LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಬಸವ ಪೂರ್ವ ಯುಗ ಅಸಮಾನತೆಯಿಂದ ಕೂಡಿತ್ತು :, ಡಾ. ಸೋಮಶೇಖರ್ 




ಬಳ್ಳಾರಿ: ಮಾಚ್೯ 30.. ಬಸವ ಪೂರ್ವ ಯುಗವು ಸಾಂಸ್ಕೃತಿಕ, ಧಾರ್ಮಿಕವಾಗಿ ವೈವಿಧ್ಯಮಯವಾಗಿದ್ದರೂ ಸಾಮಾಜಿಕ ಅಸಮಾನತೆಯಿಂದ ಕೂಡಿದ ಕಾಲವಾಗಿತ್ತು.ಆ ಕಾಲದ  ಶಿವಶರಣರಿಂದ ರಚನೆಯಾದ ಸಾಹಿತ್ಯದಿಂದ ವಚನ ಸಾಹಿತ್ಯಕ್ಕೆ ಸ್ವಷ್ಟ ರೂಪ ಸಿಗಲು ಸಾಧ್ಯವಾಯಿತು .ದೊರಕಿರುವ ವಚನಕಾರರ ವಚನಗಳಲ್ಲಿ ಪ್ರಭುತ್ವದ ನಿರಾಕರಣೆ,ವೈಚಾರಿಕ ಮನೋಭಾವ,ಆಳವಾದ ಸಾಮಾಜಿಕ ಚಿಂತನೆಯ ತುಡಿತಗಳಿವೆ.ಆದ್ಯ ವಚನಕಾರ ಜೇಡರ ದಾಸಿಮಯ್ಯ,ಕೊಂಡ ಗುಳಿ ಕೇಶಿರಾಜ,ಶಂಕರ ದಾಸಿಮಯ್ಯ,ಡೋಹರ ಕಕ್ಕಯ್ಯ,ಮಾದಾರ ಚನ್ನಯ್ಯ,ಕೆಂಭಾವಿ ಭೋಗಣ್ಣ,ತೆಲುಗು ಜೊಮ್ಮಣ್ಣ,ನಿಜಗುಣದೇವ,ಚಂದಿಮರಸ,ಸಕಲೇಶ ಮಾದರಸ ಮುಂತಾದ ಶಿವಶರಣರು ಚಲನಶೀಲ ಸಮಾಜದ ನಿರ್ಮಾಣ, ದಮನಿತರನು ಮೇಲೆತ್ತಲು ಶ್ರಮಿಸಿ ,ಜೀವನ ಮೌಲ್ಯಗಳನು ನವೀಕರಿಸುವ ಕಾರ್ಯ ಕೈಕೊಂಡರೆಂದು ಮೋಕಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎಂ.ಸೋಮಶೇಖರ ಅಭಿಪ್ರಾಯಪಟ್ಟರು.

ಅವರು ಕೌಲ್ ಬಜಾರಿನ ರಾಯಲ್ ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ' ಜೋಳದರಾಶಿ ದೊಡ್ಡನಗೌಡರ ದತ್ತಿ,ಜೋಳದರಾಶಿ ಚನ್ನವೀರನಗೌಡರ ದತ್ತಿ ಹಾಗೂ ಪ್ರೊ.ಕೆ.ಬಿ.ಹನುಮಂತರಾಯರ ದತ್ತಿ ಕಾರ್ಯಕ್ರಮದಲ್ಲಿ ' ಬಸವ ಪೂರ್ವ ಯುಗದ ಶಿವಶರಣರು ' ಎಂಬ ವಿಷಯದ ಕುರಿತು ಮಾತನಾಡಿದರು.

ಬಸವ ಪೂರ್ವ ಕಾಲಕ್ಕೂ ಬಸವಣ್ಣನವರ ಕಾಲದ ಸಾಮಾಜಿಕ ವ್ಯವಸ್ಥೆಗೂ ಬಹಳ ವ್ಯತ್ಯಾಸವಿದೆ.ವಚನವೆಂದರೆ ಸಂಸ್ಕೃತಿ,ವಿಜ್ಞಾನ, ಸಾಹಿತ್ಯ ಮತ್ತು ಚಳವಳಿಯ ಅರ್ಥಗಳ ಜೊತೆಗೆ ಅನೇಕ ಆಶಯಗಳನ್ನು ಹೊಂದಿದೆ.ಜನ ಸಾಮಾನ್ಯರಿಗಾಗಿ ಸಾಮಾನ್ಯರು ರಚಿಸಿದ್ದು ವಚನ ಸಾಹಿತ್ಯ.ಅದು ತನ್ನ ಭಾಷೆ ಮತ್ತು ವಸ್ತುವಿನಿಂದ ಗಮನ ಸೆಳೆದು ನಡುಗನ್ನಡದಿಂದ ದೇಶೀಯತೆಗೆ ಸಾಗಿ ಸಮ ಸಮಾಜ ಕಟ್ಟುವ ಹಂಬಲ ಹೊಂದಿತ್ತು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಇತಿಹಾಸ ಸಂಶೋಧಕ ಡಾ.ಸಿ.ಎಂ.ವೀರಭದ್ರಯ್ಯ ಮಾತನಾಡಿ,ವಚನ ಯುಗದ ಪೂರ್ವದಲ್ಲಿಯೇ ತಮಿಳುನಾಡಿನಲ್ಲಿ ತಿರುಮೂಲರು,ಅರವತ್ಮೂರು ಜನ ಪುರಾತನರು,ನಯನ್ಮಾರರು,ಸುಂದರರು ಶಿವನನ್ನು ಆರಾಧಿಸುವ ಶರಣರಾಗಿದ್ದರು.ನಂದಿಗ್ರಾಮ,ಬಳ್ಳಿಗಾವೆ,ಐಹೊಳೆ,ಆಂಧ್ರ,ತೆಲಂಗಾಣ ಸೇರಿದಂತೆ ದೊರೆತ ಶಾಸನಗಳಲ್ಲಿ ಶಿವಭಕ್ತ,ಮಹೇಶ್ವರ,ಪರಮ‌ಮಹೇಶ್ವರ ಎಂಬ ಉಲ್ಲೇಖಗಳಿವೆ.ಶೈವ ಪಂಥದ ಪಾಶುಪಾತರು,ಕಾಳಾಮುಖರು,ಕಾಪಾಲಿಕರು,ಲಕುಲೀಶ,ನಾಥ ಪಂಥ ಹೀಗೆ ದಕ್ಷಿಣ ಭಾರತದಲ್ಲಿ ಶೈವ ಸಿದ್ಧಾಂತದ ಪಾರಮ್ಯವಿತ್ತು ಎಂದು ಹೇಳಿದರು.

ರಾಯಲ್ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಫರ್ಜಾನಾ ಬೇಗಂ ಅಧ್ಯಕ್ಷತೆವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಅಧ್ಯಕ್ಷ ಕೆ.ಪಂಪನಗೌಡ,ನವ ಕರ್ನಾಟಕ ಯುವಶಕ್ತಿ ರಾಜ್ಯ ಕಾರ್ಯಾಧ್ಯಕ್ಷ ಸಿದ್ಮಲ್ ಮಂಜುನಾಥ,ಜಿ.ಗುರುಲಿಂಗಪ್ಪ,ಜೆ.ಎಂ.ಶಿವರುದ್ರಯ್ಯ ಉಪನ್ಯಾಸಕರಾದ ಎ.ಮಲ್ಲಿಕಾರ್ಜುನ,ಶಶಿಧರ,ರವಿಶರ್ಮ ಉಪಸ್ಥಿತರಿದ್ದರು.

ರಂಗ ಕಲಾವಿದ ಎಂ.ದಕ್ಷಿಣಾಮೂರ್ತಿ ಗೀತ ಗಾಯನ ಪ್ರಸ್ತುತಪಡಿಸಿದರು.

ಪ್ರಶಿಕ್ಷಣಾರ್ಥಿ ಸುಮಿತ್ರಾ ನಿರೂಪಿಸಿದರು.ಸವಿತಾ ಸ್ವಾಗತಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ದತ್ತಿದಾನಿಗಳನ್ನು ಗೌರವಿಸಿ ಸನ್ಮಾನಿಲಾಯಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್