LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

14ರಂದು ಅಂಬೇಡ್ಕರ್ ಹಬ್ಬ ಆಚರಣೆಗೆ ತೀರ್ಮಾನ



ಮುದ್ದೇಬಿಹಾಳ: ಏ.14ರಂದು ಸಾರ್ವತ್ರಿಕವಾಗಿ ಆಚರಿಸಲ್ಪಡುವ ಸಂವಿಧಾನ ಶಿಲ್ಪಿ ಡಾ|ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವವನ್ನು ಮುದ್ದೇಬಿಹಾಳ ನಗರದಲ್ಲಿ ಅಂಬೇಡ್ಕರ್ ಹಬ್ಬವನ್ನಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಛಲವಾದಿ ಸಮಾಜದ ಮುಖಂಡರ ನೇತೃತ್ವದಲ್ಲಿ ಎಲ್ಲ ದಲಿತ ಸಮುದಾಯಗಳ ಸಹಕಾರದೊಂದಿಗೆ ನಡೆಯುವ ಈ ಕಾರ್ಯಕ್ರಮ ಈ ಭಾಗಕ್ಕೆ ವಿಶೇಷವಾಗಿರಲಿದೆ ಎಂದು ದಲಿತ ಸಂಘಟನೆಗಳ ಮುಖಂಡರಾದ ಹರೀಶ ನಾಟೀಕಾರ, ವೈ.ಎಚ್.ವಿಜಯಕರ್, ಚನ್ನಪ್ಪ ವಿಜಯಕರ್ ಇನ್ನಿತರರು ತಿಳಿಸಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ರವಿವಾರ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು ಪ್ರತಿ ವರ್ಷವೂ ಅಂಬೇಡ್ಕರ್ ಅವರ ಜಯಂತ್ಯೋತ್ಸವವನ್ನು ಸಡಗರದಿಂದ ಆಚರಿಸುತ್ತೇವೆ. ಈ ಬಾರಿ ವಿಶೇಷವಾಗಿರಲಿ ಎಂದು ಹಬ್ಬದ ಮೆರುಗು ಕೊಡಲು ತೀರ್ಮನಿಸಿದ್ದೇವೆ. ಪಿಯುಸಿ ಮತ್ತು ಇನ್ನಿತರ ಉನ್ನತ ಶಿಕ್ಷಣದಲ್ಲಿ ಸಾಧನೆ ಮಾಡಿದವರು, ವಿವಿಧ ಕ್ಷೇತ್ರಗಳ ಸಾಧಕರು ಸೇರಿ ಹಲವರನ್ನು ಗೌರವಿಸಲಾಗುತ್ತದೆ. ಸಾರ್ವಜನಿಕರಿಗೆ ಅನ್ನದಾಸೋಹವನ್ನೂ ಏರ್ಪಡಿಸಲಾಗುತ್ತದೆ ಎಂದರು. ಅಂದು ಬೆಳಿಗ್ಗೆ 7ಕ್ಕೆ ಅಂಬೇಡ್ಕರ್ ವೃತ್ತದಲ್ಲಿರುವ ಡಾ|ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಹಬ್ಬದ ಕಳೆಗೆ ಚಾಲನೆ ನೀಡಲಾಗುತ್ತದೆ. ಬೆಳಿಗ್ಗೆ 9 ರಿಂದ ಸಂಜೆ 6 ಘಂಟೆಯವರೆಗೂ ಪುರಸಭೆ ಎದುರಿಗೆ ಸಾರ್ವಜನಿಕರಿಗೆ ದಾಸೋಹ ಇರಲಿದೆ. ಮದ್ಯಾಹ್ನ 3 ಘಂಟೆಗೆ ನೇತಾಜಿನಗರದಿಂದ ದ್ಯಾಮವ್ವನ ಗುಡಿ, ಬಸವೇಶ್ವರ ವೃತ್ತ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಡಾ|ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಲಿದೆ. ನೇತ್ರ ಮತ್ತು ಆರೋಗ್ಯ ಉಚಿತ ತಪಾಸಣೆ ಶಿಬಿರ ಇರಲಿದೆ. ರಾತ್ರಿ 8ಕ್ಕೆ ಸನ್ಮಾನ ಸಮಾರಂಭ ಗಣ್ಯರ ಸಮ್ಮುಖ ನೆರವೇರಲಿದೆ ಎಂದರು. ಈ ಸಂದರ್ಭ ಮುಖಂಡರಾದ ಸಾಬಣ್ಣ ಅಜಮನಿ, ಶಿವಪುತ್ರಪ್ಪ ಅಜಮನಿ, ಶ್ರೀಕಾಂತ ಚಲವಾದಿ, ಶಿವು ಶಿವಪೂರ, ಪ್ರಶಾಂತ ಕಾಳೆ, ಯಲ್ಲಪ್ಪ ಅಜಮನಿ, ಮಹಾಂತೇಶ ಚಲವಾದಿ, ಪಾವಡಪ್ಪ ದೊಡಮನಿ, ಶಂಕರ ಅಜಮನಿ, ಪ್ರಕಾಶ್ ಸರೂರ, ದೇವರಾಜ ಹಂಗರಗಿ, ಮಂಜು ತಿಳಗೂಳ, ವಿಕ್ರಮ್ ಮುದ್ದೇಬಿಹಾಳ, ಶಶಿಕುಮಾರ ಹಂಗರಗಿ, ರಾಜು ಬಿ.ಎನ್., ಮಂಜು ಚಲವಾದಿ ಸೇರಿ ಹಲವರು ಇದ್ದರು.



Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್