LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಶ್ರೀಧರಗಡ್ಡೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಬಳ್ಳಾರಿ, ಮೇ.08. ಶ್ರೀಧರಗಡ್ಡೆಯ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ, ಎರ್ರಿಸ್ವಾಮಿ ತೊಗಲುಗೊಂಬೆ ಕಲಾ ಮೇಳ ಟ್ರಸ್ಟ್(ರಿ)ಬಳ್ಳಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ವಿಶೇಷ ಘಟಕ ಯೋಜನೆ ಅಡಿಯಲ್ಲಿ "ಜಾನಪದ ಸಂಭ್ರಮ" ಎನ್ನುವ ಶೀರ್ಷಿಕೆ ಮಾಲಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಉದ್ಘಾಟಿಸಿದ ಪರಮಪೂಜ್ಯ ಶ್ರೀಮರಿ ಕೊಟ್ಟೂರು ದೇಶಿಕರು, ನಿಯೋಜಿತ ಉತ್ತರಾಧಿಕಾರಿಗಳು ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠ ಶ್ರೀಧರಗಡ್ಡೆ ಇವರು ತಮ್ಮ ಅಶಿರ್ವಚನವನ್ನು ನೀಡುತ್ತಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತುಂಬಾ ಉತ್ತಮವಾದ ಕೆಲಸವನ್ನು ಮಾಡುತ್ತಿದೆ ಈ ತರಹದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಳ್ಳಿಗಳಲ್ಲಿ ಹಮ್ಮಿಕೊಳ್ಳುತ್ತಿರುವುದು ತುಂಬಾ ಸ್ವಾಗತಾರ್ಹ, ಈಗಿನ ಜನರು ಪಾಶ್ಚಾತ್ಯ ಸಂಸ್ಕೃತಿಗೆ ಮಾರುವಾಗದೆ ನಮ್ಮ ಹಳ್ಳಿಗಾಡಿನ ಕಲೆಗಳಾದ ತೊಗಲುಗೊಂಬೆ, ಜನಪದ,ಬಯಲಾಟ ಈ ತರಹದ ಕಲೆಗಳನ್ನು ಮಕ್ಕಳಿಗೆ ಕಲಿಸಲು ಹೆಚ್ಚು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿ. ನಾಗರಾಜ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಮಾತನಾಡುತ್ತಾ ಶ್ರೀಧರಗಡ್ಡೆಯು ಕಲೆಗಳ ತವರೂರು ಈ ಊರಿನಲ್ಲಿ ಪ್ರಸಿದ್ಧ ಕಲಾವಿದರು ಕಲಾ ಪೋಷಕರು ಇರುವುದು ತುಂಬಾ ಸಂತೋಷದ ಸಂಗತಿ ಎಂದು ತಿಳಿಸಿದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಂದೀಶ್ ಮುಖಂಡರು ಶ್ರೀಧರ್ ಗಡ್ಡೆ. ನಮ್ಮ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಿದರು ನಾವು ತನು,ಮನ,ಧನ ಗಳಿಂದ ಪ್ರೋತ್ಸಾಹಿಸುತ್ತೇವೆ ಎಂದು ತಮ್ಮ ಅಧ್ಯಕ್ಷತೆ ನುಡಿಗಳನ್ನು ಆಡಿದರು ವೇದಿಕೆಯ ಮೇಲೆ ದೊಡ್ಡಬಸಪ್ಪ ಯಾಟಿ ಗೌರಿ ಹಳ್ಳಿಮನೆ ಮಾಲೀಕರು ಬಳ್ಳಾರಿ, ಎಸ್.ಡಿ. ವೀರನಗೌಡ ಉದ್ಯಮಿಗಳು ಶ್ರೀಧರಗಡ್ಡೆ, ಎ ಜಂಬನಗೌಡ ಬಸವೇಶ್ವರ ಯುವಕ ಸಂಘ ಶ್ರೀಧರಗಡ್ಡೆ, ನಾಗೇಂದ್ರಪ್ಪ ಅಧ್ಯಕ್ಷರು ಬಸವೇಶ್ವರ ಟ್ರಸ್ಟ್ ಕಮಿಟಿ ಶ್ರೀಧರಗಡ್ಡೆ, ಪಿ. ನಿರಂಜನ್ ಮುಖಂಡರು ಶ್ರೀಧರಗಡ್ಡೆ, ಬಿ. ಬಸವರಾಜ್ ಉಪಾಧ್ಯಕ್ಷರು ಶ್ರೀ ಬಸವೇಶ್ವರ ಭಜನಾ ಮಂಡಳಿ ಶ್ರೀಧರ ಗಡ್ಡೆ, ಇನ್ನು ಮುಂತಾದವರು ಪಾಲ್ಗೊಂಡಿದ್ದರು. ವೇದಿಕೆಯ    ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳ ಮಾಲಿಕೆಯಲ್ಲಿ ತೊಗಲಗೊಂಬೆ ಪ್ರದರ್ಶನ -ಶ್ರೀಮತಿ ಹುಲಿಗೆಮ್ಮ  ಮತ್ತು ತಂಡ ಬಳ್ಳಾರಿ, ಸುಗಮ ಸಂಗೀತ ಕು. ಸಹನಾ ಮತ್ತು ತಂಡ ಕಂಪ್ಲಿ, 
ಜಾನಪದ ನೃತ್ಯ ಕು. ಬಾನವತ ಮಾಯುಖ ಮತ್ತು ತಂಡ ಬಳ್ಳಾರಿ  ಹಾಗೂ ಕೀಬೋರ್ಡ್- ಶಿವಕುಮಾರ್ ಬಂಡಿಹಟ್ಟಿ  ತಬಲಾ-ಯೋಗೇಶ್ ಸಂಗನಕಲ್ಲು.ಈ ಕಾರ್ಯಕ್ರಮಗಳು ಸುಮಾರು ಮೂರು ತಾಸಿಗೂ ಹೆಚ್ಚು ನಡೆದವು  ಈ ಕಾರ್ಯಕ್ರಮದಲ್ಲಿ ಕಿಕ್ಕಿರಿದು ತುಂಬಿದ್ದ ಜನಸ್ತೋಮವು ಚಪ್ಪಾಳೆಗಳಿಂದ  ಕಲಾವಿದರನ್ನು ಹುರಿದುಂಬಿಸಿದರು. ಜಡೇಶ ಎಮ್ಮಿಗನೂರು ಕಾರ್ಯಕ್ರಮ ನಿರೂಪಣೆ ಮಾಡಿದರು. ಎರ್ರಿಸ್ವಾಮಿ ತೊಗಲುಗೊಂಬೆ ಕಲಾ ಮೇಳ ಟ್ರಸ್ಟ್ ನ ಅಧ್ಯಕ್ಷರಾದ ಪ್ರಭುರವರು ಪ್ರಾಸ್ತವಿಕ ಮಾತನಾಡಿದರು.  ಟ್ರಸ್ಟ್ ಕಾರ್ಯದರ್ಶಿ ಶ್ರೀಮತಿ ಪಿ. ರೇಖಾ ರವರು ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್