LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

*ಪರಿಸರ ಮತ್ತು ಮಾನವನ ಜೀವನ; ಒಂದು ಅವಿನಾಭಾವ ಸಂಬAಧ- ನ್ಯಾ. ಸಿದ್ದಲಿಂಗಪ್ರಭು ಅಭಿಮತ*

ಬಳ್ಳಾರಿ,ಜೂ.06
ಮಾನವನ ಉತ್ತಮ ಆರೋಗ್ಯಕ್ಕೆ ಶುದ್ಧವಾದ ಗಾಳಿ, ನೀರು ಮತ್ತು ಉತ್ತಮ ಆಹಾರ ಅತ್ಯಂತ ಪ್ರಮುಖವಾದ ಅಗತ್ಯಗಳಾಗಿದ್ದು, ಇವೆಲ್ಲವೂ ನಮಗೆ ಪ್ರಕೃತಿಯಿಂದಲೇ ದೊರೆಯುತ್ತಿವೆ. ಹಾಗಾಗಿ ನಮ್ಮ ದೈನಂದಿನ ಜೀವನ ಕ್ರಮಕ್ಕೂ ಮತ್ತು ಪರಿಸರಕ್ಕೂ ಒಂದು ಅವಿನಾಭಾವ ಸಂಬAಧವಿದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಸಿದ್ದಲಿಂಗಪ್ರಭು ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಳ್ಳಾರಿ ಪ್ರಾದೇಶಿಕ ಕಚೇರಿ ಇವರ ಸಂಯುಕ್ತಾಶ್ರಯದಲ್ಲಿ ‘ಪ್ರಕೃತಿಯಿಂದ ಪ್ರೇರಿತ-ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ’ ಎಂಬ ಘೋಷವಾಕ್ಯದೊಂದಿಗೆ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮAದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರದಿಂದ ಪ್ರೇರಣೆಗೊಂಡು, ನಮ್ಮ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಮತ್ತು ಅತ್ಯುತ್ತಮ ಹವಾಮಾನಕ್ಕಾಗಿ ನಾವು ಪಣತೊಡಬೇಕು. ಕೇವಲ ಪಣತೊಡುವುದಷ್ಟೇ ಅಲ್ಲದೆ, ಆ ನಿಟ್ಟಿನಲ್ಲಿ ನಾವೆಲ್ಲರೂ ದೈನಂದಿನ ಜೀವನದಲ್ಲಿ ಶ್ರಮಿಸಬೇಕಾಗಿದೆ. ಒಬ್ಬ ಮನುಷ್ಯನಿಗೆ ಉತ್ತಮ ಗಾಳಿ ಮತ್ತು ಆಮ್ಲಜನಕ ಸಿಗಬೇಕಾದರೆ ಕನಿಷ್ಠ 7 ಮರಗಳ ಅವಶ್ಯಕತೆ ಇರುತ್ತದೆ. ಆದರೆ ಪ್ರಸ್ತುತ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಅಷ್ಟು ಪ್ರಮಾಣದಲ್ಲಿ ಮರ-ಗಿಡಗಳು ಇಲ್ಲದಿರುವುದು ಆತಂಕಕಾರಿ ವಿಚಾರ ಎಂದು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಮಾತನಾಡಿ, ಮಾನವನ ಅಸ್ತಿತ್ವಕ್ಕೆ ಪರಿಸರ ಅತ್ಯಂತ ಅತ್ಯಗತ್ಯವಾಗಿದ್ದು, ಪ್ರಕೃತಿಯನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಪರಿಸರ ಮಾಲಿನ್ಯದ ಭೀತಿ ಹೆಚ್ಚಾಗುತ್ತಿದ್ದು, ನಾವೆಲ್ಲರೂ ಜಾಗೃತರಾಗಬೇಕಾದ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಪರಿಸರಕ್ಕೆ ಮಾನವನ ಅಗತ್ಯವಿಲ್ಲ, ಆದರೆ ಮಾನವನಿಗೆ ಪರಿಸರದ ಅಗತ್ಯ ಖಂಡಿತ ಇದೆ. ಪ್ರಕೃತಿ ತಾನಾಗಿಯೇ ಚೇತರಿಸಿಕೊಳ್ಳುವ ಶಕ್ತಿಯನ್ನು ಹೊಂದಿದೆ. ನಾವು ಪರಿಸರವನ್ನು ಚೆನ್ನಾಗಿಟ್ಟುಕೊಂಡು, ಇಂಗಾಲದ ಡೈ ಆಕ್ಸೆöÊಡ್ ಪ್ರಮಾಣವನ್ನು ನಿಯಂತ್ರಿಸಿದರೆ ಮಾತ್ರ ಮಾನವ ಸಂಕುಲ ಉಳಿಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
  ಭೂಮಿಯ ಮೇಲಿರುವ ಕ್ರಿಮಿ-ಕೀಟಗಳು ನಾಶವಾದರೆ ಕೇವಲ ಮೂರೇ ವರ್ಷಗಳಲ್ಲಿ ಇಡೀ ಮನುಕುಲ ನಾಶವಾಗುತ್ತದೆ. ಅದೇ ರೀತಿ ವನ್ಯಜೀವಿಗಳು ಮತ್ತು ಅರಣ್ಯ ನಾಶವಾದರೆ 100 ವರ್ಷಗಳಲ್ಲಿ ಭೂಮಿ ವಿನಾಶದ ಅಂಚು ತಲುಪುತ್ತದೆ. ಆದರೆ ಮನುಕುಲವೇ ಇಲ್ಲದಿದ್ದರೆ ಭೂಮಿ ಮತ್ತಷ್ಟು ಸಂಪದ್ಭರಿತವಾಗಿ ಕಂಗೊಳಿಸುತ್ತದೆ ಎಂದು ಎಚ್ಚರಿಸಿದರು.
ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜ ಕೆ.ಎನ್ ಅವರು ಮಾತನಾಡಿ, ಮನುಷ್ಯ ಮತ್ತು ವೃಕ್ಷಗಳ ನಡುವೆ ಪ್ರಕೃತಿಯೇ ರೂಪಿಸಿರುವ ಅದ್ಭುತ ಸಂಬAಧವಿದೆ. ಮನುಷ್ಯರು ಆಮ್ಲಜನಕವನ್ನು ಪಡೆದು ಇಂಗಾಲದ ಡೈ ಆಕ್ಸೆöÊಡ್ ಹೊರಬಿಟ್ಟರೆ, ಮರಗಳು ಆ ಇಂಗಾಲದ ಡೈ ಆಕ್ಸೆöÊಡ್ ಪಡೆದು ನಮಗೆ ಆಮ್ಲಜನಕವನ್ನು ನೀಡುತ್ತವೆ. ಮನುಷ್ಯನ ಉಸಿರಾಟ ಪ್ರಕ್ರಿಯೆಯನ್ನು ನಡೆಸುವ ಶ್ವಾಸಕೋಶಗಳ ಚಿತ್ರವನ್ನು ಸೂಕ್ಷö್ಮವಾಗಿ ಗಮನಿಸಿದರೆ, ಅದು ತಲೆಕೆಳಗಾಗಿ ನಿಂತಿರುವ ಒಂದು ಮರದ ಆಕಾರದಲ್ಲೇ ಕಾಣಿಸುತ್ತದೆ. ಇದು ಪ್ರಕೃತಿ ನಮಗೆ ನೀಡಿರುವ ಸಾಂಕೇತಿಕ ಸಂದೇಶವಾಗಿದೆ ಎಂದು ಹೇಳಿದರು.
