LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಪ್ರತಿಯೊಬ್ಬರೂ ಒಂದು ಸಸಿ ನೆಟ್ಟು ಪೊಸಿಸಿ :ನ್ಯಾಯಾದೀಶ ಚವ್ಹಾಣ 

 

ಬೈಲಹೊಂಗಲ.ದೇಶದ ವಾಸಿಯಾದ ಪ್ರತಿಯೊಬ್ಬರು  ಒಂದೊಂದು ಸಸಿ ನೆಟ್ಟು ಮನೆಯ ಮಕ್ಕಳ ಹಾಗೆ ಪೊಸಿಸಿ ಬೆಳೆಸಿದರೆ ನಮ್ಮ ದೇಶದ ಪರಿಸರ ಉತ್ತಮವಾಗಿ ಬೆಳೆದು ಮಾನವನ ಅರೋಗ್ಯ ಉತ್ತಮವಾಗಿರಲು ಸಹಕಾರಿ ಆಗುತ್ತದೆ ಎಂದು ಬೈಲಹೊಂಗಲ ಸಿವಿಲ್ ನ್ಯಾಯಾದೀಶರಾದ ರವಿ  ಬಿ ಚವ್ಹಾಣ ಹೇಳಿದರು.
     ಅವರು ನಗರದ ಕೋರ್ಟ್ ಆವರಣದಲ್ಲಿ ಶುಕ್ರವಾರದಂದು ಬೈಲಹೊಂಗಲ ಕಾನೂನು ಸೇವಾ ಸಮಿತಿ, ಬೈಲಹೊಂಗಲ ವಕೀಲರ ಸಂಘ, ಅರಣ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಕೋರ್ಟ್ ಆವರಣದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
    ನೇಸರಗಿ ವಲಯ ಅರಣ್ಯಾಧಿಕಾರಿಗಳಾದ  ಪ್ರಸನ್ನ ಬೆಲ್ಲದ ಮಾತನಾಡಿ ಅರಣ್ಯ ರಕ್ಷಣೆ ಮತ್ತು ಪರಿಸರ ರಕ್ಷಣೆಗೆ ಎಲ್ಲ ಕಡೆಗಳಲ್ಲಿ ಸಸಿ ನೆಡುವ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಕಷ್ಟು ಸಹಕಾರ ನೀಡುತ್ತಿದ್ದು ಇದರ ಸದುಪಯೋಗ ಸಾರ್ವಜನಿಕರು ಉಚಿತ  ಸಸಿಗಳನ್ನು  ಪಡೆದು ನೆಟ್ಟು ಪೊಸಿಸುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.
    ಈ ಸಂದರ್ಭದಲ್ಲಿ ಪ್ರಧಾನ ದಿವಾಣಿ ನ್ಯಾಯಾದೀಶ ಶ್ರೀಮತಿ ರೋಹಿಣಿ ಬಸಾಪುರ, ಸರ್ಕಾರಿ ಅಭಿಯೋಜಕರಾದ ಕುಮಾರಿ ಸರೋಜಿನಿ ಬಟಕುರ್ಕಿನ್ಯಾಯವಾದಿಗಳ ಸಂಘದ ಅಧ್ಯಕ್ಷ ಸಿ ಎಚ್ ಹೊಸಮನಿ, ಸರ್ಕಾರಿ ವಕೀಲ ರಮೇಶ ಕೊಲಕಾರ, ಸರ್ಕಾರಿ ಅಭಿಯೋಜಕ ಗುರುನಾಥ ಶಿರೂರ, ಉಪನ್ಯಾಸಕ ವೀರೇಶ ಅಂಡೋಲಿ, ಉಪ ಅರಣ್ಯ ಅಧಿಕಾರಿ ಸುರೇಶ ನಾಯ್ಕ, ಎನ್ ಎನ್ ಬಡವಣ್ಣವರ, ಶ್ರೀಮತಿ ಬಿ ಬಿ ದಳವಾಯಿ, ಶ್ರೀಮತಿ ಜೆ ಎಸ್ ಕುಲಕರ್ಣಿ, ಅಶೋಕ ಬಿಜಗತ್ತಿ,  ನ್ಯಾಯವಾದಿಗಳ ಸಂಘದ ಸದಸ್ಯರು, ನ್ಯಾಯಾಲಯದ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
  ಇದೆ ಸಂದರ್ಭದಲ್ಲಿ ನೇಸರಗಿ ಕುವೆಂಪು ಮಾದರಿ ಪ್ರಾಥಮಿಕ ಶಾಲೆ, ಮಲ್ಲಾಪುರ ಕೆ ಎನ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ, ದೇಶನೂರ ಪ್ರಾಥಮಿಕ ಶಾಲೆಗಳಲ್ಲಿ ಸಸಿ ನೆಟ್ಟು, ಅನೇಕ ತರಹದ ಸಸಿಗಳನ್ನು ವಿದ್ಯಾರ್ಥಿಗಳಿಗೆ ನೀಡುವದರ ಮುಖಾಂತರ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ನೇಸರಗಿ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷ, ಸದಸ್ಯರು, ವಿದ್ಯಾರ್ಥಿಗಳು, ನೇಸರಗಿ ಭಾಗದ ಮುಖಂಡರು ಭಾಗವಹಿಸಿದ್ದರು.
  

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್