LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಚಿನ್ಮಯ ಕಲಾಶ್ರೀ' ಪ್ರಶಸ್ತಿಗೆ ಭಾಜನರಾದ ಬಸವರಾಜ ಅಡವಳ್ಳಿ 


ಗದಗ, 23 : ಜಿಲ್ಲೆಯ ಸಾಂಸ್ಕೃತಿಕ ಪರಿಸರದಲ್ಲಿ ರಂಗಭೂಮಿಯನ್ನು ಪ್ರಮುಖವಾಗಿಸಿಕೊಂಡು ತನ್ನದೇ ಆದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳ ಮೂಲಕ ಸಾಂಸ್ಕೃತಿಕ ಲೊಕದ ಸೇವೆ ಸಲ್ಲಿಸುತ್ತಿರುವ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿಯು ಕಳೆದ ಹತ್ತು ವರ್ಷಗಳಿಂದ ವಿಶ್ವರಂಗಭೂಮಿ ದಿನಾಚರಣೆಯನ್ನು ಆಚರಿಸುತ್ತ, ರಂಗಭೂಮಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಹಿರಿಯ ರಂಗಕಲಾವಿದರಿಗೆ 'ಚಿನ್ಮಯ ಕಲಾಶ್ರೀ' ಪ್ರಶಸ್ತಿ ನೀಡುವ ಮೂಲಕ ಕಲೆ, ಕಲಾವಿದರನ್ನು ಉತ್ತೇಜಿಸುವ ಕೆಲಸ ಮಾಡುತ್ತ ಬಂದಿದ್ದು, ಪ್ರಸಕ್ತ 2026 ರ ಹನ್ನೊಂದನೇ ವರ್ಷದ ರಂಗಭೂಮಿ ದಿನಾಚರಣೆಯ ಅಂಗವಾಗಿ 'ಚಿನ್ಮಯ ಕಲಾಶ್ರೀ' ಪ್ರಶಸ್ತಿಗೆ ಹಿರಿಯ ರಂಗಕಲಾವಿದರಾದ ಬಸವರಾಜ ಶಿ. ಅಡವಳ್ಳಿ ಅವರನ್ನು ಆಯ್ಕೆ ಮಾಡಿದೆ ಎಂದು ಚಿನ್ಮಯ ಸಾಂಸ್ಕೃತಿಕ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

ರಂಗಭೂಮಿ ಕ್ಷೇತ್ರದಲ್ಲಿ ಸಂಗೀತ ನಿರ್ದೇಶಕರಾಗಿ ಸೇವೆ ಸಲ್ಲಿಸುವುದರೊಂದಿಗೆ ನಟರಾಗಿ ನಿರ್ದೇಶಕರಾಗಿ ಕೂಡಾ ಬಸವರಾಜ ಶಿ. ಅಡವಳ್ಳಿ ಅವರು ಗಣನೀಯ ಸೇವೆ ಸಲ್ಲಿಸಿರುವರು.

ಪ್ರಶಸ್ತಿಗೆ ಆಯ್ಕೆಯಾದ ಬಸವರಾಜ ಶಿ. ಅಡವಳ್ಳಿ ಅವರಿಗೆ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷರಾದ ಮೌನೇಶ ಸಿ. ಬಡಿಗೇರ(ನರೇಗಲ್ಲ), ಆರ್ ಎನ್ ಕೆ ಮಿತ್ರ ಮಂಡಳಿಯ ಉಪಾಧ್ಯಕ್ಷರಾದ ಎಸ್. ಬಿ. ಕುಲಕರ್ಣಿ, ಹಿರಿಯ ಸಾಹಿತಿಗಳಾದ ಅಂದಾನೆಪ್ಪ ವಿಭೂತಿ, ಐ. ಕೆ. ಕಮ್ಮಾರ,  ರಂಗ ನಿರ್ದೇಶಕರಾದ ಫಣೀಂದ್ರಚಾರ್ಯ ದ್ಯಮೇನಹಳ್ಳಿ, ನಿವೃತ್ತ ಪ್ರಾಂಶುಪಾಲರಾದ ಆರ್. ಡಿ. ಕಡ್ಲಿಕೊಪ್ಪ,  ರಂಗಕಲಾವಿದರಾದ ಮುರಲೀಧರ ಸಂಕನೂರ, ಡಾ.ದತ್ತಪ್ರಸನ್ನ ಪಾಟೀಲ, ಡಾ. ಗಿರೀಶ ಬಡಿಗೇರ, ಜಾನಪದ ಕಲಾವಿದರಾದ ಶಿವಪ್ಪ ಭಜಂತ್ರಿ,

ಶ್ರೀಧರ ಕೊಣ್ಣೂರ, ವಿಶ್ವನಾಥ ಕಮ್ಮಾರ, ಮಹೇಶ ಕಮ್ಮಾರ, ಕಲಾವಿದರಾದ ರಾಚಯ್ಯ ಹೊಸಮಠ, ವಿಶ್ವನಾಥ ಬೇಂದ್ರೆ, ವೀರಯ್ಯ ಹೊಸಮಠ, ಸುಭಾಸ ಮಳಗಿ, ಸೂರಜ್ ಮಯೇಕರ, ಚಿನ್ಮಯ ಸಾಂಸ್ಕೃತಿಕ ಅಕಾಡೆಮಿಯ ನಿರ್ದೇಶಕರಾದ ಶರಣಪ್ಪ ಗಂಗರಗೊಂಡ, ರಿಯಾಜ್ ಅಹ್ಮದ್ ರಾಹುತ್, ಗಣೇಶ ಕಾಂಬಳೆ, ವಿಷ್ಣುಆಚಾರ್ಯ ಮೌನೇಶ ಬಡಿಗೇರ,

ಅಮರೇಶ ರಾಮಪೂರ, ದುರ್ಗೇಶ ಭೈರಮ್ಮನವರ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಅಭಿನಂದಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್