LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ನೇಸರಗಿಯಲ್ಲಿ ಸಂಭ್ರಮದ ಡಾ. ಅಂಬೇಡ್ಕರ ಜಯಂತಿ ಆಚರಣೆ.

ನೇಸರಗಿ. ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ, ಭಾರತ ರತ್ನ  ಡಾ. ಬಾಬಾಸಾಹೇಬ  ಅಂಬೇಡ್ಕರ ಅವರ  135 ನೇ  ಜಯಂತಿಯನ್ನು ನೇಸರಗಿ ಗ್ರಾಮದಲ್ಲಿ ಸಡಗರ, ಸಂಭ್ರಮದಿಂದ  ಗ್ರಾಮದ ಬೀದಿಗಳಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆ ಮಾಡಿ  ಅದ್ದೂರಿಯಾಗಿ ಆಚರಿಸಲಾಯಿತು.

    ಈ ಸಂದರ್ಭದಲ್ಲಿ ಡಿ ಎಸ್ ಎಸ್ ರಾಜ್ಯಾಧ್ಯಕ್ಷರಾದ ಸುರೇಶ ರಾಯಪ್ಪಗೋಳ ಮಾತನಾಡಿ ದೇಶಕಂಡ ಅಪರೂಪದ ನಾಯಕರಾಗಿ ಶ್ರದ್ದೆ, ಬುದ್ದಿ, ಜ್ಞಾನದಿಂದ ಮುಂದೆ ಬಂದು ಸಮಾನತೆ ಸಾರಿದ ಮಹಾನ ಪುರುಷರಾಗಿ ಬೆಳೆದು ಬಂದು ದೇಶದ ಅದ್ಬುತ ಸಂವಿಧಾನ ಬರೆದು ಭಾರತ ದೇಶದ ಮಹಾನ ನಾಯಕರಾಗಿದ್ದರು ಎಂದರು.

   ಯುವ ಮುಖಂಡ ಸಚಿನ ಪಾಟೀಲ ಮಾತನಾಡಿ 12 ಶತಮಾನದಲ್ಲಿ ಅಣ್ಣ ಬಸವಣ್ಣನವರು ಸಮಾನತೆಗಾಗಿ ಹೋರಾಟ ಮಾಡಿ ಅಡಿಪಾಯ ಹಾಕಿದ್ದರು. ಸ್ವಾತಂತ್ರ್ಯ ನಂತರ ಅದ್ಬುತ ಭಾರತ ಸಂವಿಧಾನ ರಚಿಸಿ ದೇಶ ಮುಂದೆ ಸಾಗಲು ನಡೆದುಕೊಳ್ಳುವ ಕಾನೂನು, ಸಮಾನತೆ,ಶಿಸ್ತು, ನಿಯಮ ಪಾಲನೆ ಕುರಿತು ಸವಿಸ್ತಾರವಾಗಿ ಬರೆದಿದ್ದಾರೆ ಎಂದರು.


  ಸಿಪಿಐ  ಗಜಾನನ ನಾಯಕ ಮಾತನಾಡಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರು  ನಡೆದು ಬಂದ ಹಾದಿಯಲ್ಲಿ  ಇಂದಿನ ಯುವಕರು ಸಾಗಬೇಕು ಎಂದರು.

   ಕಾರ್ಯಕ್ರಮದಲ್ಲಿ     ಅಡಿವಪ್ಪ ಮಾಳನ್ನವರ,ನಿಂಗಪ್ಪ ಚಿಗರಿ, ಡಾ. ಪ್ರಕಾಶ ಹಳ್ಯಾಳ, ನಿಂಗಪ್ಪ ತಳವಾರ, ,ಶಿಕ್ಷಕ ಸಂತೋಷ ಪಾಟೀಲ,ಮಂಜು ಮದ್ದೇನ್ನವರ,ಮಲ್ಲಿಕಾರ್ಜುನ ಕಲ್ಲೋಳಿ,

 ಸುರೇಶ ಲೆಂಕನಟ್ಟಿ ,  ಡಾ. ಆರಿಫ್ ಜಮಾದಾರ, ಡಾ. ಬಸವಣ್ಣೆಪ್ಪ ಕುಂದರನಾಡು,  ನೇಸರಗಿ ಗ್ರಾಮದ ಹಿರಿಯರು, ಡಿ ಎಸ್ ಎಸ್ ಪಧಾಧಿಕಾರಿಗಳು, ಯುವಕರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್