LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

೧೦ ಕೋಟಿ  ಸದಸ್ಯತ್ವ ಪಡೆದುಕೊಂಡ ಏಕೈಕ ದೊಡ್ಡ ಪಕ್ಷ ಬಿಜೆಪಿ : ಡಾ. ಮುರುಗೇಶ ನಿರಾಣಿ

 ಬೀಳಗಿ-  ದೇಶದಲ್ಲಿಯೇ ೧೦ ಕೋಟಿ ಜನರ  ಸದಸ್ಯತ್ವ ಪಡೆದುಕೊಂಡ ಏಕೈಕ ದೊಡ್ಡ ಪಕ್ಷ ಭಾರತೀಯ ಜನತಾ ಪಕ್ಷ. ಪ್ರಧಾನಿ ನರೇಂದ್ರ ಮೋದಿಜೀಯವರ ಜನಪರ ಆಡಳಿತ ಇದಕ್ಕೆ ಸಾಕ್ಷೀಯಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವರಾದ ಡಾ, ಮುರುಗೇಶ ಆರ್.ನಿರಾಣಿ ಹೇಳಿದರು.
ಬೀಳಗಿ ಕ್ರಾಸ್ ಹತ್ತಿರದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಶನಿವಾರ ನಡೆದ ಪಂ ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ-೨೦೨೬ ಬೀಳಗಿ ವಿಧಾನ ಸಭಾ ಕ್ಷೇತ್ರದ ಮಂಡಲ ಮಟ್ಟದ ಪ್ರಶಿಕ್ಷಣ ವರ್ಗ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 
   ಎಂಎಲ್‌ಎ, ಎಪಿಂಗಳಿಗೆ ಗೆಲಿಸಿದರೆ ಸಾಲದು ನಮಗೆ ಬೇಕಾಗಿರುವುದು ಗ್ರಾಮ ಮಟ್ಟದ ಗ್ರಾಮ ಪಂಚಾಯತ, ತಾಲೂಕಾ ಹಾಗೂ ಜಿಲ್ಲಾ ಪಂಚಾಯತ ಚುನಾವಣೆ ಗೆಲುವು ಬಹಳ ಮುಖ್ಯ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ   ಬಿಜೆಪಿ ಸರ್ಕಾರ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬರುವಂತೆ ಮಾಡಿದಾಗ ನಮ್ಮ ಗ್ರಾಮ, ರಾಜ್ಯ ಹಾಗೂ ದೇಶ ಅಭಿವೃದ್ದಿ ಹೊಂದಲು ಸಾಧ್ಯ ಎಂದರು.
ಬೇರೆ ದೇಶದಲ್ಲಿ ಹೋದಾಗ ನಮ್ಮ ದೇಶದ ಗೌರವ ಹೆಚ್ಚಿಸುವ ಕೆಲಸ ನಡೆಯಬೇಕಾಗಿದೆ. ನಮ್ಮ ದೇಶವು ಅಭಿವೃದ್ಧಿಯ ಸಂಕೇತವಾಗಿದೆ. ನಮ್ಮ ರೈತರು ಯಾವ ಬೆಳೆ ಬೆಳೆದರೆ ಅದನ್ನು ತಿಳಿದು ಬೆಳೆಗಳನ್ನು ಬೆಳೆದರೆ ರೈತರು ಸಮೃದ್ಧ ಅರ್ಥಿಕ ಮಟ್ಟ ಸುಧಾರಿಸಿ ಕೊಳ್ಳಬಹುದು. ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ಬೂತ ಮಟ್ಟದ ಪ್ರಮುಖರು ತಮಗೆ ನೀಡಿದ ಜವಾಬ್ದಾರಿಯಿಂದ ಕೆಲಸ ಮಾಡಿ ಬೂತ ಮಟ್ಟದಲ್ಲಿ ಗೆದ್ದರೆ ಮಾತ್ರ ಮುಂದಿನ ಎಲ್ಲವೂ ಗೆಲ್ಲಲು ಸಾಧ್ಯ. ನನ್ನ ಅಧಿಕಾರ ಅವಧಿಯಲ್ಲಿ ಯಾವ ಕೆಲಸ ಮಾಡಿದ್ದೇವೆ. ಈಗಿನ ಶಾಸಕ ಜೆ.ಟಿ.ಪಾಟೀಲರು ಬೀಳಗಿ ಮತಕ್ಷೆತ್ರದಲ್ಲಿ ಯಾವ ಕೆಲಸ ಮಾಡಿದ್ದಾರೆ ಅನುವುದನ್ನು ಜನರ ಮುಂದೆ ತಿಳಿಸಿ. ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಅಭಿವೃದ್ಧಿ ಯೋಜನೆಗಳು ಕುರಿತು ಪ್ರತಿಯೊಂದು ಮತದಾರರ ಮನಗಳಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು
ನನ್ನ ಅಧಿಕಾರ ಅವಧಿಯಲ್ಲಿ ಮತಕ್ಷೇತ್ರದ ದೇವಸ್ಥಾನಗಳ ಅಭಿವೃದ್ದಿಗೆ ೪೦ ಕೋಟಿ ಅನುದಾನ ತಂದಿದ್ದು ಆದರಲ್ಲಿ ೪೦೦ ದೇವಸ್ಥಾನಕ್ಕೆ ಅನುದಾನ ಬಿಡುಗಡೆ ಮಾಡಲಾಗಿತ್ತು ಆದರೆ ಕೆಲವು ದಿನಗಳಲ್ಲಿ ಚುನಾವಣಾ ಬಂದಾಗ ಅವರ ಕೈಯಲ್ಲಿ ಅಧಿಕಾರ ಬಂದಾಗ ಅವುಗಳನ್ನು ಬೇರೆ ಬೇರೆ ಕಡೆ ಹಾಕಿದ್ದಾರೆ. ತಮ್ಮದೇಯಾದ ಸರ್ಕಾರದ ಅನುದಾನ ತಂದು ಮಾಡಿದ್ದೇವೆ ಅಂತಾ ಹೇಳ ಬಹುದಾಗಿತು. ಮತದಾರರ ಮತಪಟ್ಟಿಯಲ್ಲಿ ನೈಜ ಮತದಾರರನ್ನು ಬಿಟ್ಟು ಬೇರೆ ಬೇರೆ ಕಡೆ ಇರುವ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಮತ್ತು ಮೃತಗೊಂಡವರ ಹೆಸರು ಕಡಿಮೆಯಾಗುವಂತೆ ನೋಡಿಕೊಳ್ಳಬೇಕು. ನಮ್ಮ ಜಿಲ್ಲೆಯಲ್ಲಿ ಬೋಗಸ ಮತದಾರರು ಹೆಚ್ಚು ಜನ ಇದ್ದಾರೆ ಅವುಗಳನ್ನು ಸೂಕ್ತ ಪರಿಸೀಲನೆ ಮಾಡಿ ಚುನಾವಣಾದಿಕಾರಿಗಳ ಗಮನಕ್ಕೆ ತರಬೇಕು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಡಾ, ಮುರುಗೇಶ ನಿರಾಣಿ. ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರಿ ಮಾತನಾಡಿ, ರಾಷ್ಟ್ರೀಯ ನಿರ್ಮಾಣದ ವಿಚಾರ ದಾರೆಗಳನ್ನು ಪ್ರತಿಯೊಬ್ಬ ಮನದಲ್ಲಿ ತುಂಬುವ ಮನೋಭಾವ ಹೊಂದಿದ್ದು ಭಾರತೀಯ ಜನತಾ ಪಾರ್ಟಿ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದು ಭಾರತೀಯ ಜನತಾ ಪಾರ್ಟಿಯ ಚಿಂತನೆ ಅಭಿವೃದ್ದಿ ಪರವಾದ ಚಿಂತನೆ. ಪ್ರಧಾನಿ ನರೇಂದ್ರಯವರ ಪರಿಕಲ್ಪನೆ ಯಾರು ಊಹಿಸದಷ್ಟು ಕೆಲಸ ಮಾಡಿದ್ದಾರೆ. ದೋಶರಹಿತ ಮತದಾರರ ಪಟ್ಟಿಯಾಗಬೇಕು. ಕಾಂಗ್ರೆಸ್ ಪಕ್ಷವು ತನ್ನ ಸ್ವಾರ್ಥದ ಭಾವನೆಯಿಂದ ಬಂದಿದೆ. ನಮ್ಮ ಭಾರತೀಯ ಸಂಸ್ಕೃತಿ ಪರಂಪರೆಗೆ ತಿಲಾಂಜಲಿ ಇಟ್ಟಿದೆ. ಯುವ ಜನತೆ ಜಾಗೃತರಾಗಿ ಕಾಂಗ್ರೆಸ್ ಪಕ್ಷದ ಬುಡವೇ ಇಲ್ಲದಂತೆ ಮಾಡುವ ಸಂಕಲ್ಪ ಮಾಡಬೇಕಾಗಿದೆ ಎಂದರು.  
ವಿಧಾನ ಪರಿಷತ್ ಶಾಸಕ ಎಚ್.ಅರ್.ನಿರಾಣಿ, ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಹೂವಪ್ಪ ರಾಠೋಡ, ಬಿಜೆಪಿ ತಾಲೂಕಾ ಅಧ್ಯಕ್ಷ ಹೊಳಬಸು ಬಾಳಾಶಟ್ಟಿ, ಪ್ರಧಾನ ಕಾರ್ಯದರ್ಶಿ ಗಂಗಾಧರ ಬಿಂಗಿ, ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ, ಮಲ್ಲಪ್ಪ ಶಂಭೋಜಿ, ಸಂಗಪ್ಪ ಕಟಗೇರಿ, ರಾಮಣ್ಣ ಕಾಳಪ್ಪಗೋಳ, ಶ್ರೀಶೈಲ ಗೌರಿ, ನ್ಯಾಯವಾದಿ ಮಹಾಂತೇಶ ಕೋಲಕಾರ, ಎಂ.ಬಿ.ಬೂಸರಡ್ಡಿ, ಮಿಥುನ ನಾಯಕ, ಬಸವಂತಪ್ಪ ಸಂಕಾನಟ್ಟಿ, ಕೆಎಂಎಫ್ ನಿರ್ದೇಶಕ ಸಿದ್ದಪ್ಪ ಕಡಪಟ್ಟಿ, ಮೋಹನ ಜಾಧವ ವಿಜಯಲಕ್ಷ್ಮಿ ಪಾಟೀಲ, ಚಂದ್ರಕಾಂತ ಕೆಸನೂರ, ಈರಣ್ಣ ತೋಟದ, ಶಂಕರ ಹುಣೂರ ಹಾಗೂ ಇನ್ನೂ ಅನೇಕರು ಪಾಲ್ಗೊಂಡಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್