LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಚಚಡಿ ಏತ್ ನೀರಾವರಿ ಯೋಜನೆ ಕಾಮಗಾರಿ ಮುಕ್ತಾಯಗೊಳಿಸಲು  ಅಗ್ರಹ

ನೇಸರಗಿ . ಬೈಲಹೊಂಗಲ ತಾಲೂಕಿನ ಬಹುದಿನಗಳ ನೀರಾವರಿ ಯೋಜನೆಯ  ಕನಸು 2005 ರಲ್ಲಿ ಪ್ರಾರಂಭವಾದರೂ ಇನ್ನೂ ಆ ಏತ್ ನೀರಾವರಿ ಯೋಜನೆ ಕನಸು ನನಸಲ್ಲ ಇನ್ನೂವರೆಗೂ ಕನಸಾಗಿ ಉಳಿದಿದ್ದು, ಶಿರೂರ ದ್ಯಾಮನಿಂದ ನೀರು ಹರಿಸುವ ಯೋಜನೆ ಕೇವಲ ಯೋಜನೆಯಾಗಿಯೇ ಉಳಿದಿದ್ದು, ಈ ಮಹತ್ವಕಾಂಕ್ಷೆಯ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕೆಂದು ಹಸಿರು ಸ್ರೇನೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಗೋಕಾಕ ನಗರದ ಕಾರ್ಯನಿರ್ವಾಹಕ ಅಭಿಯಂತರರು, ಕರ್ನಾಟಕ ನೀರಾವರಿ ನಿಗಮದ ಕಾರ್ಯಾಲಯಕ್ಕೆ ಬೇಟಿ ನೀಡಿ ಮನವಿ ಸಲ್ಲಿಸಿದರು.
     ಈ ಯೋಜನೆಯಿಂದ ಸುಮಾರು 40 ಹಳ್ಳಿಗಳಿಗೆ ನೀರಿನ ಭವನೆ ತಪ್ಪಿಸುವ ಉದ್ದೇಶದಿಂದ ಪ್ರಾರಂಭವಾದ  ಕಾಮಗಾರಿ ಅಲ್ಲಿ, ಇಲ್ಲಿ ಅಲ್ಪ ಸ್ವಲ್ಪ್ ಕೆಲಸ ಮಾಡಿ ನೀರಾವರಿ ಕಾಮಗಾರಿ ಕಾರ್ಯ ಇದಕ್ಕೆ ಜನಪ್ರತಿನಿದಿಗಳ ಹಾಗೂ ಅಧಿಕಾರಿಗಳ ವರ್ತನೆಯಿಂದ ಕುಂಟಿತವಾಗಿ ಸಾಗಿದ್ದು ಆದಷ್ಟು ಬೇಗ ಕಾಮಗಾರಿ ಮುಗಿಸಿ ಈ ಭಾಗದ ರೈತರ, ದನಕರುಗಳ ಕುಡಿಯುವ ನೀರಿಗೆ, ಕುಡಿಯುವ ನೀರಿನ ಅಭಾವ ತಪ್ಪಿಸಲು ಕ್ರಮ ತೆಗೆದುಕೊಳ್ಳಲು  ರೈತರು  ಅಗ್ರಹಿಸಿದ್ದಾರೆ.
   ಈ ಸಂದರ್ಭದಲ್ಲಿ ಬಸವರಾಜ  ಹೊಸಮನಿ,
ಸತ್ಯನಾಯಿಕ ನಾಯಿಕ,ಹುಸೇನಸಾಬ್ ಕಿಲ್ಲದಾರ,
ಸಿದ್ದಪ್ಪ ಹಣ್ಣಿಕೇರಿ,ಅಪ್ಪಣ್ಣ ಬಶೆಟ್ಟಿ,
ಶಿವಾನಂದ್ ಹೊಸಮನಿ,ಮಲ್ಲೇಶ ಚಿಕ್ಕೋಡಿ ,
ಯಲ್ಲಪ್ಪ ಚಿಕ್ಕೋಪ್ಪ,ಈರಪ್ಪ ಪರಿಟ್, ಹಾಗೂ ರೈತರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್