LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಬಳ್ಳಾರಿಗೆ ಪ್ರಥಮ ಸ್ಥಾನ 


ಬಳ್ಳಾರಿ:06. ಹುಬ್ಬಳ್ಳಿಯಲ್ಲಿ ಸದ್ಗುರು ಶ್ರೀ ಸಿದ್ದಾರೂಢಮಹಾಸ್ವಾಮಿಯವರ ಜಯಂತ್ಯೋತ್ಸವ  ಅಂಗವಾಗಿ ಮಠದ ಶ್ರೀ ಮಠದ ಕೈಲಾಸ ಮಂಟಪದ ಶ್ರೀಮನ್ನಿಜಗುಣಶಿವಯೋಗಿ ಭಜನಾ ವೇದಿಕೆಯಲ್ಲಿ  ಮಾ.29 ರಿಂದ ಏ.4ವರೆಗೆ ಆಯೋಜಿಸಿದ್ದ 11ನೇ ವರ್ಷದ "ರಾಜ್ಯಮಟ್ಟದ ಭಜನಾ ಸ್ಪರ್ಧೆಯಲ್ಲಿ ಬಳ್ಳಾರಿ ಜಿಲ್ಲೆಯ ಶ್ರೀ ಮನ್ನಿಜಗುಣಶಿವಯೋಗಿ ತತ್ವಪದ ಮತ್ತು ಜನಪದ ಕಲಾ ತಂಡ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದೆ.

ಪ್ರಶಸ್ತಿ ಪತ್ರ, ಸನ್ಮಾನ ಹಾಗು 1.11 ಲಕ್ಷ ಪ್ರಥಮ ಬಹುಮಾನ ನೀಡಿ ಗೌರವಿಸಿದೆ.

ಭಜನಾ ಸ್ಪರ್ಧೆಯಲ್ಲಿ ಗುರುಗಳಾದ ಯಲ್ಲಾಪುರ ಬಸಪ್ಪ, ಗಾಯಕರಾಗಿ ಕಪ್ಪಗಲ್ಲು  ಗಂಗಾಧರ ಸ್ವಾಮಿ, ಯಲ್ಲಾಪುರ ಬಿ ಬಾಬು ಸ್ವಾಮಿ, ಹಾರ್ಮೋನಿಯಂ ಸಾಥ್  ಜಿ ಮಹಾಲಿಂಗಯ್ಯ, ಡಗ್ಗ ವಾದಕ ಎ ಕೆ ತಿಪ್ಪೇಸ್ವಾಮಿ, ತಾಳ ಮತ್ತು  ಹಿಮ್ಮೇಳದಲ್ಲಿ ವೀರೇಶ, ಹೆಚ್ ಪಶುಪತಿಗೌಡ, ಪ್ರಕಾಶ್, ಎಂ. ಪಿ.ವಿಜಯಕುಮಾ‌ರ್ ಅವರು ಭಾಗವಹಿಸಿದ್ದರು.

ಮಠದಲ್ಲಿ ನಡೆದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಬಳ್ಳಾರಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆಂದು ಸಿರಿಗೇರಿ ಸಾಂಸ್ಕೃತಿಕ ಬಯಲಾಟ ಕಲಾ ಟ್ರಸ್ಟ್ ಅಧ್ಯಕ್ಷರು ಹಾಗು ಹಿರಿಯ ಪತ್ರಕರ್ತ ಸಿದ್ದರಾಮಪ್ಪ‌ ಸಿರಿಗೇರಿ, ಪ್ರಧಾನ ಕಾರ್ಯದರ್ಶಿ ಡಿ.ಪರಶುರಾಮಪ್ಪ ಸೇರಿದಂತೆ ಮತ್ತಿತರರು ಅಭಿನಂದಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್