LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಬಸವ ಜಯ ಮೃತ್ಯುಂಜಯ ಶ್ರೀಗಳ ಮೇಲೆ  ಸುಳ್ಳು ಆರೋಪಕ್ಕೆ ಖಂಡನೆ.

ಬೆಳಗಾವಿ.ಕೂಡಲಸಂಗಮ ಪಂಚಮಸಾಲಿ ಪೀಠದ ಪೀಠಾಧಿಪತಿಗಳಾದ ಶ್ರೀ ಬಸವಜಯಮೃತ್ಯುಂಜಯ ಮಹಾಸ್ವಾಮಿಜಿಯವರ ಮೇಲೆ ಸುಳ್ಳು ಆರೋಪ ಖಂಡಿಸಿ ಪತ್ರಿಕಾಗೋಷ್ಠಿ

ಇತ್ತೀಚಿನ ಖಾಸಗಿ ಸುದ್ದಿವಾಹಿನಿಯಲಿ ಒಬ್ಬ ಮಹಿಳೆಯನ್ನು ಬಳಸಿಕೊಂಡು ಪೂಜ್ಯರ ಮೇಲೆ ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪ ಮಾಡಿ ಪೂಜ್ಯರ ತೋಜೋವಧೆ ಮಾಡಲಾಗಿತ್ತು. ಇದು ಪೂಜ್ಯರ ವಿರುದ್ಧ ಪಂಚಮಸಾಲಿ ಸಮಾಜದಲ್ಲಿ ಅಗೌರವವನ್ನುಂಟು ಮಾಡುವ ವ್ಯವಸ್ಥಿತ ಪಿತೂರಿಯಾಗಿತ್ತು.

ಪೂಜ್ಯರು ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದ ಕಾರಣ ಇದು ಕೆಲವರಿಗೆ ಸಹನೆಯಾಗುತ್ತಿಲ್ಲ. ಸಮಾಜ ಮತ್ತು ಪೂಜ್ಯರ ಮನೋಭಲವನ್ನು ಕುಗ್ಗಿಸಲು ವ್ಯವಸ್ಥಿತ ಷಡ್ಯಂತ್ರ ನಡೆಸಲಾಗಿದೆ, ಈ ಸಂಚಿನ ಹಿಂದೆ ಒಬ್ಬ ರಾಜಕೀಯ ಪ್ರಭಾವಿ ನಾಯಕನಿದ್ದು ಅವರು ಯಾರು ಎಂಬುದು ಈಗಾಗಲೇ ಬಹಿರಂಗಗೊಂಡಿದೆ. ಈ ಪ್ರಕರಣದಲ್ಲಿ ಯಾವ ಮಹಿಳೆಯನ್ನು ಬಳಸಿಕೊಂಡು ಸುಳ್ಳು ಲೈಂಗಿಕ ದೌರ್ಜನ್ಯದ ಆರೋಪ ಮಾಡಲಾಗಿತ್ತೋ, ಈಗ ಅದೇ ಸಂತ್ರಸ್ತ ಮಹಿಳೆ ಸಾಮಾಜಿಕ ಜಾಲ ತಾಣದ ಮುಂದೆ ಬಂದು ಇದು ಎಲ್ಲ ಸುಳ್ಳು ಈ ಪ್ರಕರಣದಲ್ಲಿ ನನ್ನನ್ನು ಬಳಸಿಕೊಂಡು ಈ ರೀತಿ ಪೂಜ್ಯರ ತೇಜೋವಧೆ ಮಾಡುಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಯಾವುದೇ ರೀತಿ ಲೈಂಗಿಕ ದೌರ್ಜನ್ಯವಾಗಿಲ್ಲವೆಂದು ಮಹಿಳೆ ಸ್ಪಷ್ಟವಾಗಿ ತಿಳಿಸಿದ್ದಾರೆ.

ಪಂಚಮಸಾಲಿ ಸಮಾಜದ ಪೂಜ್ಯರ ಭಕ್ತ ಸಮುದಾಯ ಆಕ್ರೋಶಗೊಂಡಿದ್ದು ಇದನ್ನು ಖಂಡಿಸಿ ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ಹಾಗೂ ಪೂಜ್ಯರಿಗೆ ನ್ಯಾಯ ಸಿಗಬೇಕು ಮತ್ತು ಈ ಪ್ರಕರಣದ ಹಿಂದೆ ಕೈವಾಡ ಇರುವ ವ್ಯಕ್ತಿಯನ್ನು ಬಂಧಿಸಬೇಕು ಎಂದು ಅಗ್ರಹಿಸಿ, ತಾಲೂಕಾಮಟ್ಟದಲ್ಲಿ ಬೃಹತ್‌ ಪ್ರತಿಭಟನೆ ಮಾಡಲು ಪಂಚಮಸಾಲಿ ಸಮುದಾಯ ಸಿದ್ದಗೊಂಡಿದೆ ಎಂದು ಗೋಕಾಕ ತಾಲೂಕಿನ ಘಟಕದ ಅಧ್ಯಕ್ಷರಾದ  ಗಂಗಾಧರ ಬಡಕುಂದ್ರಿ (ವಕೀಲರು ) ಘಟಪ್ರಭಾ ಇವರು ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ಮೂಲಕ ತಿಳಿಸಿದ್ದಾರೆ.

ಈ ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಹಿರಿಯಾರಾದ  ಕಲ್ಲಪ್ಪಕೊಂಕಣಿ,  ಕೆಂಚಪ್ಪಾಪಾಟೀಲ,

 ಮಾರುತಿ ಶಿಂದ್ರಿ, ಪಿಕೆಪಿಎಸ್ ಅಧ್ಯಕ್ಷರಾದ  ಮುತ್ತಣ ಹತ್ತರವಾಟ, ಬಾಬು ಬಡಕುಂದ್ರಿ,  ಅಪ್ಪಾಜಿ ಹುದ್ದಾರ,  ಮಾರುತಿ ಇಂಗಳಿ,  ಶಿವರಾಜ ಬಡಕುಂದ್ರಿ, ಪತ್ರಕರ್ತರಾದ  ವಿವೇಕಾನಂದ ಹುದ್ದಾರ,  ಭೀಮಪ್ಪಾ ಮದಿಹಳ್ಳಿ, ಶಿವಕುಮಾರ ಹತ್ತರವಾಟ,  ಭೀಮಪ್ಪಾಬನನ್ನವರ ಹಾಗೂ  ಕೆಂಪಣ್ಣಾಹತ್ತರವಾಟ ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್