LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಪಾಲಿಕೆ ಸದಸ್ಯರು, ಅಧಿಕಾರಿಗಳಿಂದ ಘನತ್ಯಾಜ್ಯ ನಿರ್ವಹಣೆ ಅಧ್ಯಯನಕ್ಕೆ ಇಂದೋರ್ ಪ್ರವಾಸ







ಬಳ್ಳಾರಿ, ಏ.04.: ಇಲ್ಲಿನ  ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರು ಹಾಗೂ ಪಾಲಿಕೆಯ ಅಧಿಕಾರಿಗಳನ್ನೊಳಗೊಂಡು 50 ಜನರನ್ನು ಒಳಗೊಂಡ ತಂಡ  ಇಂದೋರ್ ನಗರಕ್ಕೆ ಅಧ್ಯಯನ ಪ್ರವಾಸ ಮಾಡಲು ಇಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯ್ತು.

ಮಹಾನಗರ ಪಾಲಿಕೆಗೆ ಎಸ್.ಬಿ.ಎಂ2.0  ಅಡಿಯಲ್ಲಿ ಸಾಮಾರ್ಥ್ಯಾಭಿವೃದ್ಧಿ ಘಟಕದಿಂದ ಪಾಲಿಕೆಯಲ್ಲಿ ಚುನಾಯಿತ 39 ಹಾಗೂ 5 ಜನ ನಾಮನಿರ್ದೇಶಿತ ಸದಸ್ಯರು ಮತ್ತು 6 ಜನ ಪಾಲಿಕೆ ಅಧಿಕಾರಿ ಸಿಬ್ಬಂಧಿಗಳನ್ನು ಒಳಗೊಂಡ 50 ಜನರೊಂದಿಗೆ ರಾಷ್ಟ್ರದಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆಯಲ್ಲಿ ಉತ್ತಮ ಸಾಧನೆ ತೋರಿರುವ ಮಧ್ಯಪ್ರದೇಶ ರಾಜ್ಯದ ಇಂದೋರ್ ನಗರಕ್ಕೆ ಏ.5 ರಿಂದ 8 ರ ವರೆಗೆ  ಅಧ್ಯಯನ ಪ್ರವಾಸ ಕೈಗೊಳ್ಳಲು ಉದ್ದೇಶಿಸಿದೆ ಎಂದು ಮೇಯರ್ ಗಾದೆಪ್ಪ ತಿಳಿಸಿದಾಗ. ಇದಕ್ಕೆ ಅನುಮೋದನೆ ಕೊಡಲಿದೆ. ಆದರೆ ನಮ್ಮನ್ನೆಲ್ಲ ಸಭೆ ಕರೆದು  ಚರ್ಚಿಸಿ ಬೇರೊಂದು ದಿನಾಂಕ   ನಿಗಧಿಪಡಿಸಬೇಕು ಎಂದು ಬಿಜೆಪಿ ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ಸಿ.ಇಬ್ರಾಹಿಂ ಬಾಬು ಆಗ್ರಹಿಸಿದರು. ಆಗ ಮೇಯರ್ ಆಯ್ತು ನಿಮ್ಮಂತೆ ಸಭೆ ಕರೆದು ನಿರ್ಧರಿಸಲಿದೆಂದರು.

ಕುಡಿಯುವ ನೀರು:

ನಗರಕ್ಕೆ ಸಮಪರ್ಕ ಕುಡಿಯುವ ನೀರನ್ನು ಬೇಸಿಗೆ ಅವಧಿಯಲ್ಲಿ ಸರಬರಾಜು ಮಾಡಲು. ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸದಸ್ಯರಾದ ವಿ. ಶ್ರೀನಿವಾಸಲು ಮಿಂಚು. ಗುಡಿಗಂಟಿ ಹನುಮಂತಪ್ಪ ಅವರು ಹೇಳಿದರು. ನಾಳೆಯಿಂದ ಕಾಲುವೆಗೆ ನೀರು ಬಿಡಲಿದೆ. ಆ ನೀರನ್ನು ಅಲ್ಲಿಪುರ ಕೆರೆಗೆ ಪಂಪ್ ಮಾಡಲು ವ್ಯವಸ್ಥೆ ಮಾಡಿದೆಂದು ಆಯುಕ್ತರು ತಿಳಿಸಿದರು.

ಪಾಲಿಕೆ ಸದಸ್ಯರಿಗೆ ಕುಡಿಯುವ ನೀರು ಯಾವಾಗ ಬಿಡುತ್ತದೆ ಎಂದು ಪ್ರತಿ ವಾರ್ಡ್ ಸದಸ್ಯರು ಕೇಳಿದರು. ನಮಗೆ ಮಾಹಿತಿನೀಡಿ ನಾವು ಜನರಿಗೆ ತಿಳಿಸಲಿದೆಂದರು. ಅದಕ್ಕೆ ಆಯುಕ್ತ ಪಿ.ಎಸ್.ಮಂಜುನಾಥ ಅವರು ಈ ಬಗ್ಗೆ ಸರ್ವಾಜನಿಕರಿಗೆ ತಿಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಿದೆಂದರು.

