LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ವೀರಭದ್ರಪ್ಪಾ ಗಂಗಪ್ಪ  ಮಾದಮ್ಮನವರ ನಿಧನ.


ಬೆಳಗಾವಿ  :  ಸಮೀಪದ ಮಾರಿಹಾಳ ಗ್ರಾಮದ ಗಣ್ಯ ವ್ಯಕ್ತಿಗಳು, ಸಹಕಾರಿ ಧುರಿಣರಾಗಿದ್ದ  ಮುತ್ಸದ್ದಿ ರಾಜಕಾರಣಿಗಳಾದ  ವೀರಭದ್ರಪ್ಪಾ ಗಂಗಪ್ಪಾ  ಮಾದಮ್ಮನವರ (80)  ಅವರು  ವಯೋಸಹಜ ಅನಾರೋಗ್ಯದಿಂದ ಗುರುವಾರ ನಿಧನರಾದರು. ಮೃತರಿಗೆ ಬೆಳಗಾವಿ (ಗ್ರಾ) ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾದಮ್ಮನವರ ಸೇರಿದಂತೆ ಮೂರು ಜನ ಗಂಡು ಮಕ್ಕಳು, ಒರ್ವ ಪುತ್ರಿ, ಅಪಾರ ಬಂಧು-ಬಳಗ ಹೊಂದಿದ್ದಾರೆ. ಗ್ರಾಮದ ಪ್ರಮುಖ ಧಾರ್ಮಿಕ ಸ್ಥಾನಗಳಾದ

 ನವಗ್ರಹ ದೇವಸ್ಥಾನ,  ಹನುಮಾನ ಮಂದಿರ ನಿರ್ಮಾಣ ಮಾಡಿ ಗ್ರಾಮದ ಜನತೆಗೆ ಸಮರ್ಪಿಸಿದ್ದರು. ಕರಡಿಗುದ್ದಿ ಜಡಿಸಿದ್ದೆಶ್ವರ ದೇವಸ್ಥಾನದ ಆವರಣದಲ್ಲಿ ಗಣಪತಿ ಮುರ್ತಿ ಹಾಗೂ ನವಗ್ರಹ ಮೂರ್ತಿ, ಪಂಥನಗರದಲ್ಲಿ ಗಣಪತಿ ಹಾಗೂ ಸಾಯಿ ಮಂದಿರ ಸ್ಥಾಪಿಸಿದ್ದ ಇವರು ಗೊಕಲು ನಗರದ ದುರ್ಗಾಮಾತಾ ಮೂರ್ತಿಯನ್ನು ನೀಡಿದ್ದರು, ಮಾರಿಹಾಳ ಗ್ರಾಮದ ಕೊಡಿಬಸವೇಶ್ವರ ದೇವಸ್ಥಾನದ  ಟ್ರಸ್ಟಿಗಳಾಗಿ,  ದೇವಸ್ಥಾನದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದು ಹಾಗೂ ಸ್ಥಳೀಯ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ  40 ವರ್ಷಗಳ ಕಾಲ ಅಧ್ಯಕ್ಷರಾಗಿ ನಿರ್ದೇಶಕರಾಗಿ ರೈತರ ಶ್ರಯೋಭಿವರದ್ದಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು.

ಮೃತರು ಗ್ರಾಮಗಳಲ್ಲಿ ದೇವಸ್ಥಾನಗಳ ನಿರ್ಮಾಣ ಅವುಗಳ ಉಸ್ತುವಾರಿ ಹಾಗೂ ಜಾತ್ರಾ ಕಮಿಟಿಯ ಪ್ರಮುಖರಾಗಿ ಗ್ರಾಮದಲ್ಲಿ ಧಾರ್ಮಿಕ ಸಂಸ್ಕಾರದ ಹರಿಕಾರರಾಗಿದ್ದರು. ತಾಲೂಕಾ ಮಟ್ಟದಲ್ಲಿ ಗ್ರಾಮದ ಹೆಸರುವಾಸಿಯಾಗಲು ಕಾರಣಿಕರ್ತರಾಗಿ ಬೆಳಗಾವಿ ತಾಲೂಕಾ ಎಪಿಎಂಸಿ ಹಾಗೂ ಟಿಎಪಿಸಿಎಮ್ ಎಸ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು ಗ್ರಾಮದ ಅನೇಕ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಕಾಯುಕ ಜೀವಿಗಳ ನಿಧಾನಕ್ಕೆ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.

ಮೃತರ ಅಂತಿಮ ದರ್ಶನ ಶುಕ್ರವಾರ 27ಮಾ‌ 11 ಘಂಟೆಯವರೆಗೆ ಮಾರಿಹಾಳ ಗ್ರಾಮದ ಸ್ವಗೃಹದಲ್ಲಿ ಸಾರ್ವಜನಿಕ ದರ್ಶನದ ನಂತರ ಸ್ವಜಮೀನಿನಲ್ಲಿ ಅಂತಿಮ ಕ್ರಿಯೆ ನೆರವೆರಲಿದೆ. ಮೃತರ ನಿಧನಕ್ಕೆ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಮೃತ್ಯುಂಜಯ  ಮಹಾಸ್ವಾಮಿಗಳು, ಮುರಗೋಡ ನೀಲಕಂಠ ಮಹಾಸ್ವಾಮಿಗಳು, ನಾಗನೂರ ಮಠದ ಸ್ವಾಮೀಜಿಗಳು, ಕುಂದರಗಿ ಸ್ವಾಮೀಜಿ, , ಕಾರಂಜಿಮಠದ ಗುರುಸಿದ್ದ‌ ಮಹಾಸ್ವಾಮೀಜಿ, ಸೇರಿದಂತೆ ಅನೇಕ ಶ್ರೀಗಳು, ರಾಜಕೀಯ ಮುಖಂಡರು, ಸಂಸದರು, ಶಾಸಕರು, ರಾಜ್ಯಸಭಾ ಸದಸ್ಯರು ಶೋಕ ವ್ಯಕ್ತಪಡಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್