LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಗುರುಪೂರ್ಣಿಮೆಯ ಅಂಗವಾಗಿ ಗುರುಲಿಂಗ ಶಿವಾಚಾರ್ಯರಿಗೆ ಭಕ್ತ ಮತ್ತು ಶಿಷ್ಯರಿಂದ ಸನ್ಮಾನ

ತಾಳಿಕೋಟೆ, ಸುಕ್ಷೇತ್ರ ಗುಂಡಕನಾಳದ ಗ್ರಾಮದ ಬೃಹನ್ ಮಠದ ಶ್ರೀ ಷ.ಬ್ರ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಶ್ರೀ ಮಠದ ಭಕ್ತ ವೃಂದದವರು ಗುರುಪೂರ್ಣಿಮೆಯ ಅಂಗವಾಗಿ ಸನ್ಮಾನಿಸಿ ಗೌರವಿಸಿ ಆಶಿರ್ವಾದ ಪಡೆದುಕೊಂಡರು.
      ಈ ಸಮಯದಲ್ಲಿ ಶ್ರೀಮಠದ ಪೀಠಾಧಿಪತಿ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ          ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕನ್ನು ನೀಡುವವನೇ ಗುರು. ಗುರು ಎಂದರೆ ಕೇವಲ ಶಾಲೆಯ ಶಿಕ್ಷಕರಲ್ಲ. ನಮ್ಮ ಜೀವನದಲ್ಲಿ ಉತ್ತಮ ದಾರಿಯನ್ನು ತೋರಿಸುವ ತಾಯಿ ಮತ್ತು ತಂದೆ, ಶಾಲಾ ಶಿಕ್ಷಕರು, ಆಧ್ಯಾತ್ಮಿಕ ಗುರುಗಳು, ಸಮಾಜದ ಮಾರ್ಗದರ್ಶಕರು, ಜೀವನದ ಮೌಲ್ಯಗಳನ್ನು ಕಲಿಸುವ ಹಿರಿಯರು, ಇವರೆಲ್ಲರೂ ಗುರುಗಳೇ ಆಗಿದ್ದಾರೆ ಈ ದಿನ ಭಕ್ತರು ಮತ್ತು ವಿದ್ಯಾರ್ಥಿಗಳು ಗುರುಗಳಿಗೆ ಪಾದನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಾರೆ. ಹೂವು, ಫಲ ಹಾಗೂ ಕಾಣಿಕೆಗಳನ್ನು ಅರ್ಪಿಸುತ್ತಾರೆ. ಗುರುಗಳ ಉಪದೇಶಗಳನ್ನು ಸ್ಮರಿಸುತ್ತಾರೆ. ಧಾರ್ಮಿಕ ಆಚರಣೆಯ ಮಠಗಳು, ದೇವಾಲಯಗಳು, ಆಶ್ರಮಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಧ್ಯಾನ, ಭಜನೆ, ಪ್ರವಚನ ಹಾಗೂ ಅನ್ನದಾಸೋಹ ನಡೆಯುತ್ತದೆ ಎಂದ ಅವರು ಗುರುಪೂರ್ಣಿಮೆ ನಮಗೆ ವಿನಯ, ಕೃತಜ್ಞತೆ, ಶಿಸ್ತು ಮತ್ತು ಜ್ಞಾನದ ಮಹತ್ವವನ್ನು ನೆನಪಿಸುತ್ತದೆ. ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನದಿಂದ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ಸು, ಸಾರ್ಥಕತೆ ಮತ್ತು ಸತ್ಪಥವನ್ನು ಸಾಧಿಸಬಹುದಾಗಿದೆ ಎಂದ ಅವರು ಗುರು ಇಲ್ಲದ ಜೀವನ ದಿಕ್ಕಿಲ್ಲದ ಹಡಗಿನಂತಿದೆ ಗುರುಗಳ ಮಾರ್ಗದರ್ಶನವೇ ಯಶಸ್ಸಿನ ನಿಜವಾದ ದಾರಿದೀಪವಾಗಿದೆ ಎಂದರು.
         ಈ ಸಮಯದಲ್ಲಿ ಚನ್ನವೀರಯ್ಯ ಇಂಗಳೇಶ್ವರ, ಕುಮಾರ ಬೆನಾಳ ಮಠ, ಶಶಿಧರಸ್ವಾಮಿ ಹಿರೇಮಠ ಗುಂಡಕನಾಳ, ಶಿವನಗೌಡ ಬೆಕಿನಾಳ, ಮಡಿವಾಳಪ್ಪ ಸರ್, ಗುಂಡಕನಾಳ ನಿಂಗು, ಸುನಿಲ್ ಬಡಿಗೇರ, ಶಿವನಗೌಡ ಬಿರಾದಾರ್, ಮೊದಲಾದವರು ಉಪಸ್ಥಿತರಿದ್ದರು.
----
     ಗುರು ಜೀವನದಲ್ಲಿ ಜ್ಞಾನವನ್ನು ನೀಡುವುದಷ್ಟೇ ಅಲ್ಲ, ಉತ್ತಮ ವ್ಯಕ್ತಿತ್ವ, ಶಿಸ್ತು, ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಾರೆ. ಜೀವನದ ಕಷ್ಟಗಳನ್ನು ಎದುರಿಸುವ ಧೈರ್ಯ ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿವೇಕವನ್ನು ಗುರುಗಳು ನೀಡುತ್ತಾರೆ.
                                                     ಶ್ರೀ ಷ.ಬ್ರ ಗುರುಲಿಂಗ ಶಿವಾಚಾರ್ಯರು
                                                          ಗುಂಡಕನಾಳ ಬೃಹನ್ ಮಠ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್