LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಮದುವೆ ಸಮಾರಂಭದಲ್ಲಿ " ಬಸವ ಪಥ"  ವಿಶೇಷ ಸಂಚಿಕೆ ಲೋಕಾರ್ಪಣೆ*

ಬೈಲಹೊಂಗಲ: ನಗರದ  ಬೈಪಾಸ್ ರಸ್ತೆಯಲ್ಲಿರುವ  ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ  ವಿಶ್ವ ಯೋಗ ದಿನದ ನಿಮಿತ್ತ  ಚಿ. ಶಿವಾನಂದ - ಚಿ. ಕು. ಸೌ. ಕಾ  ಗಂಗಮ್ಮ ಅವರ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಮೂಡಲಗಿ ತಾಲ್ಲೂಕಿನ ಹುಣಶ್ಯಾಳ ಚೈತನ್ಯ ಶಾಲೆಯ ನವೋದಯ, ಆಳ್ವಾಸ್ ವಿವಿಧ ವಸತಿ ಶಾಲೆ ಪರೀಕ್ಷೆಯ ಪರಿಣಿತ ತರಬೇತುದಾರಾದ ಶಿವಾನಂದ ಬಸನಾಯ್ಕ ಪಟ್ಟಿಹಾಳ(ಇಂಚಲ) ಅವರು ರಚಿಸಿದ   *ಬಸವಪಥ ವಿಶೇಷ ಸಂಚಿಕೆ*  ಅನೇಕ ಹಿರಿಯರ ಸಮ್ಮುಖದಲ್ಲಿ  ಲೋಕಾರ್ಪಣೆಗೊಳಿಸಿದರು.
      ಲೇಖಕ, ಶಿಕ್ಷಕ ಶಿವಾನಂದ ಪಟ್ಟಿಹಾಳ ಮಾತನಾಡಿ  ಯೋಗವು ವಿಶ್ವಕ್ಕೆ ಭಾರತದ ಅಮೂಲ್ಯ ಕೊಡುಗೆ. ಜೂನ್ ತಿಂಗಳ 21ನೇ ದಿನ ಇಡೀ ವಿಶ್ವವೇ ಯೋಗದ ಅಭ್ಯಾಸ ರೂಢಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ದೀರ್ಘ ಆಯುಷ್ಯ ಸುಖೀ ಜೀವನ ಹೊಂದಲಿ ಎಂಬುದು ನಮ್ಮ ದೇಶದ ಗುರಿಯಾಗಿದೆ ಎಂದು ಹೇಳುತ್ತಾ. ಶರಣರು ಕಾಯಕ ಲಿಂಗಾರ್ಚನೆ ಮೂಲಕ ಯೋಗವನ್ನು ವಚನಗಳಲ್ಲಿ ಉಲ್ಲೇಖ ಮಾಡಿರುವುದು ಮೇಲಿನ ವಚನದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹೇಳಿದರು.                  
            ಕಾರ್ಯಕ್ರಮ ಕುರಿತು ಮಾತನಾಡಿದ ಬಸವ ಸಮಿತಿ ಹಿರಿಯ ನಿರ್ದೇಶಕರಾದ ಮೋಹನ ಪಾಟೀಲ ಮಾತನಾಡಿ    ನಾವು ಕೇವಲ ದೈಹಿಕ ಆರೋಗ್ಯವನ್ನಷ್ಟೇ ಅಲ್ಲ, ಮಾನವೀಯತೆ, ಪ್ರೀತಿ, ಸಮಾನತೆ ಮತ್ತು ಆತ್ಮಜಾಗೃತಿಯನ್ನು ಬೆಳೆಸಬೇಕಾಗಿದೆ. ಬಸವಾದಿ ಶರಣರ ವಚನಗಳು ವಿಶ್ವಶಾಂತಿಯ ದಾರಿದೀಪಗಳಾಗಿವೆ. ವಿಶ್ವದ ಸರ್ವರಿಗೂ ವಚನ ತತ್ವ ತಲುಪಿದರೆ, ಮಾನವಕುಲ ಶಾಂತಿಯುತವಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
           ಯುವ ಮುಖಂಡ ಸಚಿನ ಪಾಟೀಲ  ಮಾತನಾಡಿ  ನಾವು ಬದುಕಿನುದ್ದಕ್ಕೂ ಸನ್ನಡತೆ, ಸದ್ವಿಚಾರಗಳ ಪಾಠ ಕೇಳಿಕೊಂಡು ಅದರಂತೆ ನಡೆಯುತ್ತಾ ಹೋದರೆ ನಮ್ಮ ಬದುಕು ಸಾರ್ಥಕ ಆಗುತ್ತದೆ.ಇಂತಹ ಮದುವೆ ಸಮಾರಂಭದಲ್ಲಿ ಬಸವ ಪಥ ಪುಸ್ತಕ ಬಿಡುಗಡೆ ಖುಷಿ ತಂದಿದೆ ಎಂದರು.
          ಕಾರ್ಯಕ್ರಮದಲ್ಲಿ ಮಾಜಿ ನಗರ ಸಭಾ ಸದಸ್ಯ ಶಿವಾನಂದ ಬೆಟಗೇರಿ, ಶಿವಾನಂದ ರುದ್ರಪ್ಪ ಹಾವಣ್ಣವರ, ಗಂಗಮ್ಮ ಶಿವಾನಂದ ಹಾವಣ್ಣವರ,ಬಿಜೆಪಿ ಹಿರಿಯ ಮುಖಂಡ ಮಲ್ಲಿಕಾರ್ಜುನ ತುಬಾಕಿ, ಚನ್ನಮ್ಮನ ಕಿತ್ತೂರು ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚನ್ನಬಸಪ್ಪ  ತುಬಾಕಿ, ರುದ್ರವ್ವ ಬಸನಾಯ್ಕ ಪಟ್ಟಿಹಾಳ, ನೇಸರಗಿ ಭಾಗದ ಯುವ ಮುಖಂಡ ಸಚಿನ ಯಲ್ಲನಗೌಡ ಪಾಟೀಲ,ಡಾ. ಪ್ರಕಾಶ ಹಳ್ಯಾಳ, ಯುವ ಮುಖಂಡ ಪ್ರದೀಪ ದೊಡ್ಡಗೌಡರ,
 ರುದ್ರಪ್ಪ ಶಿ. ಹಾವಣ್ಣವರ, ಪಾರ್ವತೆವ್ವ ರು. ಹಾವಣ್ಣವರ, ನಾಗರಾಜ ಮ. ತುಬಾಕಿ ಸೇರಿದಂತೆ ಅನೇಕರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್