LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸಿದ್ದಾರೂಢರು ಸಕಲ ಮಾತೋದ್ದಾರಕರಾಗಿದ್ದರು : ಚಿನ್ಮಯಾನಂದ ಸ್ವಾಮೀಜಿ

ಮಧಬಾವಿಯಲ್ಲಿ ಲಕ್ಷ ದಿಪೋತ್ಸವ
ಮಹಾಲಿಂಗಪುರ : ಅಧ್ಯಾತ್ಮ ಕ್ಷೇತ್ರದ ಪುಣ್ಯಭೂಮಿ ಭಾರತ ಜಗತ್ತಿನ ಮೇಲ್ಚಾವನಿಯಂತಿದೆ. ಸನಾತನ ಧರ್ಮ ನಾಡು ನಮ್ಮ ಭಾರತ ಸಾಹಿತ್ಯ ಸಂಸ್ಕೃತಿಗಳ ಸಂಗಮತಾನ, ಈ ಭೂಮಿಯಲ್ಲಿ ಅನೇಕ ಶಿವಯೋಗಿಗಳು, ಶಿವಶರಣರು, ಶಿವಶರಣೆಯರು, ಆರೂಢರು, ಅವದೂತರು, ದಾಸವರೆಣ್ಯರು, ಶಂಕರ, ಮಧ್ವ, ರಾಮಾನುಜ, ಬುದ್ಧ, ಬಸವ,ಅನೇಕ ಪುಣ್ಯ ಪುರುಷರಲ್ಲಿ ಅದ್ವೈತ ಸಾರ್ವಭೌಮ ಸಿದ್ದಾರೂಢರು ಒಬ್ಬರು ಎಲ್ಲ ಮಹಾಪುರುಷರ ದೆಯ ಒಂದೇ ಭಕ್ತರ ಉದ್ದಾರವೇ ಆಗಿದೆ, ಭಾರತದ ದೇಶದ್ಯಾದಂತ ಮಠಗಳನ್ನು ಹೊಂದಿರುವ ಸಕಲ ಮನುಕುಲದ ಮಾತೋದ್ದಾರಕರಾಗಿದ್ದರು.ಎಂದು ಶಿರೂರಿನ ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮದ ಪ ಪೂ ಶ್ರೀ ಚಿನ್ಮಯಾನಂದ ಮಹಾಸ್ವಾಮಿಗಳು ಹೇಳಿದರು.


ಅವರು ಮಹಾಲಿಂಗಪುರ ಸಮೀಪದ ಮಧಭಾಂವಿ ಗ್ರಾಮದಲ್ಲಿರುವ ಸಿದ್ಧಾರೂಢರ ನಡೆದ ಶಿವರಾತ್ರಿ ಜಾತ್ರಾ ಮಹೋತ್ಸವ, ಲಕ್ಷ ದಿಪೋತ್ಸವ ಹಾಗೂ ವೇದಾಂತ ಪರಿ?ತ್ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿ "ಸಿದ್ದಾರೂಢರ ಅಂಗಾರ, ದೇಶಕ್ಕೆಲ್ಲ ಬಂಗಾರ, ಸಿದ್ದಾರೂಢರ ಜೋಳಿಗೆ ಲೋಕಕ್ಕೆಲ್ಲ ಹೋಳಿಗೆ "ಎಂಬ ಭಕ್ತರ ಜಯಘೋ?ಗಳೇ ಅಜ್ಜನ ಮಹತ್ವವನ್ನು ಸಾರುತ್ತವೆ. ಸೋಮವಾರ ನಡೆದ ಅಜ್ಜನ ಜಾತ್ರೆ ಅದ್ದೂರಿಯಾಗಿ ನಡೆದು ಸೇರಿದ ಭಕ್ತರೆಲ್ಲರಿಗೂ ಅಜ್ಜನ ಆಶೀರ್ವಾದ ಇರಲಿ ಎಂದು ಹರಿಸಿದರು.
