LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಪ್ರತಿ ಕವಿಯ ಕವಿತೆಗೆ ಒಂದು ಮೌಲ್ಯವಿದೆ : ಸುಮಾ ಕಿತ್ತೂರ

ಬೆಳಗಾವಿ-೨೦-ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಆಯೋಜಿಸಿದ್ದ ದತ್ತಿನಿಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಮಾ ಕಿತ್ತೂರ ಅವರು ಮಾತನಾಡುತ್ತ ಪ್ರತಿ ಕವಿಯ ಕವಿತೆಗೆ ಒಂದು ಮೌಲ್ಯವಿದೆ. ಅದನ್ನು ಆಸಕ್ತಿಯಿಂದ ಕೇಳುವ ಹಾಗೂ ಅದಕ್ಕೆ ಸ್ಪಂದಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಕವನ ರಚನೆ ಎನ್ನುವುದು ಮರುಸೃಷ್ಟಿಯಂತೆ ಬದುಕಿಗೆ ಹೊಸ ಮಾರ್ಗಸೂಚಿ ಆಗಬಲ್ಲದು. ಹಿರಿಯರ ಬದುಕೆನ್ನುವುದೆ ಒಂದು ತೆರೆದ ಪುಸ್ತಕದ ಬರಹದಂತೆ ಅದನ್ನು ಗಂಭೀರವಾಗಿ ಓದಿ ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗಲೆ ಬದುಕು ಹಾಗೂ ಬರಹ ಸಾರ್ಥಕಗೊಳ್ಳುವುದು ಎಂದು ಹೇಳಿದರು. ಈ ಕಾರ್ಯಕ್ರಮವನ್ನು ದತ್ತಿ ದಾನಿಗಳಾದ ಕಸಾಪ ಜಿಲ್ಲಾಧ್ಯಕ್ಷರಾದ ಮಂಗಲಾ ಮೆಟಗುಡ್ಡ ಅವರ ಬೈಲಹೊಂಗಲದ ಸ್ವಗೃಹದಲ್ಲಿ ಆಯೋಜಿಸಲಾಗಿತ್ತು. ದಿ:ರೇವಣಸಿದ್ದಪ್ಪ ಲಂಬಿ ಹಾಗೂ ದಿ.ಮೀನಾಕ್ಷಿ ಲಂಬಿ ದತ್ತಿ, ಶ್ರೀಮತಿ.ಸುಮಿತ್ರಾ ಪ್ರಭುಲಿಂಗಯ್ಯ ಚರಂತಿಮಠ ದತ್ತಿ, ಶ್ರೀಮತಿ ಸುನಂದಾ ಮುಳೆ ದತ್ತಿ ಇವರ ಸ್ಮರಣಾರ್ಥ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಉಪಸ್ಥಿತ ದಾನಿಗಳಾದ ಶ್ರೀಮತಿ.ಮಂಗಲಾ ಮೆಟಗುಡ್ಡ ಜಿಲ್ಲಾಧ್ಯಕ್ಷರು ಕಸಾಪ ಬೆಳಗಾವಿ ಜಿಲ್ಲೆ, ಡಾ.ಭಾರತಿ ಮಠದ ಹಿರಿಯ ಸಾಹಿತಿಗಳು, ಶ್ರೀಮತಿ.ಸುನಂದಾ ಮುಳೆ ಹಿರಿಯ ಸಾಹಿತಿಗಳು ಇವರು ಕೂಡಾ ತಮ್ಮ ದತ್ತಿ ದಾನದ ಉದ್ದೇಶ ತಿಳಿಸಿ ಮಾತನಾಡಿದರು. ಮಂಗಲಾ ಮೆಟಗುಡ್ಡ ಅವರು ತಮ್ಮ ತಂದೆ ತಾಯಿಯವರ ಸಾತ್ವಿಕ ಬದುಕು ಅವರು ಮಾಡಿದ ಸಹಾಯ ಸಮಾಜಸೇವೆ ದೈವಭಕ್ತಿಯ ಕುರಿತು ಮಾತನಾಡುತ್ತಾ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.



