LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಡಾ. ಸಿ. ಕೆ. ಜೋರಾಪೂರರ ಅಮೃತ ಮಹೋತ್ಸವ ಸಮಾರಂಭ


ಬೆಳಗಾವಿ ೦೮: ಬೆಳಗಾವಿಯ ಹಿರಿಯ ಸಾಹಿತಿ, ಕನ್ನಡ ಹೋರಾಟಗಾರ ಡಾ. ಸಿ. ಕೆ. ಜೋರಾಪೂರ ಅವರ ಎಪ್ಪತ್ತೈದನೆಯ ವರ್ಷದ ಅಮೃತ ಮಹೋತ್ಸವ ಸಮಾರಂಭ ಇದೇ ದಿ. ೧೦ ರವಿವಾರ ಬೆಳಿಗ್ಗೆ ೧೧ ಗಂಟೆಗೆ ಶಿವಬಸವನಗರದ ಕನ್ನಡ ಭವನದಲ್ಲಿ ಜರುಗಲಿದ್ದು, ಪ.ಪೂ. ಡಾ. ಸಿದ್ದರಾಮ ಮಹಾಸ್ವಾಮಿಗಳು, ಜಗದ್ಗುರು  ತೋಂಟದಾರ್ಯ ಮಠ ಗದಗ ಇವರು ದಿವ್ಯ ಸಾನ್ನಿಧ್ಯ ವಹಿಸಿ "ಅದಮ್ಯ ಚೇತನ" ಎಂಬ ಅಭಿನಂದನ ಸಂಪುಟ ಬಿಡುಗಡೆಗೊಳಿಸಲಿದ್ದಾರೆ. ಡಾ. ಎಚ್. ಬಿ. ರಾಜಶೇಖರ ಅವರ ಅಧ್ಯಕ್ಷತೆಯಲ್ಲಿ ಹಾವೇರಿ ಗೋಟಗೋಡಿ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ. ಎನ್. ಭಾಸ್ಕರ ಅವರು ಸಮಾರಂಭ ಉದ್ಘಾಟಿಸುವರು. ಶ್ರೀ ಗೋವಿಂದಪ್ಪ ಗೌಡಪ್ಪಗೋಳ, ಶ್ರೀ ರಾಘವೇಂದ್ರ ಕಾಗವಾಡ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶ್ರೀ ಪ್ರಭಾಕರ ಉಳ್ಳಾಗಡ್ಡಿ ಅವರು ಅಭಿನಂದನ ಸಂಪಪುಟದ ಕುರಿತು ಮಾತನಾಡಲಿದ್ದು, ಪ್ರಧಾನ ಸಂಪಾದಕರಾದ ಶ್ರೀ ಎಲ್. ಎಸ್. ಶಾಸ್ತ್ರಿ ಮತ್ತು ಡಾ. ಎಚ್. ಐ. ತಿಮ್ಮಾಪುರ ಅವರು ಪ್ರಾಸ್ತಾವಿಕ ಹಾಗೂ ಅಭಿನಂದನ ಭಾಷಣ ಮಾಡಲಿದ್ದಾರೆ. ಪೂಜ್ಯ ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು, ನಾಗನೂರು ಮಠದ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು, ಕಿತ್ತೂರು ಕಲ್ಮಠದ ಶ್ರೀ ಮಡಿವಾಳೇಶ್ವರ ಸ್ವಾಮಿಗಳ ಸಾನ್ನಿಧ್ಯವಿರುತ್ತದೆ. ಅಭಿನಂದನ ಸಮಿತಿ ಪರವಾಗಿ ಜೋರಾಪೂರ ದಂಪತಿಗಳ ಸನ್ಮಾನದ, ನಂತರ ಜೋರಾಪೂರರ ಅವರು ತಮ್ಮ ಆತ್ಮೀಯ ಬಳಗದ ಅರವತ್ತು ಜನ  ಗಣ್ಯಮಾನ್ಯರನ್ನು ಸತ್ಕರಿಸಲಿದ್ದಾರೆ.  ಸಮಾರಂಭಕ್ಕೆ ಆಗಮಿಸಬೇಕಾಗಿ ಸಮಿತಿ ಅಧ್ಯಕ್ಷರಾದ ಡಾ. ಎಚ್. ಬಿ. ರಾಜಶೇಖರ , ಕಾರ್ಯಾಧ್ಯಕ್ಷರಾದ ಶಿವು ನಂದಗಾವಿ, ಕಾರ್ಯದರ್ಶಿ ಡಾ. ಎಚ್. ಐ. ತಿಮ್ಮಾಪುರ ಅವರು ಕೋರಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್