LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಚಾಲಕರು ಸುರಕ್ಷತಾ ನೀಯಮವನ್ನು ಪಾಲಿಸಿ-ಪಿಎಸ್‌ಐ ಖೋತ್


ತಾಳಿಕೋಟೆ, ವಿದ್ಯಾರ್ಥಿಗಳು ಈ ದೇಶದ ಅಮೂಲ್ಯ ರತ್ನಗಳಾಗಿವೆ ಮತ್ತು ದೇಶದ ಮುಂದಿನ ಭವಿಷ್ಯ ರೂಪಿಸುವಂತವರಾಗಿದ್ದಾರೆ ಅವರನ್ನು ಶಾಲಾ ವಾಹನಗಳಲ್ಲಿ ಕರೆದುಕೊಂಡು ಹೋಗುವ ಚಾಲಕರು ಸುರಕ್ಷತೆಯನ್ನು ಕಾಪಾಡಿಕೊಂಡು ಸಾಗಬೇಕೆಂದು ಸ್ಥಳೀಯ ಪೊಲೀಸ್ ಠಾಣಾ ಪಿಎಸ್‌ಐ ಶ್ರೀಮತಿ ಜ್ಯೋತಿ ಖೋತ್ ಅವರು ಹೇಳಿದರು.
       ಗುರುವಾರ ಪಟ್ಟಣದ ಮೈಲೇಶ್ವರ ಕ್ರಾಸ್‌ನಲ್ಲಿರುವ ಬ್ರಿಲಿಯಂಟ್ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಆಗಮಿಸಿದ ಅವರು ವಾಹನಗಳ ಫಿಟ್ನೆಸ್ ಪ್ರಮಾಣ ಪತ್ರ, ವಿಮೆ, ವೇಗ ನಿಯಂತ್ರಕಗಳನ್ನು ಪರಿಶೀಲಿಸಿ, ಎಲ್ಲ ವಾಹನಗಳು  ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಂಡ ನಂತರ ಚಾಲಕರಿಗೆ ತಿಳಿ ಹೇಳಿದ ಅವರು ಶಾಲಾ ವಾಹನದಲ್ಲಿ ವಿದ್ಯಾರ್ಥಿಗಳನ್ನು ಹೆಚ್ಚಿಗೆ ತುಂಬಿಕೊಂಡು ಹೋಗುವಂತಾಗಬಾರದು ಸುರಕ್ಷತೆ ನೀಯಮವನ್ನು ಪಾಲನೆ ಮಾಡಬೇಕು ವಾಹನಗಳು ಸುಸ್ಥಿರದಲ್ಲಿರುವದನ್ನು ಖಚಿತ ಪಡಿಸಿಕೊಂಡು ವಾಹನವನ್ನು ಚಲಾಯಿಸುವಂತಾಗಬೇಕು ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗುವಾಗ ರಸ್ತೆಯ ಮೇಲೆ ವಾಹನಗಳನ್ನು ನಿಲ್ಲಿಸದೇ ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಸಮೀಪದ ಮೈದಾನ ಮತ್ತು ವಾಹನ ದಟ್ಟನೆ ಇಲ್ಲದ ಜಾಗೆಯನ್ನು ಆಯ್ಕೆ ಮಾಡಿಕೊಂಡು ಇಳಿಸುವಂತಹ ಕಾರ್ಯ ಮಾಡಬೇಕೆಂದು ಕಾನೂನು ನೀಯಮ ಪಾಲನೆ ಕುರಿತು ತಿಳುವಳಿಕೆ ನೀಡಿದರು.
     ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ನಾನಾಗೌಡ ನಡುವಿನಮನಿ, ಉಪಾಧ್ಯಕ್ಷ ಆರ್.ಬಿ.ನಡುವಿನಮನಿ, ಕಾರ್ಯದರ್ಶಿ ಎಮ್ ಬಿ ಮಡಿವಾಳರ, ಪೊಲೀಸ್ ಸಿಬ್ಬಂದಿಗಳು ಹಾಗೂ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್