ನಂತರ ಮಾತನಾಡಿದ ರೂಗಿ ಪ ಪೂ ನಿತ್ಯಾನಂದ ಸ್ವಾಮಿಗಳು ಸಿದ್ದಾರೂಢರು ಲೋಕ ಕಲ್ಯಾಣಾರ್ಥವಾಗಿ ಕಾಲ ನಡಿಗೆಯಲ್ಲಿ ದೇಶವನ್ನು ಸಂಚರಿಸಿದರು, ನೇಪಾಳ,ಟಿಬೇಟ್,ಪಾಕಿಸ್ತಾನದ ಕೆಲ ಭಾಗಗಳನ್ನೊಳಗೊಡಂತೆ ಅಖಂಡ ಭಾರತವನ್ನು ಸುತ್ತಾಡಿ ಎಲ್ಲ ಜನರ ಮನಸುರೆಗೊಂಡವು ಕಲಿಯುಗದ ನಿಜವಾದ ಜಗದ್ಗುರು ಸಿದ್ದಾರೂಢರು ಸರ್ವರ ಭಾವನೆಗಳಿಗೆ ಸ್ಪಂದಿಸಿ ನೊಂದ ಹೃದಯಗಳಿಗೆ ಸಾಂತ್ವನ ನೀಡಿದರು. ಗುಪ್ತವಾಗಿದ್ದ ಶಿವ ಪಂಚಾಕ್ಷರಿ ಮಹಾಮಂತ್ರವನ್ನು ಸಾರ್ವತ್ರಿಕವಾಗಿ ಉಪದೇಶಿಸಿದ ಮನುಕುಲ ಉದ್ದರಿಸಿದ ಯುಗ ಪುರು?.
ನಡೆ ಮತ್ತು ನುಡಿ ಯಲ್ಲಿ ಅದ್ವೈತವನ್ನು ಸಾಧಿಸಿದ ಮೇರು ಪೂಜ್ಯ ಶ್ರೀ ಸಿದ್ದಾರೂಡರು. ಬದುಕಿದಂತೆ ಬೋಧಿಸಿದರು, ಭೋಧಿಸಿದಂತೆ ನಡೆದೂ ತೋರಿದರು. ಅಂತಹ ಹಠಯೋಗಿ. ಅಸಾಮಾನ್ಯ ತಪಸ್ವಿ. ತ್ರಿಕಾಲ, ತ್ರಿಕರಣ,ಶಿವಯೋಗಿ ನೆಡೆದಾಡುವ ದೇವರು. ನಂಬಿದವರಿಗೆ ಕಾಮಧೇನುವೂ, ಕಲ್ಪವೃಕ್ಷವೂ.ಆಗಿದ್ದರು ಎಂದರು.
ನಂತರ ಮಾತನಾಡಿದ ಪ ಪೂ ಅಗ್ನಿ ಶರಣರು "ಜೀವನೇ ಯಾವದಾದಾನಂ ಸ್ಯಾತ್ ಪ್ರದಾನಂ ಚ ತತೊಧಿಕಮ್ "ಬದುಕಿನಲ್ಲಿ ನಾವು ಪಡೆದಿರುವುದಕ್ಕಿಂತ ಅಧಿಕವಾಗಿ ಕೊಡುವುದಾಗಬೇಕು ಎಂಬುದನ್ನು ತನ್ನ ನಂಬಿಬಂದವರಿಗೆ ಚರ್ಮವಾಗಿಸಿದ,ಅಂತಶ್ಚಕ್ಷುಗಳಿಂದ ಅರಿವು ಬೆಳಗಿಸಿದ ದೇವರೇ ಸಿದ್ದಾರೂಢರು.
ಇವರನ್ನು ಕಾಣಲು ೧೯೧೮ ರಲ್ಲಿ ಬಾಲಗಂಗಾಧರ ತಿಲಕ್ ೧೯೨೪ ರಲ್ಲಿ ಮಹಾತ್ಮ ಗಾಂಧಿ ಹುಬ್ಬಳ್ಳಿಗೆ ಬಂದಾಗ ಸಿದ್ದಾರೂಢರನ್ನು ಭೇಟಿಯಾಗಿದ್ದರು. ಆ ಸಂಧರ್ಭದಲ್ಲಿ ಅಸ್ಪೃಶ್ಯರೊಂದಿಗೆ ಊಟಕ್ಕೆ ಕುಳಿತಿದ್ದ ಸಿದ್ದಾರೂಢರನ್ನು ಕಂಡು ಗಾಂಧೀಜಿ ಮೂಕವಿಸ್ಮಿತಾರಾಗಿದ್ದರು. ಎಂದರು.