ಸ್ವಸಹಾಯ ಸಂಘಕ್ಕೆ:

ಪಾಲಿಕೆಯಲ್ಲಿ ಬಾಕಿ ಇರುವ  ಕುಡಿಯುವ ನೀರಿನ  ಮತ್ತು ಆಸ್ತಿ  ತೆರಿಗೆ ಸಂಗ್ರಹ ಕಾರ್ಯವನ್ನು  ಡೇ ನಲ್ಮ್ ಯೋಜನೆಯಡಿ ರಚಿಸಿರುವ ಅರ್ಹ ಮಹಿಳಾ ಸ್ವಸಹಾಯ ಸಂಘಗಳಿಗೆ ವಹಿಸಲು ಸಭೆ ಅನುಮೋದನೆ  ನೀಡಿತು.  ಸಂಗ್ರಹಿಸಿದ ಮೊತ್ತಕ್ಕೆ ಶೇ.5 ರಷ್ಟುನ್ನು ಸ್ವಸಹಾಯ ಸಂಘಗಳಿಗೆ ಪ್ರೋತ್ಸಾಹ ಧನ ನೀಡಲು ಸಮ್ಮತಿಸಿತು. ಈ ಪ್ರೋತ್ಸಾಹ ಧನವನ್ನು ಸಂಘಗಳಿಗೆ  ಪ್ರತಿ ತಿಂಗಳ 10 ರೊಳಗೆ ಪಾಲಿಕೆಯಿಂದ ನೀಡಬೇಕಿದೆ.

ವಾಪಸ್ ಕರೆಸಲಿದೆ:

ಪಾಲಿಕೆಯಲ್ಲಿಯೇ ಸಿಬ್ಬಂದಿಯ ಕೊರತೆ ಇದೆ. ಹೀಗಿರುವಾಗ ಹೊರ ಸೇವೆಗೆ ಏಕೆ ಕಳಿಸಿದೆಂದು ಇಬ್ರಾಹಿಂ ಬಾಬು ಪ್ರಶ್ನಿಸಿದಾಗ. ಆಯುಕ್ತರು ಆರು ಜನ ಹೊರ ಸೇವೆಗೆ ಹೋಗಿದ್ದಾರೆ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಲಿದೆಂದು ಹೇಳಿದರು.

ಪೂಜೆ ಮಾಡಿದರೆ ಸಾಲದು:

ನಗರದಲ್ಲಿ ಅನೇಕ ರಸ್ತೆಗಳ ಅಭಿವೃದ್ಧಿಗೆ ಬ್ಯಾನರ್ ಹಾಕಿ ಪೂಜೆ ಮಾಡಿ ಮೂರು ತಿಂಗಳಾದರೂ ಕಾಮಗಾರಿ ಆರಂಭ ಮಾಡಲ್ಲ ಎಂದರೆ ಯಾಕೆ. ಹೀಗೆ ಮಾಡಬೇಕು. ಅನೇಕ ಕಡೆ ತೋಡಿ ಹಾಗೆ ಬಿಟ್ಟಿದೆ ಹೀಗೆ ಆದರೆ ಪ್ರತಿಭಟನೆ ಮಾಡಬೇಕಾಗುತ್ತದೆಂದು ಮೋತ್ಕರ್ ಹೇಳಿದರು.

ಕ್ಯಪಾಸಿಟಿ ಇಲ್ಲದ ಗುತ್ತಿಗೆದಾರರಿಗೆ ಏಕೆ ಟೆಂಡರ್ ಕೊಡುತ್ತೀರಿ ಎಂದು ಇಬ್ರಾಹಿಂಬಾಬು ಪ್ರಶ್ನಿಸಿದರು. ನಗರದಲ್ಲಿ ಅನೇಕ ಕಾಮಗಾರಿಗಳನ್ನು ಅರ್ಧಂ ಮರ್ಧ ಮಾಡಿ ಬಿಡಲಾಗಿದೆ ಎಂದು ಆರೋಪಿಸಿದರು.

ಇದಕ್ಕೆ ಸಭೆಯಿಂದ ಉತ್ತರ ಬರಲಿಲ್ಲ

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ವಿ.ಕುಬೇರ, ಕೆ.ಹನುಂಮತಪ್ಪ, ಕವಿತಾ ವನ್ನಪ್ಪ ಮೊದಲಾದವರು. ಪಾಲ್ಗೊಂಡಿದ್ದರು.







Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್