
ಕೆ.ಎಂ.ಸಿದ್ದಲಿAಗಯ್ಯ ಮಾತನಾಡಿ,  ಸಂಗೀತ ಪಾಠಶಾಲೆಯಲ್ಲಿ ನಿರಂತರ ತರಬೇತಿ ಪಡೆದ ಮಕ್ಕಳೇ ಮುಂದಿನ ವಿದ್ವಾಂಸರಾಗಿ ರೂಪಿಸಲು ಸಾಧ್ಯ ಈ ಪಾಠಶಾಲೆ ಆ ಕೆಲಸ ಮಾಡುತ್ತಿದೆ ಎಂದರು.
ಸಾಹಿತಿ ಎನ್. ಡಿ. ವೆಂಕಮ್ಮ  ಮಾತನಾಡಿ, ಸಂಸ್ಕೃತಿ ಮತ್ತು ಸಂಸ್ಕಾರ ಪಾಠಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಂದ ಸಾದ್ಯ. ಅವರು ನಾಡುಕಟ್ಟುವ ನಾಯಕರಾಗಲಿ. ಉತ್ತಮ ಸಂಗೀತಗಾರರಾಗಲಿ ಎಂದು ಹಾರೈಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಮಾತನಾಡಿ, ಶ್ರೀಗುರು ಪುಟ್ಟರಾಜ ಸಂಗೀತ ಪಾಠಶಾಲೆಯ ನಿರಂತರ ಕಾರ್ಯಚಟುವಟಿಕೆ
ಗಮನಿಸಿ ಸರಕಾರ ಮತ್ತು ಇಲಾಖೆ ಧನಸಹಾಯ ನೀಡಿದೆ.ಗ್ರಾಮಿಣ ಭಾಗದಲ್ಲಿ ಧಾರ್ಮಿಕ ದೇವಸ್ಥಾನಗಳಲ್ಲಿ ನಗರ ಪಟ್ಟಣಗಳಲ್ಲಿ ಕಲಾವಿದರ ಒಗ್ಗೂಡಿಸಿ ಕಲಾ
ಸಮುದಾಯವನ್ನ ಪ್ರೋತ್ಸಾಹಿ ಉಳಿಸಿ ಬೆಳಸುವುದೇ ಸರಕಾರ ಮತ್ತು ಇಲಾಖೆಯ ಕೆಲಸವಾದ್ದರಿಂದ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿಕಲಚೇತನ ಕಲಾವಿದರು ಸ್ತ್ರೀ ಕಲಾವಿದರಿಗೆ ಹೆಚ್ಚಿನ ಮಾನ್ಯತೆ ಕೊಟ್ಟಿರುವದರಿಂದ ಸಂತಸವಾಗಿದೆ ಎಂದರು. ಅನೇಕ ಟ್ರಸ್ಟ್ ಸಂಘ ಸಂಸ್ಥೆಗಳ ಗುರುತಿಸಿ ಪ್ರೋತ್ಸಾಹಧನ ನ ನೀಡುತ್ತಿದೆ ಇದನ್ನು ಸದ್ಬಳಿಕೆಯಾಗಬೇಕೆಂದರು.
ಸುಶೀಲ ಶಿರೂರು, ನಿವೃತ್ತ ಉಪನ್ಯಾಸಕ ಎನ್ ಬಸವರಾಜ್  ಮಾತನಾಡಿದರು. ಹೆಚ್ ಪಾಂಡು ರಂಗಪ್ಪ ಬಯಲಾಟ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಭಾಗವಹಿಸಿದ್ದರು.
 ಎನ್ ಮಾಧವಿ ತೋರಣಗಲ್ಲು ಇವರಿಂದ ಸುಗಮ ಸಂಗೀತ, ಡಿ. ಪ್ರವಳಿಕ ಮತ್ತು ತಂಡ ಬಳ್ಳಾರಿ ಇವರಿಂದ ಸಮೂಹ ನೃತ್ಯ, ಬೆಳಗಲ್ ರೇಖಾ ಇವರಿಂದ ಹಿಂದುಸ್ಥಾನಿ ಸಂಗೀತ, ಸರಸ್ವತಿ ಬಳ್ಳಾರಿ ಇವರಿಂದ ಭಾವಗೀತೆ, ಹೆಚ್. ತಿಪ್ಪೇಸ್ವಾಮಿ ಇವರಿಂದ ಬಯಲಾಟದ ರಂಗಗೀತೆ ಕಾರ್ಯಕ್ರಮ ನಡೆಯಿತು.
ಎನ್ ಸುಮಂಗಲ ತಂಡ ಮಾದಿಹಳ್ಳಿ ಹರಪನಹಳ್ಳಿ ತಾಲೂಕು ಇವರಿಂದ ಕಲ್ಯಾಣ ಕ್ರಂತಿ ನಾಟಕ ಪ್ರದರ್ಶನ ನಡೆಯಿತು.
ಪುಟ್ಟರಾಜ ಕ್ಯಾಷಿಯೋ ವಾದನ ಕೆ. ಜಿ ಶಿವಕುಮಾರ ಮತ್ತು ಪಂಚಾಕ್ಷರಿ ಹಾರ್ಮೋನಿಯಂ ಸುಧಾಕರ ಬಂಡಿಹಟ್ಟಿ ಇವರು ತಬಲಸಾತ್ ನೀಡಿದರು.  ಟ್ರಸ್ಟ್ ಅಧ್ಯಕ್ಷೆ ಕವಿತಾ ಕಗ್ಗಲ್ಲು ಸ್ವಾಗತಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್