LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

"ಜಗತ್ತಿನಲ್ಲಿ ಪ್ರತಿಯೊಂದು ವಸ್ತುವು ಧರ್ಮವನ್ನು ಆಶ್ರಯಿಸಿದೆ"


ಇಂಡಿ,ಜು,೧೧  : ಈ ಜಗತ್ತಿನಲ್ಲಿ ಪ್ರತಿಯೊಂದು ವಸ್ತುವು ಧರ್ಮವನ್ನು ಆಶ್ರಯಿಸಿದೆ. ಆದರಿಸಿದೆ.ನಮ್ಮ ಕಣ್ಣಿನ ಕಾಣುವ ವಿಶಾಲವಾದ  ವಿಶ್ವವಾಗಲಿ ಅದರ ಸೌಂದರ್ಯವಾಗಲಿ ಎಲ್ಲವೂ ಧರ್ಮದ ಮೇಲೆ ನಿಂತಿದೆ. ಒಂದು ಸುಂದರ ಹೂ ಅರಳುತ್ತದೆ. ಸುವಾಸ ಹರಡುತ್ತದೆ. ಒಂದು ದೀಪ ಉರಿಯುತ್ತದೆ. ಸುತ್ತಮುತ್ತೆಲ್ಲ ಬೆಳಕು ಚಲ್ಲುತ್ತದೆ. ಅರಳುವದು ಹೂವಿನ ಧರ್ಮ,ಬೆಳಗುವದು ದೀಪದ ಧರ್ಮ ಎಂದು ಸಂಸ್ಥಾನ ಗವಿಮಠ ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.
ತಾಲೂಕಿನ ಬೊಳೆಗಾಂವ ಗ್ರಾಮದಲ್ಲಿ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರ ನೂತನ ದೇವಸ್ಥಾನದ ಲೋಕಾರ್ಪಣೆ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಳಸಾಹರೋಹಣ  ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಣ್ಣು ಸ್ಟೀಲ ಬೆಳ್ಳಿ ಬಂಗಾರ ಪಾತ್ರೆಯಲ್ಲಿ  ರೋಟ್ಟಿ ಬಡಸಿದರೆ ರೊಟ್ಟಿ ಒಂದೇ ಎಂಬ ಭಾವವಿರಬೇಕು.ಬೆಳ್ಳಿ ಬಂಗಾರ ಕಡೆಗೆ ಲಕ್ಷ್ಯ ಇರಬಾರದು, ದೇವರು ಕೊಟ್ಟಿದ್ದು ಲಕ್ಷ ಇರಬೇಕು,ನಮ್ಮ ನೋಡುವ ದೃಷ್ಠಿಕೋನ ಬದಲಾಗಬೇಕು ಎಂದರು.
ಮೆಚ್ಚಿಗೆಯ ಮಾತು ಚುಚ್ಚು ಮಾತು, ನೋವು ನಲಿವು, ಕಷ್ಟ ಸುಖ,ಸೋಲು ಗೆಲವು ಬಡತನ ಶ್ರೀಮಂತಿಕೆ ಲಾಭ ಹಾನಿ ಮಧ್ಯೆ ಬದುಕಲು ಕಲಿಯಬೇಕು.ಕೆಲಸ ಮಾಡುವದು ಕಲಿಯಬೇಕು ಎಂದರು. ಆಕಾಸಕ್ಕೆ ಕಂಬಗಳಿಲ್ಲ,ತಾಯಿಯ ಹಾಲು ಅಮೃತಕ್ಕೆ ಸಮಾನ, ದೇಹಕ್ಕೆ ಒಂಬತ್ತು ರಂಧ್ರಗಳಿವೆ ಇವೆಲ್ಲ ದೇವರ ಕೊಟ್ಟ ಕೊಡುಗೆ.
ಪತ್ರಿ ಬಲ್ವಾರ್ಚನೆ ಗಿಡದಿಂದ ಬರುತ್ತವೆ,ಅನ್ನ ನೀರು ಭೂಮಿಯಿಂದ ಪಡೆಯುತ್ತೇವೆ, ಇದರಲ್ಲಿ ನಮ್ಮದೇನು ಇಲ್ಲ,ಅಭಿಷೇಕ ಮಾಡಿ ಸಂಪತ್ತು ಬೆಳ್ಳಿ ಬಂಗಾರ ವಸ್ತು ಮಕ್ಕಳು ವಡವೆ ಬೇಡುವ ಬದಲಾಗಿ ದೇವರು ಕೊಟ್ಟಿದ್ದಕ್ಕೆ ಧನ್ಯತಾ ಭಾವ ಇರಬೇಕು ಎಂದರು.
ಸಾಲೋಟಗಿ ಶ್ರೀ ಸಿದ್ದೇಶ್ವರ ಆಶ್ರಮದ ಸಂಗಮೇಶ್ವರ ಶ್ರೀಗಳು ಮಾತನಾಡಿ ಹೂಗಳಲ್ಲಿ ಹತ್ತಿ ಹೂ ಶ್ರೇಷ್ಠ, ತಾಯಿಯ ಹಾಲು ಶ್ರೇಷ್ಠ, ಚುಕ್ಕೆಗಳಲ್ಲಿ ಬೆಳ್ಳಿ ಚುಕ್ಕೆ ಶ್ರೇಷ್ಠ , ಹಾಗೆಯೇ ಪ್ರಾಣಿಗಳಲ್ಲಿ ಮಾನವ ಜನ್ಮ ಶ್ರೇಷ್ಠ  ಅದರ ಸದುಪಯೋಗ ಪಡೆಯಬೇಕು ಎಂದರು.
ಶಿರಶ್ಯಾಡದ ಅಭಿನವ ಮುರಗೇಂದ್ರ ಶ್ರೀಗಳು ಮಾತನಾಡಿ ಈ ಜಗತ್ತಿನಲ್ಲಿ ಬಾಳಿ ಬದುಕಿದವರು ಋಷಿಮುನಿಗಳು ತತ್ವಜ್ಞಾನಿಗಳು ದಾರ್ಶನಿಕರು ದಾಸರು ಸಂತರು ಶರಣರು ಮಹಾಂತರು ಕಣ್ಣಿಗೆ ಕಾಣುವ ಈ ವಿಶಾಲವಾದ ವಿಶ್ವವು ದೇವನ ಅಭಿವ್ಯಕ್ತ ರೂಪವೆಂದರು.
 ಈರಣ್ಣ ಹುಣಸಗಿ, ಆನಂದ ಹುಣಸಗಿ, ಆನಂದ ಮೋರೆ, ಪ್ರಶಾಂತ ತಳವಾರ ಪ್ರಭು ಹ್ಯಾಳದ ಮಾತನಾಡಿದರು.
ವೇದಿಕೆಯ ಮೇಲೆ ವೀರಭದ್ರೇಶ್ವರ ದೇವಸ್ಥನ ಸಮಿತಿ ಅಧ್ಯಕ್ಷ ಆನಂದಪ್ಪ ಹುಣಸಗಿ, ಬಸವಂತರಾಯಗೌಡ ಪಾಟೀಲ, ಶ್ರೀಮಂತ ಇಂಡಿ, ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಡಾ|| ಸುಶೀಲಕುಮಾರ ಹೂನಸಗಿ, ಬಾಬು ಸಾವಕಾರ ಮೇತ್ರಿ ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್