LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸಂಪತ್ತಿನ ಸಮಾನ ಹಂಚಿಕೆ ಬಸವಣ್ಣನವರ ಆದರ್ಶ : ಡಾ. ಯಲ್ಲಪ್ಪ ಹಿಮ್ಮಡಿ 

 

ಬೆಳಗಾವಿ - 20 : ಸಾಮಾಜಿಕ ತಾರತಮ್ಯದ ಬೇರುಗಳು ಆರ್ಥಿಕ ಅಸಮಾನತೆಯಲ್ಲಿರುವುದರಿಂದ ಸಾಮಾಜಿಕ ಸಮಾನತೆ ತರಲು ಸಂಪತ್ತಿನ ಸಮಾನ ಹಂಚಿಕೆಯಾಗಬೇಕೆಂಬುದು ಬಸವಣ್ಣನವರ ಆದರ್ಶವಾಗಿತ್ತು ಎಂದು ಬಂಡಾಯ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ ಹೇಳಿದರು. ಅವರಿಂದು ನಗರದ ಮಾನವ ಬಂಧುತ್ವ ವೇದಿಕೆಯ ಕೇಂದ್ರ ಕಚೇರಿ ಸಭಾಂಗಣದಲ್ಲಿ ಸ್ಥಳೀಯ ಮಾನವ ಬಂಧುತ್ವ ವೇದಿಕೆಯು ಏರ್ಪಡಿಸಿದ್ದ ಮಾನವತಾವಾದಿ ಬಸವಣ್ಣನವರ ಜನ್ಮದಿನ ಸಮಾರಂಭದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
    ಮೇಲು ಕೀಳು, ಬಡವ  ಬಲ್ಲಿದ, ಗಂಡು ಹೆಣ್ಣು ತಾರತಮ್ಯಕ್ಕೆ ಮೂಲ ಕಾರಣ ಆರ್ಥಿಕ ಅಸಮಾನತೆಯಾಗಿರುವುರಿಂದ ಅದನ್ನು ಪಲ್ಲಟಗೊಳಿಸುವುದು ಬಸವಣ್ಣನವರ ಉದ್ದೇಶವಾಗಿತ್ತು. ಬುದ್ಧನ ನಂತರ ಸಂಪತ್ತಿನ ಕ್ರೋಢೀಕರಣವನ್ನು ವೈಚಾರಿಕ ನೆಲೆಯಲ್ಲಿ ವಿರೋಧಿಸಿದ ಬಸವಣ್ಣನವರು ಕಾಯಕ ಮತ್ತು ತ್ರಿವಿಧ ದಾಸೋಹದ ಮೂಲಕ ಆರ್ಥಿಕ ಸಮಾನತೆಗೆ ಹೊಸ ದಾರಿ ತೋರಿದರು  ಎಂದು ಡಾ. ಹಿಮ್ಮಡಿ ವಿವರಿಸಿದರು.
      ಆರಂಭದಲ್ಲಿ ಶ್ರೀಮತಿ ಶಾಂತಾ ಕೋಲ್ಕಾರ್ ಮತ್ತು ಶ್ರೀಮತಿ ಕಾವೇರಿ ಗಾವಡೆ ಬಸವಣ್ಣನವರ ಭಾವಚಿತ್ರಕ್ಕೆ ಆರತಿ ಬೆಳಗಿ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಬಸವರಾಜ ಕೋಲ್ಕಾರ್, ಸನ್ನಿ ಬನ್ಸ್, ಭಾಗ್ಯಶ್ರೀ ಗಾವಡೆ, ತೇಜಸ್ ಗಾವಡೆ, ಸ್ವಾನಂದಿ ಗಾವಡೆ, ಅಂಕುಶ ಗಾವಡೆ, ಮನೋಜ ನೇಸರಿಕರ ಇತರರು ಉಪಸ್ಥಿತರಿದ್ದರು. ಪ್ರಕಾಶ್ ಬೊಮ್ಮಣ್ಣವರ್ ಸ್ವಾಗತಿಸಿದರು, ಅಂಕುಶ್ ಪಾಟೀಲ ವಂದಿಸಿದರು, ಕಿರಣ ಕಾಂಬಳೆ ನಿರೂಪಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್