ಹಿಂದೆ ಕಾಡುಗಳಲ್ಲಿ ಅಥವಾ ಗ್ರಾಮೀಣ ಭಾಗಗಳಲ್ಲಿ ಪ್ರಾಣಿಗಳು ಸತ್ತಾಗ, ಆಕಾಶದಲ್ಲಿ ಹಾರಾಡುವ ರಣಹದ್ದುಗಳನ್ನು ನೋಡಿ ಪ್ರಾಣಿ ಸತ್ತಿರುವುದು ತಿಳಿಯುತ್ತಿತ್ತು. ಅವು ಯಾವುದೇ ಕೂಲಿ ಪಡೆಯದೇ ಪರಿಸರವನ್ನು ಸ್ವಚ್ಛಗೊಳಿಸುವ ಉಚಿತ ಕಾವಲುಗಾರರಾಗಿದ್ದವು. ಆದರೆ ಕಳೆದ ಮೂರು ದಶಕಗಳಲ್ಲಿ ರಣಹದ್ದುಗಳ ಸಂತತಿ ಶೇ.90 ರಿಂದ 95 ರಷ್ಟು ಕ್ಷೀಣಿಸಿದೆ. ಇದಕ್ಕೆ ಮುಖ್ಯ ಕಾರಣ ಸಾಕುಪ್ರಾಣಿಗಳ ಚಿಕಿತ್ಸೆಗೆ ಬಳಸುತ್ತಿದ್ದ ‘ಡೈಕ್ಲೋಫೆನಾಕ್' ಎಂಬ ನೋವು ನಿವಾರಕ ಔಷಧಿ. ಈ ಔಷಧೋಪಚಾರ ಪಡೆದ ಜಾನುವಾರುಗಳು ಸತ್ತಾಗ, ಅವುಗಳ ಮಾಂಸ ತಿಂದ ರಣಹದ್ದುಗಳ ಕಿಡ್ನಿ ವೈಫಲ್ಯಗೊಂಡು ಅವು ಸಾವನ್ನಪ್ಪಿದವು. ರಣಹದ್ದುಗಳು ಇಲ್ಲದ ಜಾಗವನ್ನು ಬೀದಿ ನಾಯಿಗಳು ಆಕ್ರಮಿಸಿಕೊಂಡವು. ಯಥೇಚ್ಛವಾಗಿ ಆಹಾರ ಸಿಕ್ಕಿದ್ದರಿಂದ ನಾಯಿಗಳ ಸಂತತಿ ತೀವ್ರವಾಗಿ ಹೆಚ್ಚಳವಾಯಿತು. ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದರಿಂದ ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೂಡ ನಾಯಿಗಳ ಜನಸಂಖ್ಯೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕಾಗಿ ಬಂತು. ನಾಯಿಗಳ ಹೆಚ್ಚಳದಿಂದ ‘ರೇಬಿಸ್' ಹರಡುವಿಕೆ ಹೆಚ್ಚಾಯಿತು. ರೇಬಿಸ್‌ಗೆ ಚಿಕಿತ್ಸೆ ಇಲ್ಲದ ಕಾರಣ ಕೇವಲ ಲಸಿಕೆಗಳಿಗಾಗಿ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಆರೋಗ್ಯ ವಲಯದಲ್ಲಿ ಕೋಟ್ಯಂತರ ರೂಪಾಯಿ ಹೆಚ್ಚುವರಿ ವೆಚ್ಚವಾಗುತ್ತಿದೆ. ಒಂದು ರಣಹದ್ದು ಉಚಿತವಾಗಿ ಮಾಡುತ್ತಿದ್ದ ಪರಿಸರ ಸ್ವಚ್ಛತೆಯ ಕೆಲಸ ನಿಂತುಹೋಗಿದ್ದರಿAದ ಇಂದು ಮಾನವ ಇಷ್ಟೊಂದು ದೊಡ್ಡ ಬೆಲೆ ತೆರಬೇಕಾಗಿ ಬಂದಿದೆ. ಪ್ರಕೃತಿಯಿಂದ ಯಾವುದೇ ಒಂದು ಜೀವಿ ಅಳಿದರೂ ಅದರ ತೀವ್ರತೆ ಮನುಷ್ಯನಿಗೆ ತಡವಾಗಿ ಅರ್ಥವಾಗುತ್ತದೆ ಎಂದರು.
