LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಹಕ್ಕುಪತ್ರ ವಿತರಣೆಗೆ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘ ಒತ್ತಾಯ

ಬಳ್ಳಾರಿ,ಫೆ.05.: ಬಳ್ಳಾರಿ ಮಹಾನಗರದ ೩೬ನೇ ವಾರ್ಡಿನ ಶಾಸ್ತ್ರಿನಗರ ಬಡಾವಣೆಯ ನಿವಾಸಿಗಳಿಗೆ ೯೪ ಸಿಸಿ ಅಡಿಯಲ್ಲಿ ಹಕ್ಕುಪತ್ರಗಳನ್ನು ವಿತರಿಸಬೇಕೆಂದು ಸದರಿ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.

ಶಾಸ್ತಿçÃನಗರ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕರಾದ ಜೆ.ವಿ.ಮಂಜುನಾಥ್‌ರವರ ನೇತೃತ್ವದಲ್ಲಿ ಬಡಾವಣೆಯ ನಾಗರೀಕರು ಇಂದು ಬಳ್ಳಾ¬ರಿಯ ಜಿಲ್ಲಾಧಿಕಾರಿಗಳಾದ ನಾಗೇಂದ್ರ ಪ್ರಸಾದ್ ಹಾಗೂ ಸಹಾಯಕ ಆಯುಕ್ತರಾದ ಎಚ್.ಡಿ.ರಾಜೇಶ್, ಹಾಗೂ ತಹಸೀಲ್ದಾರರಾದ ರೇಖಾ, ಹಾಗೂ ನಗರ ಶಾಸಕರ ಸರ್ಕಾರಿ ಆಪ್ತ ಸಹಾಯಕರಾದ ಲಕ್ಷ್ಮೀನಾರಾಯಣ ಶಾಸ್ತ್ರಿ, ಇವರುಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ನಾವುಗಳು ಸುಮಾರು ೩೦೦ ಕುಟುಂಬಗಳು ೪೫ ವರ್ಷಕ್ಕೂ ಮೇಲ್ಪಟ್ಟು ಇಲ್ಲಿ ವಾಸಿಸುತ್ತಿದ್ದೇವೆ, ಮಹಾನಗರ ಪಾಲಿಕೆಗೆ ಆಸ್ತಿ ತೆರಿಗೆ, ವಿದ್ಯುತ್ ತೆರಿಗೆ, ನೀರಿನ ತೆರಿಗೆ, ಒಳಚರಂಡಿ ತೆರಿಗೆ, ಹಾಗೂ ಇತರ ತೆರಿಗೆಗಳನ್ನು ಕಟ್ಟುತ್ತಿದ್ದರು ಸಹ ನಮಗೆ ೯೪ ಸಿಸಿ ಅಡಿಯಲ್ಲಿ ಹಕ್ಕು ಪತ್ರಗಳನ್ನು ನೀಡಿರುವುದಿಲ್ಲ, ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕಾನೂನಾತ್ಮಕವಾಗಿ ಕೂಲಂಕುಶವಾಗಿ ಪರಿಶೀಲಿಸಿ ಶೀಘ್ರವಾಗಿ ನಮ್ಮ ಮನೆಗಳಿಗೆ ಹಕ್ಕುಪತ್ರ (ಪಟ್ಟಗಳನ್ನು) ವಿತರಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸ್ತಿç ನಗರ ಬಡಾವಣೆ ನಿವಾಸಿಗಳಾದ ಎರಿಸ್ವಾಮಿ, ಶಾಂತಮೂರ್ತಿ ಸ್ವಾಮಿ, ಈಶ್ವರಪ್ಪ, ಮ-ರಿಸ್ವಾಮಿ, ಅಂಗಡಿ ಬಸವ. ಶರಣಯ್ಯ ಸ್ವಾಮಿ, ಹುಸೇನ್ ಭಾಷಾ, ಉಪ್ಪಾರ ರಂಗಸ್ವಾಮಿ, ಅಜಾರ್‌ಬಾಷಾ, ಮೆಡಿಕಲ್ ಸ್ಟೋರ್ ಶಿವು, ಈರಣ್ಣ, ಚಂದ್ರಶೇಖರ್, ಸರಸ್ವತಿ, ರೇಣುಕಮ್ಮ, ಜಯಶ್ರೀ, ವನಜ, ಮಲ್ಲಮ್ಮ,ಶಾಂಭವಿ, ಜಯಮ್ಮ, ಶಾಂತಿ, ದುರ್ಗಮ್ಮ, ಗೀತಾ, ಲೀಲಾವತಿ, ರೇಣುಕಮ್ಮ, ಲಕ್ಷ್ಮಿ, ಶಿವಮ,್ಮ ಮುಂತಾದವರು ಉಪಸ್ಥಿತ¬ರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್