LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಗರ್ಭಿಣಿಯರ ಆರೋಗ್ಯ ಜಾಗೃತಿಗೆ ಕರೆ ನೀಡಿದ ಡಾ. ಚಂದನಾ



ಬಳ್ಳಾರಿ, ಏ.06.: ವಿಶ್ವ ಆರೋಗ್ಯ ದಿನದ ಅಂಗವಾಗಿ FPAI ಬಳ್ಳಾರಿ ಶಾಖೆಯ ವತಿಯಿಂದ ಗರ್ಭಿಣಿಯರಿಗಾಗಿ  ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಟಿ.ಜಿ. ವಿಠ್ಠಲ್ ವಹಿಸಿದ್ದರು.

FPAI ಅಧ್ಯಕ್ಷರಾದ ಶ್ರೀ ಟಿ.ಜಿ. ವಿಠ್ಠಲ್ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಲಿಂಗತಾರತಮ್ಯ ಮಾಡದೆ ಸಮಬಾಳ್ವೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.

FPAI  ಉಪಾಧ್ಯಕ್ಷರಾದ ಡಾ. ಚಂದನಾ ಅವರು ಸಂಪನ್ಮೂಲ ವ್ಯಕ್ತಿಯಾಗಿ ಗರ್ಭಿಣಿಯರ ಆರೈಕೆ ಕುರಿತು ಮಾಹಿತಿ ನೀಡಿ, ನಿಯಮಿತ ತಪಾಸಣೆ, ಸ್ಕ್ಯಾನಿಂಗ್, ರಕ್ತ ಪರೀಕ್ಷೆ ಹಾಗೂ ಥೈರಾಯ್ಡ್ ಪರೀಕ್ಷೆಯ ಮಹತ್ವವನ್ನು ವಿವರಿಸಿದರು. ಪೌಷ್ಟಿಕ ಆಹಾರ, ಸಮರ್ಪಕ ನಿದ್ರೆ ಮತ್ತು ವಿಶ್ರಾಂತಿ ಗರ್ಭಿಣಿಯರ ಆರೋಗ್ಯಕ್ಕೆ ಅತ್ಯಂತ ಅಗತ್ಯವೆಂದು ತಿಳಿಸಿದರು. ಜೊತೆಗೆ ಟಿಟಿ ಲಸಿಕೆ ಕಡ್ಡಾಯವಾಗಿ ಪಡೆಯುವುದು ಹಾಗೂ 2–3 ವರ್ಷಗಳ ಮಕ್ಕಳ ನಡುವಿನ ಅಂತರ ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಎಸ್. ವಿಜಯಲಕ್ಷ್ಮಿ ಶಾಖಾ ವ್ಯವಸ್ಥಾಪಕರು FPAI ಅವರು ತಮ್ಮ  ಪ್ರಸ್ತಾವಿಕ ನುಡಿಗಳಲ್ಲಿ ವಿಶ್ವ ಆರೋಗ್ಯ ದಿನದ  ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಒಟ್ಟಾರೆ 50 ಗರ್ಭಿಣಿಯರು ಭಾಗವಹಿಸಿದ್ದರು ಕಾರ್ಯಕ್ರಮದ ನಂತರ ಅವರಿಗೆ  ಸ್ಕ್ಯಾನಿಂಗ್ ಮತ್ತು ರಕ್ತ ಪರೀಕ್ಷೆ ಸೇವೆಗಳನ್ನು  ನೀಡಲಾಯಿತು

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್