ಕಳೆದ ವಾರದಲ್ಲಿ ಬಳ್ಳಾರಿಯಲ್ಲಿ ಬಿದ್ದ ಕೇವಲ ಎರಡು ಮಳೆಗಳಿಂದ ಇಡೀ ಜಿಲ್ಲೆಯ ತಾಪಮಾನ ತಕ್ಷಣವೇ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಯಿತು. ಮನುಷ್ಯರು ಇಷ್ಟೇ ಪ್ರಮಾಣದ ತಾಪಮಾನ ಕಡಿಮೆ ಮಾಡಬೇಕಾದರೆ ಸಾವಿರಾರು ಎಸಿ, ಕೂಲರ್ ಹಾಗೂ ಫ್ಯಾನ್‌ಗಳನ್ನು ದಿನಗಟ್ಟಲೆ ಓಡಿಸಬೇಕಾಗುತ್ತಿತ್ತು. ಆದರೆ ಪ್ರಕೃತಿ ಇದನ್ನು ಕ್ಷಣಮಾತ್ರದಲ್ಲಿ ಉಚಿತವಾಗಿ ಮಾಡಿತೋರಿಸಿತು. ನಾವು ಕೃತಕವಾಗಿ ಸೃಷ್ಟಿಸುವ ಪರಿಸರ ಎಂದಿಗೂ ನೈಸರ್ಗಿಕ ಪರಿಸರಕ್ಕೆ ಸಮನಾಗಲಾರದು ಎಂದು ಅಭಿಪ್ರಾಯಪಟ್ಟರು.
ಪರಿಸರ ದಿನಾಚರಣೆ ಎಂದರೆ ಕೇವಲ ಗಿಡ ನಡುವುದು ಮಾತ್ರವಲ್ಲ, ನಮ್ಮ ದೈನಂದಿನ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದಾಗಿದೆ. ಅದಕ್ಕಾಗಿ 3ಆರ್ ಸೂತ್ರ ಪಾಲಿಸಬೇಕಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಗಣನೀಯವಾಗಿ ಕಡಿಮೆ (ರೆಡ್ಯೂಸ್) ಮಾಡುವುದು. ವಸ್ತುಗಳನ್ನು ಎಸೆಯದೇ ಮರುಬಳಕೆ(ರೀಯೂಸ್) ಮಾಡುವುದು. ಅವಶ್ಯಕತೆ ಇಲ್ಲದ ಕಡೆ ಪ್ಲಾಸ್ಟಿಕ್ ಬಳಸುವುದಿಲ್ಲ (ರೀಫ್ಯೂಸ್) ಎಂದು ತಿರಸ್ಕಾರ ಮಾಡುವುದು ಎಂದು ತಿಳಸಿದರು.
ವಿ.ಶ್ರೀ.ಕೃ. ವಿಶ್ವವಿದ್ಯಾಲಯದ ಪ್ರಾಣಿಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕ ನಾಗಭೂಷಣ ವಿ.ಚರಂತಿಮಠ ಹಾಗೂ ವೀರಶೈವ ಕಾಲೇಜಿನ ಮಾಜಿ ಪ್ರಾಂಶುಪಾಲರು ಹಾಗೂ ಪ್ರಾಣಿಶಾಸ್ತç ವಿಭಾಗದ ಮುಖ್ಯಸ್ಥ ಜಿ.ಮನೋಹರ ಅವರು ಪರಿಸರ ರಕ್ಷಣೆ, ಬೆಳೆಸುವಿಕೆ ಅಂಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಡಾ.ಜೋಳದರಾಶಿ ದೊಡ್ಡನಗೌಡ ರಂಗಮAದಿರದ ಆವರಣದಲ್ಲಿ ಗಣ್ಯರು ಸಸಿಗಳನ್ನು ನೆಟ್ಟು ನಿರೂಣಿಸಿದರು. 
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಸರ್ಕಾರಿ, ಖಾಸಗಿ, ಅನುದಾನಿತ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕಾಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜೆ.ಎಂ.ತಿಪ್ಪೇಸ್ವಾಮಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಜಯನಗರ ವಿಭಾಗೀಯ ಕಚೇರಿಯ ಹಿರಿಯ ಪರಿಸರ ಅಧಿಕಾರಿ ಬಿ.ಎಸ್.ಮುರಳೀಧರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಳ್ಳಾರಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಟಿ.ಎಂ. ಸಿದ್ದೇಶ್ವರ ಬಾಬು ಸೇರಿದಂತೆ ಸ್ಕೌಟ್ ಮತ್ತು ಗೈಡ್ಸ್ ನ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್