LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ವಿಜೃಂಭಣೆಯಿಂದ ಡಾ.ಬಿ.ಆರ್. ಅಂಬೇಡ್ಕರ್ ರವರ ೧೩೫ನೇ ಜಯಂತಿ ಆಚರಣೆ

ಯರಗಟ್ಟಿ : ತಾಲೂಕಾ ಆಡಳಿತದಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರು ೧೩೫ನೇ ಜಯಂತಿಯನ್ನು ಪಟ್ಟಣದ ಅಂಬೇಡ್ಕರ್ ಸಭಾಂಗಣದಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ ಪೂಜೆ ಸಲ್ಲಿಸಿ ಪು?ರ್ಚನೆ ಮಾಡಿದರು. ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ ಮಾತನಾಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತೋತ್ಸವಕ್ಕೆ ಉತ್ಸವಕ್ಕೆ ಪೂಜೆ ಸಲ್ಲಿಸಿ ಗ್ರಾಮಸ್ಥರ ಸಮ್ಮುಖದಲ್ಲಿ ಮೆರವಣಿಗೆ ಚಾಲನೆ ನೀಡಲಾಯಿತು.
ಜಯಂತಿಯ ಕಾರ್ಯಕ್ರಮದ ಉದ್ದೇಶಿಸಿ ತಹಶೀಲ್ದಾರ ಮಾತನಾಡುತ್ತಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕಠಿಣ ಸಮದಿಂದ ಅಸ್ಪೃಶ್ಯತೆಯನ್ನು ಎದುರಿಸಿ ಉನ್ನತ ಶಿಕ್ಷಣ ಪಡೆದು ವಿಶ್ವ ಜ್ಞಾನಿ ಎನಿಸಿಕೊಂಡಿದ್ದಾರೆ. ಅವರು ನೀಡಿದ ಸಂವಿಧಾನದಿಂದ ಎಲ್ಲಾ ವರ್ಗ ಜನರಿಗೆ ಅನುಕೂಲವಾಗಿದೆ. ಅವರು ಕೇವಲ ಒಂದೇ ಜಾತಿಗೆ ಸೀಮಿತ ರಲ್ಲ. ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನಂತರ ಸಿಪಿಐ ಆಯ್. ಎಂ. ಮಠಪತಿ ಮಾತನಾಡಿ ಸರ್ವರಿಗೂ ಸಮಾನತೆಯನ್ನು ಕಲ್ಪಿಸಿದ ಮಹಾಚೇತನ, ನವ ಭಾರತದ ನಿರ್ಮಾತೃ, ಭಾರತರತ್ನ, ಸಂವಿಧಾನಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ರವರು ಪ್ರತಿಯೊಬ್ಬ ಭಾರತೀಯನಿಗೆ ಸಾಮಾಜಿಕ ಸಮಾನತೆ ಸಿಗಬೇಕು. ಭ್ರಾತೃತ್ವ, ಸಹೋದರತ್ವದಿಂದ ಬಾಳಬೇಕು ಎಂಬ ವೈವಿದ್ಯಮಯ ಚಿಂತನೆಗಳಿಂದ ಕೂಡಿದ ಸಂವಿಧಾನವನ್ನು ಬಾಬಾ ಸಾಹೇಬ್‌ರು ನಮಗೆ ನೀಡಿದ್ದಾರೆ. ವಿಶ್ವದಲ್ಲಿ ಸದೃಢ ಪ್ರಜಾಪ್ರಭುತ್ವ ದೇಶವಾಗಿ ಭಾರತ ನಿಂತಿರುವುದಕ್ಕೆ ಸಂವಿಧಾನದ ಆಶಯಗಳೇ ಬಹುಮುಖ್ಯ ಕಾರಣ ಎಂದು ಹೇಳಿದರು.
ನಂತರ ಯುವಕರು ಮುಗಿಲು ಮುಟ್ಟುವ ಜೈ ಭೀಮ್ ಜೈ ಅಂಬೇಡ್ಕರ್ ಎಂದು ಘೋ?ಣೆಗಳೊಂದಿಗೆ ಮೆರವಣಿಗೆ ಸಂಚರಿಸಿದರು. ಈ ವೇಳೆ ಮೆರವಣಿಗೆಯಲ್ಲಿ ಯುವಕರು ಜೈ ಭೀಮ್ ಜೈ ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಕುಣಿದು ಕೊಪ್ಪಳಿಸಿ ಆನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಪ. ಪಂ. ಸದಸ್ಯರಾದ ಹನಮಂತ ಹಾರೂಗೊಪ್ಪ ಸಲಿಂಬೇಗ ಜಮಾದಾರ ನಿಖಿಲ ಪಾಟೀಲ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಪಶು ವೈದ್ಯಾಧಿಕಾರಿ ಎಂ ವ್ಹಿ ಪಾಟೀಲ, ಮಾಜಿ ತಾ. ಪಂ. ಸದಸ್ಯ ವಿಠ್ಠಲಗೌಡ ದೇವರಡ್ಡಿ, ಮಾಜಿ ಸೈನಿಕ ಕುಮಾರ ಹಿರೇಮಠ, ಕಸಪಾ ತಾಲೂಕಾಧ್ಯಕ್ಷ ತಮ್ಮಣ್ಣ ಕಾಮಣ್ಣವರ, ನಿವೃತ್ತಿ ಪ್ರಧಾನ ಗುರುಗಳಾದ ಎಸ್ ಎಸ್ ಕುರುಬಗಟ್ಟಿಮಠ, ಹೇಸ್ಕಾಂ ಅಧಿಕಾರಿ ಮಹಾಂತೇಶ ಯರಗಟ್ಟಿ, ಮಾಜಿ ಸೈನಿಕ ಪುಂಡಲೀಕ ತಳವಾರ, ಭಾಸ್ಕರ ಹಿರೇಮೆತ್ರಿ, ಸಂತೋ? ಚನ್ನಮೆತ್ರಿ, ಲಕ್ಕಪ್ಪ ಹುಣಶೀಕಟ್ಟಿ, ಸುರೇಶ ಭಜಂತ್ರಿ, ಲಕ್ಕಪ್ಪ ಜಗದಾರ ಸೇರಿದಂತೆ ಅನೇಕರು ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್