ನಂತರ ಮಾತನಾಡಿದ ಮಾತೋಶ್ರೀ ದಾನಮ್ಮ ಹಿರೇಮಠ ಅಧ್ಯಾತ್ಮದ ಶಿಖರಸದೃಶ ಉತ್ತುಂಗ. ಶ್ರೀ ಸಾಮಾನ್ಯನಿಗೂ ಅಧ್ಯಾತ್ಮದ ಬಗ್ಗೆ ರುಚಿ ಹುಟ್ಟಬೇಕು ಎಂದು ಸರಳ ಆಚರಣೆ ಜಾರಿಗೆ ತಂದ ಜನರ ಗುರು. ಶಿವ ಪಂಚಾಕ್ಷರ ಮಂತ್ರ ’ ಓಂ ನಮಃ ಶಿವಾಯ ’ ಬಹಿರಂಗವಾಗಿ ಪಠಿಸಲು ಜನಸಾಮಾನ್ಯರಿಗೆ ಪ್ರೇರಣೆ ನೀಡಿ ಕಾಯುವವ ದೊಡ್ಡವ, ಕಾಯಕವೇ ಮುಕ್ತಿಯ ಹಾದಿ ’ ಎನ್ನುವ ವಿನಿತ, ನೈತಿಕ ಸನ್ಮಾರ್ಗ ತೋರಿದ ಪ್ರಾತಃಸ್ಮರನಿಯರು. ಎಂದರು.
ನಂತರ ಮಾತನಾಡಿದ ಜಿಲ್ಲಾ ಪಂಚಾಯತ್ ಬಾಗಲಕೋಟ ಮಾಜಿ ಸದಸ್ಯರಾದ ಮಹಾಂತೇಶ ಹಿಟ್ಟಿನಮಠ ಸಾಧು ಸಂತರ ದರ್ಶನದಿಂದ ಜನ್ಮ ಪಾವನವಾಗುತ್ತದೆ, ರಾಮಾಯಣ ಮಹಾಭಾರತ ಮಹಾ ಗ್ರಂಥಗಳು ಪಾರಾಯಣದಿಂದ ಜಗತ್ತಿಗೆ ಬೆಳಕನ್ನು ಚೆಲ್ಲಿವೆ, ಅದರಂತೆ ಸಿದ್ದಾರೂಢರ ಕಥಾ ಅಮೃತ ಗ್ರಂಥ ಅರೂಢ ಪರಂಪರೆಯ ಸಕಲ ಭಕ್ತರಿಗೆ ಸುಖ,ಶಾಂತಿ, ನೆಮ್ಮದಿ,ಸಕಲ ಭಾಗ್ಯಗಳನ್ನು ಕರುಣಿಸುತ್ತಿದೆ. ಈ ಗ್ರಂಥ ನಿರ್ಮಲ ಭಕ್ತಿಯಿಂದ ಪಾರಾಯಣ ಮಾಡುವವರಿಗೆ ಸಕಲವನ್ನೂ ಸಾಕ್ಷಾತ್ ಸಿದ್ದಾರೂಢರು ಕರುಣಿಸುತ್ತಿದ್ದಾರೆ,ಅವರ ಜಾತ್ರೆಯಲ್ಲಿ ಭಾಗಿಯಾಗುವುದರಿಂದ ಮಾನವ ಜನ್ಮ ಪಾವನವಾಗುತ್ತದೆ.ಎಂದರು.
ನಂತರ ಮಾತನಾಡಿದ ತೇರದಾಳ್ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಸಿದ್ದು ಕೊಣ್ಣೂರು ಅನ್ಯಕೇಂದ್ರೀತ ವಿಶ್ವದಲ್ಲಿ ಆತ್ಮಕೇಂದ್ರೀತ ಮನು?ನ ಬಾಳು ಪಾಡಿಗೆ ಜೀವದೃಷ್ಟಿ, ಆತ್ಮ ಸೃಸ್ಟಿಯ ಅರಿವು ಜಾಗೃತಗೋಳಿಸಿ, ವಿಧಿ ಮತ್ತು ವ್ಯಕ್ತಿತ್ವದ ನಡುವಿನ ಸಂಕಟ ದ್ವಂದ್ವಗಳಿಗೆ ಮಾನವತೆಯ ಸ್ಪರ್ಶ ನೀಡಿದವರು, ಆಚಾರ ವಿಚಾರಗಳಲ್ಲಿ ಭಕ್ತರಿಗೆ ಅವರು ಸಾಕ್ಷಾತ್ ಶಿವನ ಸ್ವರೂಪವೇ ಆಗಿದ್ದರು. ಆತ್ಮ ಪರಮಾತ್ಮ ಎರಡೂ ಒಂದೇ ಬೇರೆ ಅಲ್ಲ ಅಹಂ ಬ್ರಹ್ಮಾಸ್ಮಿ ಎಂದು ಅದ್ವೈತ ಸಾರಿದರು. ಪ್ರೀತಿ ಅಂತಃಕರಣದಿಂದ ತೊಯ್ದು ಅಜ್ಜನ ಮುಖೋದ್ಗತಗಳನ್ನು ಹೃದ್ಗತ ಮಾಡಿಕೊಳ್ಳುವಲ್ಲಿ ಜನಸಾಮಾನ್ಯರಿಗೆ ಇನ್ನೂ ಆಧ್ಯಾತ್ಮವನ್ನು ಸರಳಗೊಳಿಸುವಲ್ಲಿ, ದೈನಂದಿನ ಜೀವನದಲ್ಲಿ ಸರಳವಾಗಿ ಪರಿಪಾಲಿಸುವಷ್ಟು ’ ತೈಲವಿಲ್ಲದ ಜ್ಯೋತಿ ’ಆಗಿ ಬೆಳಗಿದರು.
