LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸಹಕಾರ ಸಂಘಗಳು ಸಾಮಾಜಿಕ ಕಾರ್ಯಮಾಡಬೇಕು - ನ್ಯಾಯವಾದಿ ಪಿ ಆರ್ ಚೌಗಲಾ.

ಹುಕ್ಕೇರಿ : ಸಹಕಾರಿ ಸಂಘಗಳ ಸಾಮಾಜಿಕ ವಾಗಿ ಕಾರ್ಯ ನಿರ್ವಹಿಸ ಬೇಕು ಎಂದು ಹಿರಿಯ ನ್ಯಾಯವಾದಿ , ಹುಲ್ಲೋಳಿ ಅರಿಹಂತ ಸಹಕಾರಿ ಸಂಘದ ನಿರ್ದೆಶಕ ಪಿ ಆರ್ ಚೌಗಲಾ ಹೇಳಿದರು.

ಹುಕ್ಕೇರಿ ತಾಲೂಕಿನ ಹುಲ್ಲೋಳಿ ಸಹಕಾರಿ ಸಂಘವು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸೇವೆ ಸಲ್ಲಿಸುತ್ತಾ ಸಂಸ್ಥೆಯ ಮೂಲಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೋತೆಗೆ ವಿಶೇಷ ಶಿಬಿರಗಳನ್ನು ಆಯೋಜಿಸಿ ಅತ್ಯುತ್ತಮ ಸಹಕಾರಿ ಸಂಘ ಎಂದು ಗುರುತಿಸಿದೆ ಕಾರಣ ಸಹಕಾರಿ ಸಂಸ್ಥೆಯ ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸ ಬೇಕು ಎಂದರು.

ಮಾದ್ಯಮಗಳೊಂದಿಗೆ ಮಾತನಾಡಿದ ಸಂಸ್ಥೆಯ ಅದ್ಯಕ್ಷ ಭರಮಪ್ಪಾ ಚೌಗಲಾ ಸಹಕಾರಿ ಸಂಸ್ಥೆಗಳು ಪ್ರಗತಿ ಪಥದಲ್ಲಿ ಸಾಗಲು ಗ್ರಾಹಕರ‌ ಮತ್ತು ಸಿಬ್ಬಂದಿಗಳ ಕಾರ್ಯದೊಂದಿಗೆ ಪತ್ರಿಕಾ ಮಾದ್ಯಮಗಳ ಸಲಹೆ ಸೂಚನೆಗಳು ಸಹ ಅವಶ್ಯಕವಾಗಿವೆ ಎಂದರು.

ನಿರ್ದೆಶಕ ರವಿಂದ್ರ ಚೌಗಲಾ ಮಾತನಾಡಿ ಆಡಳಿತ ಮಂಡಳಿ ಸಭೆಗಳನ್ನು ಜರುಗಿಸಿ ಸಾಲದ ಸತ್ಯಾ ಸತ್ಯತೆ ಅರಿತು ಸಾಲ ನೀಡಿದರೆ ಮಾತ್ರ ಸಂಸ್ಥೆಗಳು ಉಳಿಯಲು ಸಾಧ್ಯ, ಏಕಪಕ್ಷೀಯವಾಗಿ ನಿರ್ಣಯ ಅಪಾಯಕಾರಿ ಎಂದರು.

ಉಪಾಧ್ಯಕ್ಷ ಬಾಹುಬಲಿ ನಾಗನೂರಿ ಮಾತನಾಡಿ ಸಂಸ್ಥೆಯ ಪ್ರಗತಿ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ರಾಮಪ್ಪಾ ಗೊಟೂರಿ, ಜಿನ್ನಪ್ಪಾ ಸಪ್ತಸಾಗರ, ಅಶೋಕ ಚೌಗಲಾ, ಪ್ರಕಾಶ ಚೌಗಲಾ, ಮಾಯಪ್ಪಾ ಹೊಳೆಪ್ಪಗೋಳ, ಬಸವರಾಜ ಪಾಟೀಲ, ಬಾಳಪ್ಪಾ ಸಂಕೇಶ್ವರಿ, ಅರುಣ ಚೌಗಲಾ ಹಾಗೂ ಪ್ರಧಾನ ಕಾರ್ಯದರ್ಶಿ ಆನಂದ ಚೌಗಲಾ, ವ್ಯವಸ್ಥಾಪಕರಾದ ಮಹಾವೀರ ಚೌಗಲಾ, ಅಜೀತ ಸಪ್ತಸಾಗರ,ಕಲಗೌಡಾ ಪಾಟೀಲ ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್