LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಎಸ್.ಡಿ.ಎಂ.ಸಿ ಯ ನೂತನ ಅಧ್ಯಕ್ಷರಾಗಿ ಹನಮಂತ ಮಡಿವಾಳರ ಅವಿರೋಧ ಆಯ್ಕೆ

ರಾಮದುರ್ಗ: ತಾಲೂಕಿನ ಕಲಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಯ ನೂತನ ಅಧ್ಯಕ್ಷರನ್ನಾಗಿ ಮಹದಾಯಿ ಹೋರಾಟಗಾರ ಹನಮಂತ ಮಡಿವಾಳರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಪ್ರಸ್ತುತ ೧೮ ಜನ ಸದಸ್ಯರು ಇರುವ ಸಮಿತಿಯಲ್ಲಿ ಏಳು ಜನ ಸದಸ್ಯರ ಮಕ್ಕಳು ಏಳನೆಯ ತರಗತಿ ಉತ್ತೀರ್ಣಗೊಂಡು ಪ್ರೌಢಶಾಲೆಗೆ ಪ್ರವೇಶ ಪಡೆದ ಕಾರಣ ಶಿಕ್ಷಣ ಇಲಾಖೆಯ ನಿಯಮಾನುಸಾರ ಆ ಏಳು ಜನ ಸದಸ್ಯರು ತಮ್ಮ ಸ್ವ ಇಚ್ಛೆಯಿಂದ ತಮ್ಮ ಸ್ಥಾನಗಳಿಗೆ ನೂತನ ಸದಸ್ಯರುಗಳ ಹೆಸರುಗಳನ್ನು ಸೂಚಿಸಿ ನೇಮಕ ಮಾಡಿದರು, ನಂತರ ಎಲ್ಲ ಸದಸ್ಯರುಗಳು ಸೇರಿ ಅಧ್ಯಕ್ಷರನ್ನು ಆಯ್ಕೆ ಮಾಡಿದರು.
ಶಾಲೆಯ ಪದೊನ್ನತಿ ಮುಖ್ಯೋಪಾಧ್ಯಾಯ ಆರ್.ಪಿ. ಬೆಟಗೇರಿ ಅವರು ಆಯ್ಕೆ ಪ್ರಕ್ರಿಯೆಯನ್ನು ನೆರವೇರಿಸಿ, ಶಾಲೆಯ ಸವಾಂಗೀಣ ಅಭಿವೃದ್ಧಿಗೆ ಸಮಿತಿಯ ಹಾಗೂ ಗ್ರಾಮಸ್ಥರ ಸಹಕಾರ ಕೋರಿದರು.
ಈ ಸಂಧರ್ಭದಲ್ಲಿ ಗ್ರಾಮದ ಯುವ ಮುಖಂಡ ಕಲ್ಲಪ್ಪ ಜಗ್ಗಲ ಮಾತನಾಡಿ, ನಮ್ಮೂರಿನ ಶಾಲಾ ಮಕ್ಕಳಿಗೆ ಖಾಸಗಿ ಶಾಲೆಯವರಂತೆ ಟೈ, ಬೆಲ್ಟ್ ಹಾಗೂ ಐಡೆಂಟಿಟಿ ಕಾರ್ಡ ಮಾಡಿಸಿ ಕೊಡುವ ವಾಗ್ದಾನ ನೀಡಿದರು.
ಪಿ.ಎಲ್.ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ನಾರಾಯಣ ಹೂಲಗೇರಿ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಗ್ರಾಮಸ್ಥರೆಲ್ಲ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದು ಹೇಳುದರು. ಎಸ್.ಸಿ. ಹಲಗತ್ತಿ, ಬಸವರಾಜ ಗುಡ್ಡದ, ನಿಕಟಪೂರ್ವ ಅಧ್ಯಕ್ಷ ಜಗದೀಶ ರಾಯರಡ್ಡಿ, ನಿವೃತ್ತ ಶಿಕ್ಷಕ ವಿ.ಬಿ. ಸಂಗಳ, ಹನಮಂತ ಹಾಗನೂರ, ಎಸ್.ಆರ್. ಅತ್ತಾರ, ಸಮಿತಿಯ ಉಪಾಧ್ಯಕ್ಷೆ ಗಿರಿಜಾ ಅಜಗುಂಡಿ, ಮಲ್ಲಿಕಾರ್ಜುನ ಉಳ್ಳಾಗಡ್ಡಿ, ವೆಂಕಣ್ಣ ರಾಯರಡ್ಡಿ, ಬಸಪ್ಪ ಮಾದರ, ಬಸವರಾಜ ಕಿಲಬನೂರ, ಶಿಕ್ಷಕರಾದ ಮಂಜುನಾಥ ಹಂಪಿಹೊಳಿ, ಎಸ್.ಟಿ. ಪಾಟೀಲ, ಗೀತಾ ಆಲೂರ, ಗೀತ ನಾಯ್ಕಲ್, ಗಂಗಮ್ಮ ರಾಯರಡ್ಡಿ, ವಿನೋದಾ ಮಳಲಿ ಸೇರಿದಂತೆ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಕ್ತರ ಸಾಮಾಜಿಕ ಸೇವೆ ಮತ್ತಷ್ಟು ಪ್ರೇರಣೆ-ಹುಮ್ಮಸ್ಸು ನೀಡಿದೆ : ಮಲ್ಲಿಕಾರ್ಜುನ ಶ್ರೀಸಂಚಾರ ಸುಗಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಾಕೀತು ಭ್ರಷ್ಟಾಚಾರ ಎಸಗಿದ ಸಚಿವರನ್ನು ಕೈಬಿಡಲು ಆಗ್ರಹಿಸಿ  ಬಿಜೆಪಿವತಿಯಿಂದ ಪ್ರತಿಭಟನೆ ಶಾಶ್ವತ ಪುನರ್ವಸತಿ ಹಾಗೂ ಕಾನೂನುಬದ್ಧ ಎಲ್ಲಾ ಹಕ್ಕು-ಸೌಲಭ್ಯಗಳಿಗಾಗಿ ಮೊಳವಾಡ ಗ್ರಾಮಸ್ಥರ ಮನವಿಕೃಷ್ಣಾ ಮೇಲ್ದಂಡೆ ನಿರಾಶ್ರಿತರಿಗೆ KAS ನೇಮಕಾತಿಯಲ್ಲಿ ಮೀಸಲಾತಿ ನಿರಾಕರಣೆ - ಸರ್ಕಾರದ ವಿರುದ್ಧ ಕಿಸಾನ ಸಂಘ ಆಕ್ರೋಶಬಳ್ಳಾರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು: ಬಿಜೆಪಿ ರೈತ ಮೋರ್ಚಾ ಅಹೋರಾತ್ರಿ ಧರಣಿಆಗಸ್ಟ್‌ 10ರೊಳಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಿ: ತುಂಗಭದ್ರಾ ರೈತ ಸಂಘದ ಆಗ್ರಹವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ: 200 ಆಟೋಗಳೊಂದಿಗೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತ