ಬೆಳಗಾವಿ : ಝ್ಯೋಯಿನ್ ಗ್ರೂಪ್ ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್ ಜೊತೆಗೆ ಒಪ್ಪಂದ ಪತ್ರ ಗೆ ಸಹಿ ಹಾಕಿದ್ದು, ರಾಜ್ಯದಲ್ಲಿ ಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆ ಮತ್ತು ವಿಸ್ತರಣೆಗೆ ಬೆಂಬಲ ನೀಡಲು ಮುಂದಾಗಿದೆ. ಈ ಸಹಭಾಗಿತ್ವವು ಪ್ರತಿಭಾ ಕಾರ್ಯತಂತ್ರ ಉದ್ಯಮ ಪರಿಸರ ಹಾಗೂ ನೀತಿ ಬೆಂಬಲದೊಂದಿಗೆ ಸಂಯೋಜಿಸುವ ಮೂಲಕ ಕರ್ನಾಟಕವನ್ನು ಉಅಅ ಗಳಿಗೆ ಆದ್ಯತೆಯ ತಾಣವಾಗಿ ಬಲಪಡಿಸುವ ಉದ್ದೇಶ ಹೊಂದಿದೆ.
ಕರ್ನಾಟಕ ಜಾಗತಿಕ ಡಿಜಿಟಲ್ ಆರ್ಥಿಕತೆಯ ಪ್ರಮುಖ ತಾಣವಾಗಿ ರೂಪಿಸುವಲ್ಲಿ ಏಆಇಒ ಮಹತ್ವದ ಪಾತ್ರವಹಿಸುತ್ತಿದ್ದು, ನವೀನತೆ, ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ನಿರಂತರವಾಗಿ ಉತ್ತೇಜನ ನೀಡುತ್ತಿದೆ. ಇಂತಹ ಉದ್ಯಮ ಸಹಭಾಗಿತ್ವಗಳು ರಾಜ್ಯದ ಉಅಅ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ, ಈ ಕ್ಷೇತ್ರದಲ್ಲಿ ಕರ್ನಾಟಕದ ನಾಯಕತ್ವವನ್ನು ಇನ್ನಷ್ಟು ದೃಢಪಡಿಸುವ ನಿರೀಕ್ಷೆಯಿದೆ.
ಈ ಸಹಭಾಗಿತ್ವದಡಿ, ಝ್ಯೋಯಿನ್ ಗ್ರೂಪ್ ತನ್ನ ಉಅಅ ಸಲಹಾ ಸೇವೆಗಳು, ಟ್ಯಾಲೆಂಟ್ ಇಂಟೆಲಿಜೆನ್ಸ್ ಮತ್ತು ಉದ್ಯೋಗದಾತ ಬ್ರಾಂಡಿಂಗ್ ಕ್ಷೇತ್ರಗಳಲ್ಲಿನ ಪರಿಣತಿಯನ್ನು ಬಳಸಿಕೊಳ್ಳಲಿದ್ದು, ಏಆಇಒ ಉದ್ಯಮ ಸಹಕಾರ, ಪರಿಸರ ಮಟ್ಟದ ಸಂಪರ್ಕ ಮತ್ತು ಜಾಗತಿಕ ಸಂಸ್ಥೆಗಳನ್ನು ಆಕರ್ಷಿಸಲು ಅಗತ್ಯವಾದ ಕಾರ್ಯತಂತ್ರದ ಉಪಕ್ರಮಗಳಿಗೆ ಬೆಂಬಲ ಒದಗಿಸಲಿದೆ.
ಕಳೆದ ಕೆಲವು ವರ್ಷಗಳಲ್ಲಿ, ಭಾರತದಲ್ಲಿ ಉಅಅ ಗಳನ್ನು ಸ್ಥಾಪಿಸಲು ಅಥವಾ ವಿಸ್ತರಿಸಲು ಬಯಸುವ ಬಹುರಾಷ್ಟ್ರೀಯ ಸಂಸ್ಥೆಗಳ ಪ್ರಮುಖ ಆಯ್ಕೆಯಾಗಿ ಕರ್ನಾಟಕ ಹೊರಹೊಮ್ಮಿದೆ. ಕಾರ್ಯತಂತ್ರದ ಪ್ರತಿಭಾ ಸಾಮರ್ಥ್ಯ, ಉದ್ಯಮ ಪರಿಸರದ ಬೆಂಬಲ ಹಾಗೂ ನೀತಿ ಸೌಲಭ್ಯಗಳ ಸಂಯೋಜನೆಯ ಮೂಲಕ ಈ ಸಹಭಾಗಿತ್ವವು ರಾಜ್ಯಕ್ಕೆ ಹೆಚ್ಚಿನ ಮೌಲ್ಯದ ಜಾಗತಿಕ ಹೂಡಿಕೆಗಳನ್ನು ಆಕರ್ಷಿಸುವ ಗುರಿ ಹೊಂದಿದೆ.
ಭಾರತದಲ್ಲಿ ಉಅಅ ಕ್ಷೇತ್ರವು ವೇಗವಾಗಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ, ಆಳವಾದ ಪ್ರತಿಭಾ ಸಂಪನ್ಮೂಲ, ಅಭಿವೃದ್ಧಿ ಹೊಂದಿದ ತಂತ್ರಜ್ಞಾನ ಪರಿಸರ ಹಾಗೂ ಬೆಂಬಲಕಾರಿ ನೀತಿಗಳಿಂದ ಕರ್ನಾಟಕವು ಪ್ರಮುಖ ಕೇಂದ್ರವಾಗಿ ಮುಂದುವರಿದಿದೆ. ಎರಡೂ ಸಂಸ್ಥೆಗಳು ಉಅಅ ಜೀವನಚಕ್ರದ ವಿವಿಧ ಹಂತಗಳಲ್ಲಿ ? ಮಾರುಕಟ್ಟೆ ಪ್ರವೇಶ, ಕಾರ್ಯಾಚರಣಾ ಸ್ಥಾಪನೆ ಮತ್ತು ವಿಸ್ತರಣೆ ಸೇರಿದಂತೆ ? ಸಂಸ್ಥೆಗಳಿಗೆ ಬೆಂಬಲ ನೀಡಲು ಒಟ್ಟಾಗಿ ಕಾರ್ಯನಿರ್ವಹಿಸಲಿವೆ.
ಈ ಒಪ್ಪಂದವು ಸ್ಟಾರ್ಟ್‌ಅಪ್ ಹಾಗೂ ನವೀನತಾ ಸಹಭಾಗಿತ್ವಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಉದ್ಯೋಗ ಮತ್ತು ನಾಯಕತ್ವದ ಅವಕಾಶಗಳನ್ನು ಸೃಷ್ಟಿಸಿ, ಸಹಯೋಗಾತ್ಮಕ ಉಅಅ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿದೆ. ಅನುಜ್ ಅಗರವಾಲ್, ಸ್ಥಾಪಕ ಮತ್ತು ಸಿಇಒ, ಝ್ಯೋಯಿನ್ ಗ್ರೂಪ್ ಹಾಗೂ ವರ್ಕ್‌ಪ್ಲೇಸ್ ಅವಾರ್ಡ್ಸ್, ಹೇಳಿದರು:
"ಕರ್ನಾಟಕವು ಭಾರತದ ಉಅಅ ಪರಿವರ್ತನೆಯ ಪಯಣದಲ್ಲಿ ಮುಂಚೂಣಿಯಲ್ಲಿದ್ದು, ಏಆಇಒ ಜೊತೆಗೆ ನಮ್ಮ ಈ ಸಹಭಾಗಿತ್ವವು ರಾಜ್ಯದ ಜಾಗತಿಕ ಡಿಜಿಟಲ್ ಮತ್ತು ಎಂಟರ್‌ಪ್ರೈಸ್ ಕೇಂದ್ರವಾಗಿ ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ. ಉಅಅ ಗಳ ಸ್ಥಾಪನೆ, ವಿಸ್ತರಣೆ ಹಾಗೂ ದೀರ್ಘಕಾಲೀನ ಸಾಮರ್ಥ್ಯ ನಿರ್ಮಾಣದ ಪ್ರತಿಯೊಂದು ಹಂತದಲ್ಲೂ ಸಂಸ್ಥೆಗಳಿಗೆ ಬೆಂಬಲ ನೀಡಲು ನಾವು ಉತ್ಸುಕರಾಗಿದ್ದೇವೆ."
ಸಂಜೀವ್ ಕುಮಾರ್ ಗುಪ್ತ,
