LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಮಾನವ ಹಕ್ಕುಗಳ ಅರಿವು ಅಗತ್ಯ : ಡಾ.ರಘುವೀರ.ಜಿ.ಕುಲಕರ್ಣಿ

ವಿಜಯಪುರ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಬದುಕುವ ಅವಕಾಶವಿದೆ ಅದರಂತೆ ಸಂವಿಧಾನದಲ್ಲಿ ವಿಶೇಷವಾಗಿ ಮಾನವ ಹಕ್ಕುಗಳಡಿಯಲ್ಲಿ ಇಂದು ಬದುಕಲು ಅವಕಾಶ ಮಾಡಿಕೊಡಲಾಗಿದೆ ಎಂದು ಬಿಎಲ್‌ಡಿಇ (ಡಿಯು) ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಘುವೀರ ಜಿ.ಕುಲಕರ್ಣಿ ಹೇಳಿದರು.

ನಗರದ ಬಿಎಲ್.ಡಿ.ಇ ಸಂಸ್ಥೆಯ ಎಸ್.ಬಿ. ಕಲಾ  ಮತ್ತು ಕೆ.ಸಿಪಿ. ವಿಜ್ಞಾನ ಕಾಲೇಜಿನಲ್ಲಿ ಐಕ್ಯೂಎಸಿ ,ಮಾನವ ಹಕ್ಕುಗಳ ಕೋಶ ಮತ್ತು ರಾಜ ಶಾಸ್ತ್ರ ವಿಭಾಗದ ಸಹಯೋಗದಲ್ಲಿ ಏ.೧೦ ರಂದು ಜರುಗಿದ ಯುದ್ಧದ ಪರಿಣಾಮ: ಮಾನವ ಹಕ್ಕುಗಳ ದೃಷ್ಟಿಕೋನ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಾವುಗಳು ಮಾನವ ಹಕ್ಕುಗಳು ಅಡಿಯಲ್ಲಿ ಬದುಕುತ್ತಿದ್ದೇವೆ. ಅದರ ಅರಿವು ನಮಗಿರಬೇಕು. ಸಂವಿಧಾನದಲ್ಲಿರುವ ಮಾನವ ಹಕ್ಕುಗಳು ಮತ್ತು ವಿವಿಧ ಆರ್ಟಿಕಲ್ ಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.ಸದ್ಯ ಮಾನವ ಹಕ್ಕುಗಳನ್ನು ದಮನಿತ ಗೊಳಿಸಲಾಗತ್ತಿದೆ ಎಂಬುದು ಶೋಚನೀಯ ಸಂಗತಿಯಾಗಿದೆ.ಮೊದಲನೇ ಮತ್ತು ಎರಡನೇ ಜಾಗತಿಕ ಯುದ್ದಗಳು ಅಲ್ಲದೆ ವಾಸ್ತವದಲ್ಲಿ ಅಮೇರಿಕ,ಇಸ್ರೇಲ್ ಮತ್ತು ಇರಾನ್,ಲೆಬನಾನ್, ದೇಶಗಳ ನಡುವಿನ ಯುದ್ದದ ಪರಿಣಾಮದಿಂದಾಗಿ ಅಪಾರವಾದ ಹಾನಿಯನ್ನು ಇಲ್ಲಿ ಗಮನಿಸಬಹುದಾಗಿದೆ.ಇದರಲ್ಲಿ ಮಹಳೆಯರು ಮತ್ತು ಮಕ್ಕಳು ಬಲಿಗಾಗುತ್ತಿದ್ದಾರೆ.ವಿವಿಧ ದೇಶಗಳ ತಮ್ಮ ಅಂತರಿಕ ಕಲಹಗಳಿಂದ ಜೀವ ಸಂಕುಲ ನಷ್ಟಕ್ಕೀಡಾಗುತ್ತಿದೆ.ಇದರಿಂದ ಅನಾರೋಗ್ಯ,ಆಹಾರದ ಕೊರತೆ, ಮೂಲಸೌಲಭ್ಯಗಳ ಕೊರತೆ ಉಂಟಾಗಿ ಇದರಿಂದ ಮಾನವ ಹಕ್ಕಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ,ಇಂತಹ ಸಂದರ್ಭದಲ್ಲಿ ಆರೋಗ್ಯದ ಹಿತದೃಷ್ಟಿಯಿಂದ ತುರ್ತು ಪ್ರಥಮ ಚಿಕಿತ್ಸೆ ಕ್ರಮ ಕೈಗೊಳ್ಳುವುದು ಅಗತ್ಯ.ಯುದ್ಧದಿಂದಾಗಿ ಪರಿಸರ ವಿನಾಶ,ಅಲ್ಲದೆ ಶೈಕ್ಷಣಿಕ ಚಟುಚವಟಕೆಗಳಿಗೆ ಧಕ್ಕೆಯಾಗಿ ಮಕ್ಕಳು ಮತ್ತೊಂದು ಚಟಕ್ಕೆ ದಾಸರಾಗಿ ಭಯುತ್ಪಾದಕರಾಗಿ ಹೊರಹೊಮ್ಮುತ್ತಾರೆ. ಇಂತಹ ಸಂದಭದಲ್ಲಿ ಮಾನವ ಹಕ್ಕಗಳನ್ನು ಉಲ್ಲಂಘನೆಯಾಗುತ್ತದೆ ಎಂಬುದು ಗಮನಿಸಬಹುದು.ಅಂತಹ ಸಂದರ್ಭದಲ್ಲಿ ಕಠಿಣ ಕಾನೂನು ಕ್ರಮಕ್ಕೂ ಅವಕಾಶವಿದೆ ಎಂದು ಹೇಳಿದರು.
ಅಲ್ಲದೆ ನಮ್ಮ ದೇಶದಲ್ಲಿ ಕೋವಿಡ್ ಸಂದರ್ಭಲ್ಲಿ ನಾವು ಎದುರಿಸಿದ ಕೆಟ್ಟ ಪರಿಸ್ಥಿಯನ್ನು ಮರೆಯುವಂತಿಲ್ಲ ಅಂತಹ ಸಂದರ್ಭದಲ್ಲಿ ಮಾನವ ಹಕ್ಕುಗಳ ಮೇಲೆ ಕೆಟ್ಟ ಪರಿಣಾಮ ಬೀರಿದ್ದನ್ನು ಗಮನಿಸಬಹದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅನಿಲ್ ಬಿ. ನಾಯಕ,ಐಕ್ಯೂಎಸಿ ಸಂಯೋಜಕ  ಡಾ. ಪಿ. ಎಸ್. ಪಾಟೀಲ,ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ತರನ್ನುಮ್ ಜಬೀನ್ ಖಾನ್. ಮಾನವ ಹಕ್ಕುಗಳ ಕೋಶದ ಅಧ್ಯಕ್ಷೆ  ಪ್ರೊ.ರೂಪಾ ಎಸ್. ಮೋಟಗಿ, ಡಾ.ಗಿರೀಶ.ಹನಮರೆಡ್ಡಿ ಡಾ.ಆರ್.ಜಿ.ಕಮತರ, ಡಾ.ಎಂ.ಬಿ.ಪಾಟೀಲ, ಮಹಾವಿದ್ಯಾಲಯದ ಇನ್ನಿತರ ಬೋಧಕ,ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  ಭೀಮಶಿ ಮದರಕಂಡಿ ಕಾರ್ಯಕ್ರಮ ನಿರ್ವಹಿಸಿದರು

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್