ಮುಖ್ಯಂಶಗಳು:
ಆಧಾರರಹಿತ ಹಗರಣದ ಆರೋಪ ಮಾಡಿ ಮಹೇಶ ಕುಮಠಳ್ಳಿ ತಮ್ಮ ವ್ಯಕ್ತಿತ್ವವನ್ನು ಸಣ್ಣದು ಮಾಡಿಕೊಳ್ಳಬಾರದು
ಅಮ್ಮಾಜೇಶ್ವರಿ ಏತ ನೀರಾವರಿ: ೫೨೪ ಕೋಟಿ ಯೋಜನೆಯಲ್ಲಿ ೭೦೦ ಕೋಟಿ ಹಗರಣವೆನ್ನುವುದು ಹಾಸ್ಯಾಸ್ಪದ
ಶಾಸಕ ಲಕ್ಷ್ಮಣ್ ಸೌದಿ ಅವರ ಅಭಿವೃದ್ಧಿ ಸಹಿಸದೆ ಮಾಜಿ ಶಾಸಕರ ತೇಜೋವಧೆ ಕುತಂತ್ರ: ಅಮೋಘಸಿದ್ದ ಖೊಬ್ರಿ ಕಿಡಿ
ಅಥಣಿ: ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ೫೨೪ ಕೋಟಿ ಅನುದಾನ ಬಂದಿದ್ದು, ಶೇ. ೯೦ ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಹೀಗಿರುವಾಗ ೭೦೦ ಕೋಟಿ ರೂಪಾಯಿ ಹಗರಣವಾಗಿದೆ ಎಂದು ಮಾಜಿ ಶಾಸಕ ಮಹೇಶ ಕುಮಠಳ್ಳಿ ಆರೋಪಿಸುತ್ತಿರುವುದು ಹಾಸ್ಯಾಸ್ಪದ ತೆಲಸಂಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮೋಘಸಿದ್ಧ ಖೊಬ್ರಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಇದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಥಣಿ ಕ್ಷೇತ್ರದಲ್ಲಿ ಶಾಸಕ ಲಕ್ಷ್ಮಣ ಸೌದಿ ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗದೆ ಮಾಜಿ ಶಾಸಕ ಮಹೇಶ ಕುಮಠಳ್ಳಿ ಅವರು ಆಧಾರರಹಿತ ಹಾಗೂ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಸುಳ್ಳು ಆರೋಪಗಳಿಂದ ಜನರನ್ನು ತಾತ್ಕಾಲಿಕವಾಗಿ ದಾರಿ ತಪ್ಪಿಸಬಹುದೇ ಹೊರತು ಸತ್ಯವನ್ನು ಎಂದಿಗೂ ಮರೆಮಾಚಲು ಸಾಧ್ಯವಿಲ್ಲ. ಐದು ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಒಂದೇ ಒಂದು ಪಿಯುಸಿ ಪೈಪ್ ತಂದು ಅಮ್ಮಾಜೇಶ್ವರಿ ಏತ ನೀರಾವರಿ ಕಾಮಗಾರಿ ಪ್ರಾರಂಭಿಸದವರು, ಈಗ ಕೆಲಸಗಳು ಬಿರುಸಿನಿಂದ ಸಾಗಿದ್ದನ್ನು ನೋಡಿ ಹೊಟ್ಟೆಯುರಿ ಪಡುತ್ತಿದ್ದಾರೆ. ಕ್ಷೇತ್ರದಲ್ಲಿ ರಸ್ತೆ, ನೀರು, ವಿದ್ಯುತ್ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲಾ ಮಟ್ಟದಲ್ಲಿ ಆಗಬೇಕಿದ್ದ ಅಭಿವೃದ್ಧಿ ಕಾರ್ಯಗಳು ಅಥಣಿಯಲ್ಲಿ ನಡೆಯುತ್ತಿದ್ದು, ವಿರೋಧ ಪಕ್ಷದವರು ಅಭಿವೃದ್ಧಿಗೆ ಅಡ್ಡಿಪಡಿಸುವ ಕೆಲಸ ನಿಲ್ಲಿಸಬೇಕು" ಎಂದು ಎಚ್ಚರಿಸಿದರು.
