LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಗೌರವಾಧ್ಯಕ್ಷರಾಗಿ ಚಂದ್ರಶೇಖರ ಕವಲೂರು, ಅಧ್ಯಕ್ಷರಾಗಿ ಸಂತೋಷ ದೇಶಪಾಂಡೆ ಆಯ್ಕೆ



ಕೊಪ್ಪಳ,ಜು,೨೦ : ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಹೋರಾಟ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು ನಮ್ಮ ಭಾಗದ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಚಾಮರಸ ಪಾಟೀಲ್ ಹೇಳಿದರು.
ಅವರು ಶನಿವಾರದಂದು ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಜರುಗಿದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸೇರಿದಂತೆ ಇತರ ವಿಷಯಗಳ ಕುರಿತು ಜರುಗಿದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು.
ಸಮಿತಿಯ ಕೊಪ್ಪಳ ಜಿಲ್ಲಾ ಗೌರವಾಧ್ಯಕ್ಷರಾಗಿ ಚಂದ್ರಶೇಖರ ಕವಲೂರು, ಜಿಲ್ಲಾಧ್ಯಕ್ಷರಾಗಿ ಸಂತೋಷ ದೇಶಪಾಂಡೆ, ಕಾರ್ಯಾಧ್ಯಕ್ಷರಾಗಿ ಮಂಜುನಾಥ ಗೊಂಡಬಾಳ ಹಾಗೂ ಹುಲಗಪ್ಪ ಕಟ್ಟಿಮನಿ, ಉಪಾಧ್ಯಕ್ಷರಾಗಿ ಸಾವಿತ್ರಿ ಮುಜುಮದಾರ, ಹಾಗೂ ಮಹಾದೇವಪ್ಪ ಎಸ್. ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಜಿ. ಸಂಕನಗೌಡರ, ಕೋಶಾಧ್ಯಕ್ಷರಾಗಿ ಮಂಜುನಾಥ ಅಂಗಡಿ, ಸಂಘಟನಾ ಕಾರ್ಯದರ್ಶಿಯಾಗಿ ಆನಂದ ಹಳ್ಳಿಗುಡಿ ಹಾಗೂ ಸೋಮನಗೌಡ ಹೊಗರನಾಳ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಹಾಗೂ ಕೊಪ್ಪಳ ಜಿಲ್ಲೆಯ ಉಳಿದ ತಾಲೂಕು ಮತ್ತು ಜಿಲ್ಲಾ ಉಳಿದ ಹುದ್ದೆಗಳ ನೇಮಕವನ್ನು ಬರುವ ದಿನಗಳಲ್ಲಿ ಮಾಡುವಂತೆ ತಿಳಿಸಿದರು.
ನೂತನ ಸಮಿತಿ ರಚನೆಯ ನಂತರ ಕಲ್ಯಾಣ ಕರ್ನಾಟಕ ಭಾಗದ ೭ ಜಿಲ್ಲೆಗಳಿಗೆ ಕೇಂದ್ರ ಸಮಿತಿ ಸಂಚರಿಸುತ್ತಿದ್ದು, ಸಂಘಟನೆ ಚುರುಕುಗೊಳಿಸಲಾಗುತ್ತಿದೆ. ಆ.೮ ಮತ್ತು ೯ರಂದು ಕೊಪ್ಪಳ ಜಿಲ್ಲೆಯ ತಾವರಗೇರೆಯಲ್ಲಿ ಅಧ್ಯಯನ ಶಿಬಿರ ಹಾಗೂ ಸೆ.೧೭ರಂದು ೧೦೦೦೦ ಜನರೊಂದಿಗೆ ಕಲಬುರಗಿ ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದು ಎಲ್ಲಾ ತಾಲೂಕುಗಳಿಂದ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಬಿ.ಬಸವರಾಜ್ , ಜಾನ್ ವೆಸ್ಲಿ , ರಮೇಶ ತುಪ್ಪದ, ಶಿವಕುಮಾರ ಕುಕನೂರು, , ಆರ್.ಕೆ ದೇಸಾಯಿ , ರವಿಕಾಂತನವರ,  ಶರಣು ಡೊಳ್ಳಿನ, ಅಶೋಕ ಕುಂಬಾರ, ಶಾಂತಯ್ಯ ಅಂಗಡಿ, ಯಲ್ಲಪ್ಪ ಬಂಡಿ, ಗವಿಸಿದ್ದಪ್ಪ ಹಲಗಿ, ಪಿ. ಬಸನಗೌಡ, ಬಸವರಾಜ, ಅಡವೆಪ್ಪ ಕುಷ್ಟಗಿ, ಬಸವರಾಜ ಎಸ್ ಗಾಣಿಗೇರ, ಬಿ. ಗೋಣಿಬಸಪ್ಪ ಸೇರಿದಂತೆ ಕೊಪ್ಪಳ , ಕುಷ್ಟಗಿ ಹಾಗೂ ವಿವಿಧ ತಾಲೂಕಿನ ಹಿರಿಯ ಮತ್ತು ಯುವ ಪ್ರಗತಿಪರ ಚಿಂತಕರು ಮತ್ತು ಹೋರಾಟಗಾರರು ಸಭೆಯಲ್ಲಿ ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್