ಬಳ್ಳಾರಿ,01:: ಭೀಮ್ ಆರ್ಮಿ ಭಾರತ್ ಎಕ್ತಾ ಮಿಷನ್‌ನ ರಾಷ್ಟ್ರೀಯ ಅಧ್ಯಕ್ಷ ವಿನಯ್ ರತನ್ ಸಿಂಗ್ ಅವರು ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಸಿ. ರಘು ಅವರನ್ನು ನೇಮಕ ಮಾಡಿ, ಉತ್ತರ ಪ್ರದೇಶದ ಸಹಾರನ್‌ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತ ನೇಮಕಾತಿ ಆದೇಶ ಪತ್ರವನ್ನು ನೀಡಿದರು.
ಈ ಹಿನ್ನೆಲೆಯಲ್ಲಿ ಬಳ್ಳಾರಿ ನಗರದ ಮರ್ಚೆಡ್ ಹೋಟೆಲ್‌ನಲ್ಲಿ ಭೀಮ್ ಆರ್ಮಿ ಕಾರ್ಯಕರ್ತರು ಮತ್ತು ಅವರ ಸ್ನೇಹಿತರು ನೂತನ ರಾಜ್ಯಾಧ್ಯಕ್ಷ ಸಿ. ರಘು ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿ. ರಘು, ರಾಜ್ಯದಲ್ಲಿ ಭೀಮ್ ಆರ್ಮಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಶ್ರಮಿಸುತ್ತೇನೆ ಮತ್ತು ಸಮಾಜದ ದುರ್ಬಲ ವರ್ಗದ ಜನರಿಗೆ ಮತ್ತು ಶೋಷಿತ ಸಮುದಾಯದ ದಲಿತ ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳ ರಕ್ಷಣೆಗಾಗಿ ಸಂಘಟನೆಯನ್ನು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ವಿಸ್ತರಿಸಿ, ಯುವಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಗೆ ಸೇರ್ಪಡೆಗೊಳಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾರ್ಗದರ್ಶಕ ಗುರುಗಳಾದ ಅಬ್ದುಲ್ ಹೈ ತೋರಗಲ್ಲು, ಶೇಖರ್, ಟಿಪ್ಪು ನವಾಜ್, ಕೇದರ, ನಯಾಜ್ ಅಹಮದ್, ರವಿಚಂದ್ರ, ಸುಂದರೇಶ, ಹಿಪ್ತೇಕರ ಅಹಮದ್, ವಿನೋದ್, ರಾಜಶೇಖರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.