ಸಿದ್ದಾರೂಢರು ಸಕಲ ಮತೋದ್ದಾರಕಾರಗಿದ್ದರು, ಜಗ್ಗತ್ತನ್ನು ಉದ್ದರಿಸಿದ ಸಾಕ್ಷಾತ್ ಶಿವನ ಸ್ವರೂಪಿಗಳಾಗಿ ನರನ ರೂಪದಲ್ಲಿ ಕೈಲಾಸದಿಂದ ಧರೆಗಿಳಿದ ಭಗವಂತ ಸಿದ್ದಾರೂಢರು ಭಕ್ತಿಯಿಂದ ನಾಮ ಸ್ಮರಣೆ ಮಾಡಿದರೆ ಸಾಕು ಕ?ಗಳನ್ನು ಕರಗಿಸಿ ಭಕ್ತರ ಬದುಕಿನಲ್ಲಿ ನೆಮ್ಮದಿ ಕರುಣಿಸುತ್ತಾನೆ. ಎಂದರು
ಸಾಯಂಕಾಲ ೬ ಗಂಟೆಗೆ ಅಲಂಕೃತ ತೇರಿನಲ್ಲಿ ಸಿದ್ದಾರೂಢರ ಮೂರ್ತಿಗೆ ಪೂಜೆ ಸಲ್ಲಿಸಿ ಚಾಲನೆ ಕೊಟ್ಟರು ರಥೋತ್ಸವವನ್ನು ಕಣ್ತುಂಬಿಕೊಂಡ ಸೇರಿದ ಅಪಾರ ಭಕ್ತ ಸಮೂಹ ಸಿದ್ದಾರೂಢ ಮಹಾರಾಜ್ ಕಿ ಜೈ, ಓಂ ನಮಃ ಶಿವಾಯ, ಹುಬ್ಬಳ್ಳಿಯೆಂಬುದು ಕಲ್ಯಾಣ ಸಿದ್ದಾರೂಢರೆ ಬಸವಣ್ಣ, ಸಿದ್ದಾರೂಢರ ಜೋಳಿಗೆ ಲೋಕಕ್ಕೆಲ್ಲ ಹೋಳಿಗೆ, ಇನ್ನೂ ಅನೇಕ ಜಯ ಘೋ?ಗಳು ಮೊಳಗಿದವು. ಕಿಕ್ಕಿರಿದು ಸೇರಿದ ಜನರು ಅಜ್ಜನ ತೇರು ಎಳೆದು ಭಕ್ತಿ ಮೆರೆದರು. ಭಕ್ತರು ಹೂವು,ಉತ್ತತ್ತಿ, ಬಾಳೆಹಣ್ಣು,ಬೆಂಡು ಬೆತ್ತಸಾ,ನಿಂಬೆ ಹಣ್ಣು, ಹೂವು, ಹಾರಿಸಿ ಅಜ್ಜನ ಕೃಫೆಗೆ ಪಾತ್ರರಾದರು.
ಬೆಳ್ಳಿಗೆ ನಾಲ್ಕ ಗಂಟೆಗೆ ಭಕ್ತರು ದೀಡ ನಮಸ್ಕಾರ ಹಾಕಿದರು. ಮುಂಜಾನೆ ೭ ಗಂಟೆಗೆ ಅಭಿಷೇಕ, ವಿಶೇಷ ಅಲಂಕಾರ ಉತ್ಸವ ಜರುಗಿ ಮಧ್ಯಾಹ್ನ ಮಹಾ ಪ್ರಸಾದ ಜರುಗಿತು.
ಕಾರ್ಯಕ್ರಮದ ವೇದಿಕೆ ಮೇಲೆ ಮಹಾಲಿಂಗಪ್ಪ ಜಕ್ಕಣ್ಣವರ, ಸಿದ್ದರಾಮ ಯರಗಟ್ಟಿ, ಎಸ್ ಎಮ್ ಪಾಟೀಲ್, ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್