ಇನ್ನೀರ್ವರು ದಾನಿಗಳಾದ ಡಾ.ಭಾರತಿ ಮಠದ ಹಾಗೂ ಸುನಂದಾ ಮುಳೆ ಅವರು ಮಾತನಾಡಿ ಕರ್ತವ್ಯ ಪ್ರಜ್ಞೆಯಿಂದ ಬದುಕಿದರೆ ಬದುಕು ಸಾರ್ಥಕವಾಗುವುದು ಎಲ್ಲರು ತಮ್ಮ ತಾಯಿಯನ್ನು ಸ್ಮರಿಸುವುದು ಒಂದು ಉತ್ಸವದಂತೆ ಸಂತೋಷ ಕೊಡುತ್ತದೆ. ದತ್ತಿದಾನಿಗಳು ಹೆಚ್ಚಾದಂತೆ ಸಂಘ ಆರ್ಥಿಕ ಭದ್ರತೆಯು ಹೆಚ್ಚುತ್ತದೆ ಎಂದು ತಿಳಿಸಿದರು. ಇದೆ ಸಂದರ್ಭದಲ್ಲಿ ಮಹಿಳಾ ಒಕ್ಕೂಟದ ವತಿಯಿಂದ ಶ್ರೀಮತಿ.ಮಂಗಲಾ ಮೆಟಗುಡ್ಡ ಅವರಿಗೆ ಧಾರಿಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕ ನಾಗರಿಕರ ಕ್ಷೇಮಾಭಿವೃದ್ಧಿ ಸಂಘವು ಸಹಯೋಗ ನೀಡಿತ್ತು. ಜಿಲ್ಲಾ ಲೇಖಕಿಯರ ಸಂಘದ ೩೦ ಕವಿಯಿತ್ರಿಯರು ತಮ್ಮ ಸ್ವರಚಿತ ಕವನ ವಾಚನ ಮಾಡಿದರು. ಸಹಭೋಜನದೊಂದಿಗೆ ಸುಂದರ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸಾಹಿತಿಗಳಾದ ಶ್ರೀಮತಿ ನೀಲಗಂಗಾ ಚರಂತಿಮಠ, ಪ್ರೇಮಾ ಅಂಗಡಿ, ಶ್ವೇತಾ ನರಗುಂದ, ಸುನಂದಾ ಎಮ್ಮಿ, ವಾಸಂತಿ ಮೇಳೆದ, ಶೈಲಜಾ ಬಿಂಗೆ, ಜ್ಯೋತಿ ಬದಾಮಿ, ವಿದ್ಯಾ ಹುಂಡೇಕರ, ಲಲಿತಾ ಪರ್ವತರಾವ, ಕಸಾಪ ಕಾರ್ಯದರ್ಶಿ ಎಮ್.ವೈ.ಮೆಣಸಿನಕಾಯಿ, ವಿ.ಎಮ್.ಅಂಗಡಿ, ಕಸಾಪ ತಾಲೂಕು ಅಧ್ಯಕ್ಷರಾದ ಸುರೇಶ ಹಂಜಿ, ಕವಿ ಬಸಪ್ಪ ಶೀಗಿಹಳ್ಳಿ, ಅನ್ನಪೂರ್ಣ ಹಿರೇಮಠ ಮುಂತಾದವರಿದ್ದರು. ಲೇಖಕಿ ಗೌರಿ ಕರ್ಕಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಆಶಾ ಯಮಕನಮರಡಿ ಪ್ರಾಸ್ತಾವಿಕ ಮಾತನಾಡಿ, ಕವಿಗೋಷ್ಠಿ ಯಮುನಾ ಪ್ರಾರ್ಥನೆ ಸಲ್ಲಿಸಿದರು. ದಾನಮ್ಮ ಈಟಿ ನಿರೂಪಣೆ ಮಾಡಿದರು.
ದಿ:೨೦/೦೧/೨೦೨೬

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್