ಕೃಷಿ ಹೊಂಡ ರದ್ದು ರೈತರ ನಿರ್ಧಾರ: ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ೫೨೪ ಕೋಟಿ ರೂಪಾಯಿ ಮಾತ್ರ ಅನುದಾನ ಬಂದಿದ್ದು, ಶೇ. ೯೦ ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಹೀಗಿರುವಾಗ ೭೦೦ ಕೋಟಿ ರೂಪಾಯಿ ಹಗರಣವಾಗಿದೆ ಎಂದು ಆರೋಪಿಸುತ್ತಿರುವುದು ಹಾಸ್ಯಾಸ್ಪದ. ಕೃಷಿ ಹೊಂಡ ನಿರ್ಮಿಸುವ ಬದಲಿಗೆ ಪೈಪ್‌ಲೈನ್ ಮೂಲಕವೇ ನೀರು ನೀಡಬೇಕೆಂದು ೨೦೨೩ ರ ಚುನಾವಣೆಯ ನಂತರ ಕಕಮರಿ ಗ್ರಾಮದಲ್ಲಿ ನಡೆದ ರೈತರ ಸಭೆಯಲ್ಲೇ ತೀರ್ಮಾನಿಸಲಾಗಿದೆ. ಯೋಜನೆ ಜಾರಿಗೆ ತರುವ ಮುನ್ನ ಶಾಸಕರು ೩ ಬಾರಿ ಸಭೆ ಕರೆದು ರೈತರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಯೋಜನೆಯಲ್ಲಿ ಯಾವುದೇ ಅಕ್ರಮ ನಡೆದಿದ್ದರೆ ಬೀದಿಯಲ್ಲಿ ನಿಂತು ಜನರನ್ನು ದಾರಿ ತಪ್ಪಿಸುವ ಬದಲು, ಸಂವಿಧಾನಿಕವಾಗಿ ಹೋರಾಟ ಮಾಡಲಿ ಎಂದು ಸವಾಲು ಎಸೆದರು.
ಕರಿಮಸೂತಿ ಯೋಜನೆ ವಿಸ್ತರಣೆ ಮತ್ತು ಕಾಮಗಾರಿ ವಂಚಿಸುವ ಕುತಂತ್ರ ಇವರದ್ದಾಗಿದೆ. ಕರಿಮಸೂತಿ ಏತು ನೀರಾವರಿ ಯೋಜನೆಯಲ್ಲಿ ಬಿಟ್ಟುಹೋಗಿದ್ದ ಹಳ್ಳಿಗಳನ್ನು ಸೇರಿಸಿ, ಒಂದೇ ಒಂದು ಎಕರೆ ಜಮೀನು ನೀರಾವರಿಯಿಂದ ವಂಚಿತವಾಗಬಾರದು ಎಂಬ ದೃಷ್ಟಿಯಿಂದ ಶಾಸಕ ಲಕ್ಷ್ಮಣ್ ಸೌದಿ ಅವರು ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿ ಕಾಮಗಾರಿ ಮುಗಿಸುತ್ತಿದ್ದಾರೆ. ಪ್ರವಾಹ ಹಾಗೂ ಕೋವಿಡ್‌ನಂತಹ ಕಷ್ಟದ ಸಮಯದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಹೋದವರು, ಈಗ ಜನರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಜಿಂಜುರಾಡ್ ಬಳಿ ಒಬ್ಬ ರೈತ ಭೂಮಿ ನೀಡದಿರುವ ಹಿಂದೆ ಯಾರ ಕೈವಾಡವಿದೆ ಎಂಬುದು ಜನರಿಗೆ ಸಂಸೆಯ ಕಾಡುತ್ತಿದೆ. ಸುಳ್ಳು ಆರೋಪಗಳ ಮೂಲಕ ಅಧಿಕಾರಿಗಳನ್ನು ಮಾನಸಿಕವಾಗಿ ಕುಗ್ಗಿಸಿ ಕಾಮಗಾರಿ ತಡೆಯುವ ಕುತಂತ್ರ ಸಾಗಿದರೆ ರೈತರು