ಬಳ್ಳಾರಿ,ಜು25;: ಕಳೆದ ಹಲವಾರು ತಿಂಗಳುಗಳಿAದ ಪಿಂಚಣಿ ಫÀಲಾನುಭವಿಗಳಿಗೆ ಪಿಂಚಣಿ ಹಣ ಸ್ಥಗಿತವಾಗಿರುವುದನ್ನು ಎಐಎಂಎಸ್‌ಎಸ್ ಖಂಡಿಸಿದೆ.
ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ರಾಜ್ಯದ ಸುಮಾರು ೧೮ ಲಕ್ಷ ಪಿಂಚಣಿ ಪಲಾನುಭವಿಗಳಿಗೆ ಕಳೆದ ೪-೫ ತಿಂಗಳಿAದ ಪಿಂಚಣಿ ಹಣ ತಲುಪಿಲ್ಲ. ಬಡ ವಿಧವೆಯರು, ವೃದ್ಧರು, ಅಂಗವಿಕಲರು ಪಿಂಚಣಿ ಹಣದ ಮೇಲೆಯೇ ಅವಲಂಬಿತರಾಗಿದ್ದಾರೆ. ಸಮಾಜ ಕಲ್ಯಾಣ ಯೋಜನೆಯಡಿಯಲ್ಲಿ ಬಡ ಪಿಂಚಣಿದಾರರು ಪಡೆಯುತ್ತಿರುವ ಪುಡಿಗಾಸು ಪಿಂಚಣಿ ಹಣಕ್ಕೂ ಒಂದಲ್ಲ ಒಂದು ನೆಪವೊಡ್ಡಿ ಸರ್ಕಾರ ಕತ್ತರಿ ಹಾಕುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಇವತ್ತಿನ ಬೆಲೆ ಏರಿಕೆಯ ಸಂಧರ್ಭದಲ್ಲಿ ಸರ್ಕಾರ ಕೊಡುವ ಪಿಂಚಣಿ ಹಣ ಅತ್ಯಲ್ಪ. ಅದನ್ನು ಕೂಡ ಸ್ಥಗಿತಗೊಳಿಸಿರುವ ಸರ್ಕಾರ ಬಡ ವೃದ್ಧರ, ಅಂಗವಿಕಲರ ಮತ್ತು ವಿಧವೆಯರ ಬದುಕನ್ನು ಬೀದಿಗೆ ತಳ್ಳುತ್ತಿದೆ. ಇದನ್ನು ಂIಒSS ಬಳ್ಳಾರಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಹಾಗೂ ಈ ಕೂಡಲೇ ಪಿಂಚಣಿ ಹಣವನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷ್ಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.