ರನ್ನ ಬೆಳಗಲಿ, ಜು.೨೮ : ಮುಧೋಳ ತಾಲೂಕಾ ಮುಗಳಕೋಡ ಗ್ರಾಮದ ವಿಶ್ವ ಜನನಿ ಜ್ಞಾನವಿಕಾಸ ಕೇಂದ್ರದಲ್ಲಿ ಬೀದಿ ನಾಟಕ ಕಾರ್ಯಕ್ರಮವು ಸೋಮವಾರ ದಂದು ಜರುಗಿತು.
ಗ್ರಾಮ ಪಂಚಾಯತಿ ಕಾರ್ಯದರ್ಶಿ ಮಹಾದೇವ ಜೋಶಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಗ್ರಾಮ ಪಂಚಾಯಿತಿಯಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿದರು.
ಪೂಜ್ಯಾರಾದ ಬಸವರಾಜ ಲಕ್ಷ್ಮೇಶ್ವರ ಶಾಸ್ತ್ರಿ ಮಾತನಾಡಿ ನಮ್ಮ ಆರೋಗ್ಯ ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿದೆ.ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಸರ್ಕಾರ ಮಾಡದೇ ಇರುವ ಕೆಲಸಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯವರು ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ ಎಂದು ತಿಳಿಸಿದರು.
ಜೋಡಿ ಬಸವೇಶ್ವರ ಕಲಾತಂಡದವರು ಹಿತಮಿತ ನೀರು ಬಳಕೆ,ಶೌಚಾಲಯ ಬಳಕೆ,ಪರಿಸರ ರಕ್ಷಣೆ, ಬಾಲ್ಯ ವಿವಾಹ ತಡೆ, ಮೊಬೈಲ್ ಬಳಕೆಯ ದುಷ್ಪರಿಣಾಮ,ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ವಿಷಯಗಳ ಕುರಿತು ನಾಟಕದ ಮೂಲಕ ಪ್ರದರ್ಶನ ಮಾಡಿದರು.
ಗುರುಬಸವ ಶಿವಪುರ, ದುರ್ಗಾದೇವಿ ಗುಡಿಯ ಅರ್ಚಕರಾದ ಕಲ್ಲಪ್ಪ ಮೈತ್ರಿ, ಜ್ಞಾನ ವಿಕಾಸದ ಸಮನ್ವಯಧಿಕಾರಿ ಸುವರ್ಣಾ ನಂದಿಕೋಲಮಠ, ಒಕ್ಕೂಟದ ಪದಾಧಿಕಾರಿ ಸಕ್ಕೂಬಾಯಿ ಮೈತ್ರಿ,ಸೇವಾ ಪ್ರತಿನಿಧಿ ಶ್ಯಾಮಲ ಲಕ್ಷ್ಮೇಶ್ವರ ಹಾಗೂ ಕೇಂದ್ರದ ಸದಸ್ಯರು ಊರಿನ ಜನರು ಉಪಸ್ಥಿತರಿದ್ದರು.