ಹಾಗೂ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಹಿರಿಯ ಮುಖಂಡರಾದ ಶೇಖರಗೌಡ ನೇಮಗೌಡ, ಸಿದ್ದರಾಯ ಯಲಹಡಗಿ, ಶಿವು ಗುಡ್ಡಪುರ, ಗುರು ಕಾಮನ್, ಶ್ರೀಶೈಲ ಶೆಲ್ಲೆಪ್ಪಗೋಳ, ಶ್ರೀಕಾಂತ ಹತ್ತಿ, ಸಂಗಮೇಶ ಉಂಡೋಡಿ, ರಾಮು ನಿಡೋಣಿ, ಸುರೇಶ ಖೊಳಂಬಿ, ಸಿದ್ದಲಿಂಗ ಮಾದರ, ರಘು ದೊಡ್ಡನಿಂಗಪ್ಪಗೋಳ, ದುಂಡಪ್ಪಾ ದೊಡ್ಡಮನಿ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಐದು ವರ್ಷ ಶಾಸಕರಾಗಿದ್ದ ವೇಳೆ ಅಮ್ಮಾಜೇಶ್ವರಿ ನೀರಾವರಿಗೆ ಒಂದೇ ಒಂದು ಪಿಯುಸಿ ಪೈಪ್‌ನ್ನೂ ತರದವರು, ಕೇವಲ ಕಾಗಕ್ಕಾ ಗುಬ್ಬಕ್ಕಾ ಕಥೆ ಹೇಳುತ್ತಾ ಅವದಿ ಮುಗಿಸಿದವರು. ಈಗ ಮಾತನಾಡುತ್ತಿದ್ದಾರೆ. ಶೇ. ೯೦ರಷ್ಟು ಪೂರ್ಣಗೊಂಡಿರುವ ಸಂದರ್ಭದಲ್ಲಿ ಆಧಾರರಹಿತ ಆರೋಪ ಮಾಡುತ್ತಿರುವುದು ರಾಜಕೀಯ ಪ್ರೇರಿತವಾಗಿದೆ. ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಜನರ ದಿಕ್ಕು ತಪ್ಪಿಸುವ ಪ್ರಯತ್ನವನ್ನು ಬಿಟ್ಟು, ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಬೇಕು.
-ಅಮೋಘಸಿದ್ಧ ಖೊಬ್ರಿ. ಅಧ್ಯಕ್ಷರು, ತೆಲಸಂಗ ಬ್ಲಾಕ್ ಕಾಂಗ್ರೆಸ್
ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ೫೨೪ ಕೋಟಿ ರೂಪಾಯಿ ಅನುದಾನದಲ್ಲಿ ಶೇ. ೯೦ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ೭೦೦ ಕೋಟಿ ರೂಪಾಯಿ ಹಗರಣ ನಡೆದಿದೆ ಎನ್ನುವ ಆರೋಪಗಳು ಸಂಪೂರ್ಣ ಆಧಾರರಹಿತ ಹಾಗೂ ಜನರನ್ನು ಗೊಂದಲಕ್ಕೀಡು ಮಾಡುವ ಪ್ರಯತ್ನವಾಗಿದೆ.
ಶಾಸಕ ಲಕ್ಷ್ಮಣ್ ಸೌದಿ ಅವರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಮಾಜಿ ಶಾಸಕ ಮಹೇಶ್ ಕುಮ್ಟಳ್ಳಿ ಅವರು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಸುಳ್ಳು ಆರೋಪಗಳಿಂದ ಜನರನ್ನು ಕ್ಷಣಿಕವಾಗಿ ದಾರಿ ತಪ್ಪಿಸಬಹುದೇ ಹೊರತು ಸತ್ಯವನ್ನು ಎಂದಿಗೂ ಮರೆಮಾಚಲು ಸಾಧ್ಯವಿಲ್ಲ.
.