LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯಿಂದ ಪ್ರತಿರೋಧ ಚಳುವಳಿ ಗಟ್ಟಿಗೊಳಿಸಲು ನಿರ್ಧಾರ

ಬಳ್ಳಾರಿ,ಮೇ.೦6.: ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಹೆಸರಿನ ಬದಲಿಗೆ ಕೆಪಿಎಸ್ ಶಾಲೆ ಸ್ಥಾಪನೆ ಹೆಸರಿನ ಮೇಲೆ ಶಾಲೆಗಳ ವಿಲನಕ್ಕೆ ಮುಂದಾಗಿರುವುದರ ವಿರುದ್ಧ ಬಲಿಷ್ಠ ಚಳುವಳಿ ಬೆಳಸಲು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ, ಇಂದು ನಗರದಲ್ಲಿನ ಸಂಘದ ಕಚೇರಿಯಲ್ಲಿ ಎಲ್ಲಾ ಹಳ್ಳಿ ಸಮಿತಿಗಳ ನಾಯಕರು ಸೇರಿ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿತು.  
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಗೌರವ ಸಲಹೆಗಾರರಾದ ನಿವೃತ್ತ ಶಿಕ್ಷಕ ನರಸಣ್ಣ ಮಾತನಾಡುತ್ತಾ, ಹೆತ್ತ ತಾಯಿಯಂತೆ ಶಾಲೆಯು ಸಹ ನಮ್ಮ ತಾಯಿ ಇದ್ದಹಾಗೆ, ತಾಯಿ ಇಲ್ಲದೆ ಜನ್ಮವಿಲ್ಲ, ಶಾಲೆ ಇಲ್ಲದೆ ಜ್ಞಾನವಿಲ್ಲ, ಇಂತಹ ಜ್ಞಾನ ನೀಡುವ  ತಾಯಿಯ ಉಳಿವಿಗಾಗಿ ಮತ್ತೊಂದು ಅಪ್ಪಿಕೋ ಚಳುವಳಿ ನಡೆಸುವ ಅಗತ್ಯವಿದೆ, ನಾವು ಪ್ರಾಣ ಬಿಡುತ್ತೇವೆ,  ಆದರೆ ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ ಎಂಬ ಘೋಷವಾಕ್ಯ ಮೊಳಗಬೇಕಿದೆ, ಈ ಸರ್ವಾಧಿಕಾರಿ ಮತ್ತು ಕಾರ್ಪೊರೇಟ್ ಕಂಪನಿಗಳ ಸೇವಕ ಸರ್ಕಾರಗಳಿಗೆ ಶಿಕ್ಷಣ ವ್ಯಾಪಾರದ ಸರಕಲ್ಲ ಎಂದು ತೋರಿಸಲು ಪ್ರತಿ ಹಳ್ಳಿಗಳಲ್ಲಿಯೂ ಬೃಹತ್ ಪ್ರತಿರೋಧ ಚಳುವಳಿ ಕಟ್ಟಲು ಜನಸಾಮಾನ್ಯರು, ಶಾಲೆಯ ಹಳೆ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿ ಜನತೆ ಮುಂದಾಗಬೇಕು ಎಂದು ಕರೆ ನೀಡಿದರು.
ಸಮಿತಿಯ  ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಮಾತನಾಡುತ್ತಾ, ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್  ಶಾಲೆ ಸ್ಥಾಪನೆ ಹೆಸರಿನ ಮೇಲೆ  ಸಾವಿರಾರು ಶಾಲೆಗಳನ್ನು ಮುಚ್ಚಲು ಮುಂದಾಗಿರುವುದಕ್ಕೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ, ತನ್ನ ವರೆಸೆಯನ್ನು ಬದಲಾಯಿಸುತ್ತಾ, ಜನರನ್ನು ಮರಳು ಮಾಡಲು ಮತ್ತು ವಿವಿಧ ಶಾಲೆಗಳ ವಿಲೀನ ಮಾಡುವ, ಕೆಪಿಎಸ್ ಶಾಲೆ  ಪ್ರಾರಂಭಿಸಲು ಶಿಕ್ಷಣಕ್ಕೆ ೮ ಗ್ಯಾರಂಟಿ ಎಂಬ ಹೆಸರಿನಿಂದ ಪ್ರಚಾರ ಮಾಡುತ್ತಿದ್ದಾರೆ, ಇದು ಸಹ ಶಾಲೆಗಳ ಮುಚ್ಚುವ ಹುನ್ನಾರವಲ್ಲದೆ, ಬೇರೇನೂ ಅಲ್ಲ. ನಮ್ಮೂರ ಶಾಲೆ ಉಳಿಸಿಕೊಳ್ಳುಲು ನಮ್ಮ ಹೋರಾಟವನ್ನು ತೀವ್ರಗೊಳಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಗ್ರಾಮ ಸಮಿತಿಗಳ ಸಭೆ ನಡೆಸುವುದು, ವಿದ್ಯಾರ್ಥಿ ಸಂಕಲ್ಪದ ಓದು, ಮಕ್ಕಳ ಶಿಬಿರ, ಬ್ಯಾನರ್ ಕಟ್ಟುವುದು, ಬಿಇಓ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ ಮುಂತಾದ ಚಟುವಟಿಕೆಗಳು ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ನಾಗರತ್ನ, ಶಾಂತ, ಗುರಳ್ಳಿ ರಾಜ, ಸೌಮ್ಯ ಜೆ., ಎಐಡಿಎಸ್‌ಓ ವಿದ್ಯಾರ್ಥಿ ಸಂಘದ ಜಿಲ್ಲಾ ಅಧ್ಯಕ್ಷ ಈರಣ್ಣ, ಉಪಾಧ್ಯಕ್ಷೆ ಶಾಂತಿ ಸಮಿತಿ ಸದಸ್ಯರಾದ ತಿಕ್ಕಮ್ಮ, ಅಸುಂಡಿ ಹೊನ್ನೂರಪ್ಪ, ಯಾರಗುಡಿ ತಿರುಮಲ ಅಮರಾಪುರ ಲಕ್ಷಿö್ಮ, ಎರೇಪ್ಪ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್